ಮುಂಬೈ: ಜಗತ್ತಿನ ಹಲವೆಡೆ ಪತ್ತೆಯಾಗಿ ಬೆರಗು ಮೂಡಿಸಿದ್ದ ನಿಗೂಢ ಏಕಶಿಲೆ ಇದೀಗ ಭಾರತದಲ್ಲೂ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದು, ಮುಂಬೈನ ಉಪನಗರ ಬಾಂದ್ರಾದ ಜಾಗ್ಗರ್ಸ್ ಪಾರ್ಕ್ನಲ್ಲಿ ನಿಗೂಢ ಏಕಶಿಲೆ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಆಸಿಫ್​ ಝಕೆರಿಯಾ ಇಂದು ಬೆಳಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಈ ಮೊದಲು ಗುಜರಾತಿನ ಅಹಮದಾಬಾದ್​ನ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾಗಿದ್ದ ನಿಗೂಢ ಏಕಶಿಲೆ ಇದೀಗ ಮಹಾರಾಷ್ಟ್ರದ ಮುಂಬೈ ನಗರದ ಪಾರ್ಕ್​ವೊಂದರಲ್ಲಿ ಕಾಣಿಸಿಕೊಂಡಿತ್ತು.

ಈಗ ಪತ್ತೆಯಾಗಿರುವ ಏಕಶಿಲೆ ಭಾರತದಲ್ಲಿ ಕಂಡುಬಂದ ಎರಡನೇ ಏಕಶಿಲೆಯಾಗಿದೆ.

ತ್ರಿಕೋನ ಮಾದರಿಯಲ್ಲಿರುವ ಏಕಶಿಲೆಯ ಮೇಲ್ಮೈನಲ್ಲಿ ಕೆಲವು ಸಂಖ್ಯೆಗಳು ಮತ್ತು ಚಿಹ್ನೆಗಳಿವೆ. ಇದೀಗ ನಿಗೂಢವಾಗಿ ಪತ್ತೆಯಾಗಿರುವ ಏಕಶಿಲೆಯ ಮೂಲವನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಏಕಶಿಲೆ ಇದೀಗ ಬಹುನಿರಿಕ್ಷಿತ ವಿಷಯವಾಗಿದ್ದು, ಸೆಲ್ಫಿ ಮತ್ತು ಫೋಟೋ ಕೇಂದ್ರವಾಗಿದೆ.

ಇದೇ ರೀತಿಯ ನಿಗೂಢ ಏಕಶಿಲೆ ಜಗತ್ತಿನಾದ್ಯಂತ ಸುಮಾರು 30ಕ್ಕೂ ಹೆಚ್ಚು ನಗರಗಳಲ್ಲಿ ಪತ್ತೆಯಾಗಿವೆ. ಮೊದಲ ಬಾರಿಗೆ ಅಮೆರಿಕದ ಉತಾಹ್ ಮರೂಭೂಮಿಯಲ್ಲಿ ಪತ್ತೆಯಾಗಿತ್ತು. ರೋಮಾನಿಯಾ, ಫ್ರಾನ್ಸ್​, ಪೋಲೆಂಡ್​, ಯುಕೆ ಮತ್ತು ಕೊಲಂಬಿಯಾ ರಾಷ್ಟ್ರಗಳಲ್ಲಿ ಪತ್ತೆಯಾಗಿವೆ.  

Leave a Reply

Your email address will not be published. Required fields are marked *

You May Also Like

ಚನ್ನೈನಲ್ಲಿ ಕೊರೋನಾ ಕಾಟ

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಒಂದೇ ದಿನ ಬರೋಬ್ಬರಿ 771 ಹೊಸ ಪ್ರಕರಣಗಳು ದಾಖಲಾಗಿವೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 4829ಕ್ಕೆ ಏರಿಕೆಯಾಗಿದೆ.

ನೇಪಾಳದೊಂದಿಗೆ ನಮ್ಮದು ಗಟ್ಟಿ ಸಂಬಂಧ: ಹೈರಾಣಾಗಿರುವ ಭಾರತಕ್ಕೆ ಇದು ಇನ್ನಷ್ಟು ಮುಜುಗರ

ದೆಹಲಿ: ನೇಪಾಳದೊಂದಿಗೆ ನಮ್ಮ ಸಂಬಂಧ ಬಲಿಷ್ಠವಾಗಿದೆ ಎಂದು ಭಾರತೀಯ ಸೇನಾ ಮುಖಸ್ಥ ಎಂ.ಎಂ.ನರವಣೆ ಹೇಳಿದ್ದಾರೆ. ನಾವು…

ಮುಂಬಯಿನ ಶಾಪಿಂಗ್ ಮಾಲ್ ವೊಂದಕ್ಕೆ ಬೆಂಕಿ – ಸಾವಿರಾರು ಜನರ ರಕ್ಷಣೆ!

ಮುಂಬಯಿ : ಇಲ್ಲಿಯ ದಕ್ಷಿಣ ಮುಂಬಯಿನಲ್ಲಿರುವ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮವಾಗಿ ಸಾವಿರಾರು ಜನರನ್ನು ರಕ್ಷಿಸಲಾಗಿದೆ.

ಓರ್ವ ಉಗ್ರನನ್ನು ಬಲಿ ಪಡೆದ ಸೇನೆ

ಜಮ್ಮು ಮತ್ತು ಕಾಶ್ಮೀರದ ಅವಂತಿಪೊರಾದಲ್ಲಿ ಓರ್ವ ಉಗ್ರನನ್ನು ಭಾರತೀಯ ಸೇನೆ ಬಲಿ ಪಡೆದಿದೆ. ಶರ್ಷಾಲಿ ಖ್ರೂ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಮಾಹಿತಿಯ ಮೇರೆಗೆ ಸೇನಾಪಡೆ ಕಾರ್ಯಾಚರಣೆ ನಡೆಸಿತ್ತು..