ನಿಂಗಪ್ಪ ಬಿ. ಮಡಿವಾಳರ

ನರೇಗಲ್: ರಾಜ್ಯದಲ್ಲಿ ಬಡವರ ಆರೋಗ್ಯ ಸಂಜೀವಿನಿ ಎಂದೆ ಹೆಸರು ಪಡೆದಿರುವ ಗದಗ ಜಿಲ್ಲೆಯ ನರೇಗಲ್ ಸಮೀಪದ ನಿಡಗುಂದಿಕೊಪ್ಪ ಗ್ರಾಮದ ಶಾಖಾ ಶಿವಯೋಗಮಂದಿರ ಮಠದ ಜಾತ್ರೆಯೂ ಶುಕ್ರವಾರ, ಶನಿವಾರ ಅದ್ದೂರಿಯಾಗಿ ನಡೆಯಲಿದೆ.

ಈ ಮಠದ ಮಹಾನ್ ತಪಸ್ವಿಗಳು, ಭವರೋಗ ವೈದ್ಯರು ಆಗಿದ್ದ ಲಿಂ.ಶ್ರೀ ಮ,ನಿ.ಪ್ರ ಚನ್ನಬಸವ ಮಹಾಶಿವಯೋಗಿಗಳವರ ದಿವ್ಯ ಪ್ರಕಾಶದಲ್ಲಿ ಗ್ರಾಮೀಣ ಭಾಗದ ಜನರ ಆರೋಗ್ಯದ ಕೇಂದ್ರವಾಗಿತ್ತು. ಎಲ್ಲೆಡೆಯಿಂದ ಜನರು ಯಾವುದೇ ರೋಗದಿಂದ ಬಳಲುತ್ತಿದ್ದರು ಮಠಕ್ಕೆ ಬಂದು ಶ್ರೀಗಳ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಹುಷ್ಯಾರು ಇಲ್ಲ ಎಂದು ಬರುವ ಭಕ್ತರಿಗೆ ಶ್ರೀಗಳು ಗಿಡಮೂಲಿಕೆಗಳಿಂದ ತಯಾರಿಸಿದ ಆರ್ಯುವೇದ ಔಷಧಿಯನ್ನು ಕುಮಾರೇಶ್ವರರ ಹೆಸರನ್ನು ಹಾಗೂ ಹಿರಿಯ ಶ್ರೀಗಳ, ಗುರುಗಳ ಹೆಸರನ್ನು ನೆನೆದು ಭಕ್ತರಿಗೆ ನೀಡುತ್ತಿದ್ದರು. ಅದರಿಂದ ಭಕ್ತರು ಗುಣವಾಗುತ್ತಿದ್ದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಹಾಗಾಗಿ ಈ ಮಠದ ಪರಂಪರೆಯಂತೆ ಅಧ್ಯಾತ್ಮ, ಧಾರ್ಮಿಕ ಹಾಗೂ ಆರೋಗ್ಯಕ್ಕೂ ಮಹತ್ವ ನೀಡಲಾಗಿದೆ.

ಶುಕ್ರವಾರದಿಂದ ಜಾತ್ರೆ ಆರಂಭ 

ನಿಡಗುಂದಿಕೊಪ್ಪ ಗ್ರಾಮದ ಶಾಖಾ ಶಿವಯೋಗಮಂದಿರದಲ್ಲಿ ಮಾರ್ಚ್ 5 ಮತ್ತು 6ಕ್ಕೆ ಹಾನಗಲ್ ಕುಮಾರ ಶಿವಯೋಗಿಗಳ 91ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ನಡೆಯಲಿದೆ. ಮಾರ್ಚ್ 5ಕ್ಕೆ ಬೆಳಗ್ಗೆ 9 ಗಂಟೆಗೆ ನಡೆಯುವ ಷಟಸ್ಥಳ ಧ್ವಜಾರೋಹಣ ನಡೆಯಲಿದೆ.ದಲ್ಲಿ ಹಾಲಕೆರೆಯ ಅಭಿನವ ಅನ್ನದಾನಸ್ವಾಮಿಗಳು, ನಿಡಗುಂದಿಕೊಪ್ಪದ ನಿಯೋಜಿತ ಉತ್ತರಾಧಿಕಾರಿ ಸಿದ್ದರಾಮ ದೇವರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ರೋಣದ ಗುರುಪಾದ ಸ್ವಾಮೀಜಿ, ಯಲಬುರ್ಗಾದ ಬಸವಲಿಂಗ ಶಿವಾಚಾರ್ಯರು, ಧಾರವಾಡದ ಶಿವಬಸವ ದೇವರು, ಮಾಜಿ ಶಾಸಕ ಜಿ.ಎಸ್. ಪಾಟೀಲ, ಜಿ.ಪಂ. ಅಧ್ಯಕ್ಷ ವೀರಣ್ಣ ನಾಲ್ವಾಡದ, ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ ಪಾಲ್ಗೊಳ್ಳಲಿದ್ದಾರೆ

ಭಕ್ತರ ಸರ್ವತೋಮುಖ ಅಭಿವೃದ್ಧಿ, ಸರಿಯಾದ ಮಾರ್ಗದರ್ಶನ, ಕೃಷಿ ತರಬೇತಿ, ಉತ್ತಮ ಸಂಸ್ಕಾರ ನೀಡುವುದು ಈ ಮಠದ ವಿಶೇಷಗಳಾಗಿವೆ. ಆದ್ದರಿಂದ ಇದು ಭಕ್ತರ ನೆಚ್ಚಿನ ಮಠವಾಗಿದೆ. ಈ ಮಠದ ಅಭಿವೃದ್ದಿಗೆ ಲಿಂ. ಶ್ರೀ ಮ.ನಿ.ಪ್ರ ಚನ್ನಬಸವ ಮಹಾಶಿವಯೋಗಿಗಳವರ ಕೊಡುಗೆ ಅಪಾರವಿದೆ.

ಶ್ರೀಮಠವು 1914 ರಲ್ಲಿ ಪ್ರಾರಂಭವಾಗಿ ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ. ಆರೋಗ್ಯ, ಸಂಗೀತ, ಅನ್ನ ದಾಸೋಹದಂತ ಹಲವು ಕೆಲಸಗಳನ್ನು ಮಾಡುತ್ತಾ ಸಾಗಿದೆ, ಈ ಹಿಂದೆ ಮಠದಲ್ಲಿ ಲಿಂ,ಶ್ರೀ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ವತಿಯಿಂದ ಹಾಗೂ ಅವರ ಮಠದ ವತಿಯಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನರನ್ನು ಜಾಗೃತಿ ಮಾಡುವ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದವು ಎಂದು ಜನರು ನೆನೆಯುತ್ತಾರೆ.

ಆರೋಗ್ಯ ದಾಸೋಹದ ಜೊತೆಗೆ ಅನ್ನದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬಂದ ಕಿರ್ತಿ ಶ್ರೀಮಠಕ್ಕೆ ಸಲ್ಲುತ್ತದೆ. ಇದು ಹೀಗೆ ಮುಂದೊರೆಯಲಿದೆ.

-ಶ್ರೀ ಸಿದ್ದರಾಮ ದೇವರು, ಶ್ರೀಮಠದ ನಿಯೋಜಿತ ಉತ್ತರಾಧಿಕಾರಿಗಳು

ಅನ್ನ ದಾಸೋಹ 1914ರಲ್ಲಿ ಶ್ರೀಮಠ ಆರಂಭವಾದಾಗಿನಿಂದ ಅನ್ನ ಹಾಗೂ ಆರೋಗ್ಯ ದಾಸೋಹದ ಜೊತೆ, ಜೊತೆಯಲ್ಲಿ ನಡೆದುಕೊಂಡು ಬಂದಿದೆ. ಅಷ್ಟೆ ಅಲ್ಲದೆ ಮಠದ ಆವರಣದಲ್ಲಿ ವಿಧದ ಜಾತಿ ಹಲವು ಔಷಧೀಯ ಸಸ್ಯಗಳನ್ನು ಬೆಳೆಯಲಾಗಿದೆ ಈ ಸಸ್ಯಗಳಿಂದ ಆರ್ಯುವೇದ ಔಷಧ ತಯಾರಿಸಿ ಬಡವರಿಗೆ ಕೊಡಲಾಗುತ್ತದೆ. ಮಠದಲ್ಲಿ ಗೋವುಗಳನ್ನು ಸಾಕಲಾಗಿದೆ. ಈಗಿನ ಶ್ರೀಗಳಾದ ಶ್ರೀ ಸಿದ್ದರಾಮ ದೇವರು ಬೆಳಿಗ್ಗೆ ಎದ್ದು ಗೋವಿನ ಸೇವೆ ಮಾಡುತ್ತಾರೆ. ಇದು ಧರ್ಮ, ಸಂಸ್ಕೃತಿ, ಆರೋಗ್ಯದ ಕಾಳಜಿಯನ್ನು ವಹಿಸುವ ಶ್ರೀಗಳ ಮನಸ್ಸು ಹಾಗೂ ಮಠದ ಕಾಳಜಿಯನ್ನು ತೋರಿಸುತ್ತದೆ.

ಗೋ ಹತ್ಯೆ ತಡೆಯಬೇಕು ಹಾಗೂ ಗೋ ಹತ್ಯೆ ನಿಷೇಧ ಮಾಡಬೇಕು ಎಂದು ಶ್ರೀಮಠದಲ್ಲಿ ಗೋ ಶಾಲೆಯನ್ನು ತೆರೆದು ಗೋಗಳ ಪಾಲನೆ ಮಾಡುವ ಮೂಲಕ ಹೇಳುತ್ತಿರುವುದು ಶ್ಲಾಘನೀಯವಾಗಿದೆ ಎಂದು ಗ್ರಾಮದ ಹಿರಿಯ ಬಸಪ್ಪ ತಿಳಿಸಿದರು. ಸಮುದಾಯ ಭವನ, ಪ್ರಸಾದ ನಿಲಯ ಇನ್ನೂ ಹಲವಾರು ಅಭಿವೃದ್ಧಿ ಪಥದತ್ತ ಮಠವು ಸಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ದೇವಿ ಪುರಾಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ

ಕೋವಿಡ್-19 ಹಿನ್ನಲೆಯಲ್ಲಿ ದೇವಿಯ ಪುರಾಣ ಸರಳವಾಗಿ ಆರಚಣೆ ಮಾಡಲಾಗುತ್ತಿದೆ. ಪುರಾಣಕ್ಕೆ ಆಗಮಿಸುವ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಗಚ್ಚಿನಮಠದ ವರರುದ್ರಮುನಿ ಶಿವಚಾರ್ಯ ಸ್ವಾಮೀಜಿ ಹೇಳಿದರು.

ರಾಜ್ಯ ಕ.ಸಾ.ಪ ಕಾರ್ಯಕಾರಿ ಸಮಿತಿಗೆ ನೇಮಕ.

ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ,…

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ: ದಲಿತ ಪರ ನಾನಾ ಸಂಘಟನೆಗಳಿಂದ ನಿಡಗುಂದಿಯಲ್ಲಿ ಭಾರೀ ಪ್ರತಿಭಟನೆ

ನಿಡಗುಂದಿ: ಸಂವಿಧಾನ ಕರ್ತೃ ಡಾ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿರುವ ರಾಯಚೂರ ಜಿಲ್ಲಾ…

ಯಲಬುರ್ಗಾ ಗೋರ ಸೇನಾ ತಾಲೂಕಾಧ್ಯಕ್ಷ ಪರಶುರಾಮ ನಾಯಕ ನಿಧನ

ಉತ್ತರಪ್ರಭ ಸುದ್ದಿಗದಗ: ಯಲಬುರ್ಗಾ ಗೋರ ಸೇನಾ ತಾಲೂಕಾಧ್ಯಕ್ಷ ಪರಶುರಾಮ ನಿಧನ. ಪರಸುರಾಮ ನಾಯಕ ಕೊಪ್ಪಳ ಜಿಲ್ಲೆಯ…