ಗದಗ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2020-21ನೇ ಸಾಲಿನಲ್ಲಿ ಜಿಲ್ಲೆಯ ಶಾಲಾ ಹಾಗೂ ಕಾಲೇಜಿನಲ್ಲಿ ನಾನಾ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ, ಕ್ರ‍್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಪಿ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.

 ಅರ್ಜಿ ಸಲ್ಲಿಸಲು ಮಾ.31 ಕೊನೆಯ ದಿನವಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ http://ssp.karnataka.gov.in ಅಥವಾ http://ssp.karnataka.gov.in/STS/ ಮೆಟ್ರಿಕ್ ನಂತರದ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿವೇತನಕ್ಕೆ https:ssp.postmatric.karnataka.gov.in/ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕ ಪಂಚಾಯತಿ ಆವರಣ, ಮುಂಡರಗಿ ದೂ.ಸಂ. 08371-262911, ಮೌಲಾನಾ ಆಝಾದ ಭವನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ದೂ.ಸಂ 08372-297494, ತಾಲೂಕ ಪಂಚಾಯತಿ ಆವರಣ, ರೋಣ 08381-267258, ನರಗುಂದ ತಹಶೀಲ್ದಾರ ಕಾರ್ಯಾಲಯ ರೂ.ನಂ.20, ದೂ.ಸಂ. 08377-245411, ತಾಲೂಕ ಪಂಚಾಯತ ಹತ್ತಿರ, ಶಿರಹಟ್ಟಿ. 08487-242810 ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ರವಿ. ಎಲ್.ಗುಂಜೀಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಅರಣ್ಯ ಇಲಾಖೆಯ ಕಿರುಕುಳಕ್ಕೆ ಮನನೊಂದು ಶಿಂಗಟರಾಯನಕೆರೆ ತಾಂಡಾದ ಮಹಿಳೆ ಸಾವು

ಗದಗ: ಬಗರಹೂಕುಮ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಾ ಬಂದಿದೆ.ಅದರಲ್ಲೂ ಮುಂಡರಗಿ…

ಸಿಎಂಗೆ ಕೊರೊನಾ ಪಾಸಿಟಿವ್ ದೃಢ!

ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಮೀಸಲಾತಿ ಪಟ್ಟಿ: ಕಾರಜೋಳ ಹೇಳಿಕೆ ಸ್ವಾಗತಿಸಿದ ಇಮ್ಮಡಿ ಶ್ರೀ

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿಲ್ಲ ಹಾಗೂ ಬಿಡುವುದಿಲ್ಲ…

ವಾಲಿಬಾಲ್ ಪಂದ್ಯಾಟ : ಹಳಕಟ್ಟಿ ಶಾಲೆ ಬಾಲಕಿಯರ ತಂಡ ಸಾಧನೆ

ಆಲಮಟ್ಟಿ : ಸ್ಥಳೀಯ ಎಸ್.ವಿ.ವಿ.ಅಸೋಸಿಯೇಷನ್ ಶಿಕ್ಷಣ ಸಂಸ್ಥೆಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ  2022-23…