ಮಹಾನಗರ: ರಾಜ್ಯದ 5 ಜಲಮಾರ್ಗಗಳಲ್ಲಿ ಸರಕು ಸಾಗಾಣಿಕೆ ಮಾಡುವ ಮಹತ್ವದ ಯೋಜನೆಗೆ ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ.

ಒಳನಾಡು ಜಲಸಾರಿಗೆ ಇಲಾಖೆಯ ಸದ್ಯದ ಮಾಹಿತಿ ಪ್ರಕಾರ, ಜಲಮಾರ್ಗದಲ್ಲಿ ಸರಕು ಸಾಗಾಟ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟು ಅದರ ಬದಲು ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಸರಕು ಸಾಗಾಣೆಗೆ ಗುರುಪುರ, ನೇತ್ರಾವತಿ ಸಹಿತ 5 ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎಂಬ ವರದಿಯನ್ನು ಸಂಸ್ಥೆ ನೀಡಿದೆ.

ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರವು ರಾಜ್ಯದಲ್ಲಿ 11 ರಾಷ್ಟ್ರೀಯ ಒಳನಾಡು ಜಲಮಾರ್ಗವನ್ನು ಈಗಾಗಲೇ ಘೋಷಿಸಿದೆ. ಈ 11 ಜಲಮಾರ್ಗಗಳ ಪೈಕಿ 5 ರಾಷ್ಟ್ರೀಯ ಒಳನಾಡು ಜಲಮಾರ್ಗಗಳಾದ ಗುರುಪುರ, ನೇತ್ರಾವತಿ ಸಹಿತ ಕಬಿನಿ, ಕಾಳಿ, ಶರಾವತಿ ನದಿಗಳನ್ನು ಸರಕು ಸಾಗಾಣಿಕೆಗಾಗಿ ಅಭಿವೃದ್ಧಿಪಡಿಸಲು 2016-17ನೇ ಸಾಲಿನಲ್ಲಿ ಇನ್ ಲ್ಯಾಂಡ್ ವಾಟರ್‌ವೆಯ್ಸ ಅಥಾರಿಟಿ ಆಫ್ ಇಂಡಿಯಾ (ಐಡಬ್ಲ್ಯುಎಐ) ವಿಸ್ತೃತ ಯೋಜನ ವರದಿ ಸಲ್ಲಿಸಿದೆ.

ಸರಕು ಸಾಗಾಟ ಯೋಜನೆ ಕೈಬಿಟ್ಟು ಈ ಜಲಮಾರ್ಗಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸರಕಾರ ತಿರ್ಮಾನಿಸಿದೆ. ಇದಕ್ಕೆ ಒಟ್ಟು 59.90 ಕೋ.ರೂ. ವೆಚ್ಚದಲ್ಲಿ ಯೋಜನೆ ರೂಪಿಸಲು ಉದ್ದೇಶಿಸಿದೆ. ಇದನ್ನು ಯಾವ ರೀತಿಯಲ್ಲಿ ಬಳಕೆ ಮಾಡಬಹುದು ಎಂಬ ಕುರಿತ ಅಂತಿಮ ವರದಿ ಇನ್ನಷ್ಟೇ ಆಗಬೇಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿರುವ ಬಜೆಟ್‌ನಲ್ಲಿ ಮಂಗಳೂರು-ಪಣಜಿ ನಡುವೆ ಜಲಮಾರ್ಗಗಳ ಅಭಿವೃದ್ಧಿ ಬಗ್ಗೆ ಉಲ್ಲೇಖೀಸಿದ್ದಾರೆ. ಈ ಮೂಲಕ ಎರಡೂ ನಗರಗಳ ನಡುವೆ ವ್ಯಾಪಾರ ವಹಿವಾಟು ಬೆಳೆಸುವ ಉದ್ದೇಶದ ಬಗ್ಗೆ ಪ್ರಸ್ತಾವಿಸಿದ್ದಾರೆ. ಇದು ಯಾವ ರೀತಿಯಿಂದ ಜಾರಿಯಾಗಲಿದೆ ಎಂಬ ಬಗ್ಗೆ ಸದ್ಯ ಇಲಾಖೆಯಲ್ಲಿ ಮಾಹಿತಿಯಿಲ್ಲ. ಒಂದು ವೇಳೆ ಯೋಜನೆಯು ಸಾಕಾರವಾದರೆ ಕರಾವಳಿಯ ಆರ್ಥಿಕ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಜಗತ್ತಿನಲ್ಲಿ ಮಹಾಮಾರಿಯ ಆಟ ಹೇಗಿದೆ?

ವಾಷಿಂಗ್ಟನ್ : ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಮಹಾಮಾರಿಯ ಅಟ್ಟಹಾಸ ಎಗ್ಗಿಲ್ಲದೆ ಸಾಗುತ್ತಿದೆ. ಸದ್ಯ ಜಗತ್ತಿನಲ್ಲಿ ಬರೋಬ್ಬರಿ 3.95 ಕೋಟಿ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 11,06,705 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಮಹದಾಯಿ ವಿಚಾರ: 4 ವಾರಗಳಲ್ಲಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಆದೇಶ!

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮಲಪ್ರಭಾ ನದಿಗೆ ನೀರು ತಿರುಗಿಸುತ್ತಿದೆ ಎಂದು ಗೋವಾ ರಾಜ್ಯ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗೋವಾ ಮನವಿ ಪರಿಶೀಲಿಸಿ ಇದಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಪರಿಶೀಲನೆ ನಡೆಸಲು ನಾಲ್ಕು ವಾರಗಳಲ್ಲಿ ತಜ್ಞರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಹಳೆಯ ಧಾರಾವಾಹಿಗಳಿಗೆ ಮೊರೆ: ದಾಖಲೆ ಸೇರಿದ ರಾಮಾಯಣ ಧಾರಾವಾಹಿ

ಲಾಕ್ ಡೌನ್ ಹಿನ್ನೆಲೆ ಬಹುತೇಕ ಚಾಲ್ತಿಯಲ್ಲಿರು ಧಾರಾವಾಹಿ ಶೂಟಿಂಗ್ ಕಾರ್ಯ ಕೂಡ ನಿಂತಿದೆ. ಇದರಿಂದಾಗಿ ಡಿಡಿ ವಾಹಿನಿ ಮತ್ತೆ ರಾಮಾಯಣ ಧಾರಾವಾಹಿ ಮರುಪ್ರಸಾರ ಮಾಡಿದ್ದು ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಮೆರೆದಿದೆ.

ಕಿಯೋನಿಕ್ಸ್ ಅಧ್ಯಕ್ಷರಾಗಿ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಆಯ್ಕೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರಿಗೆ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್…