ನವದೆಹಲಿ: ದೇಶದಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಆಧಾರ್ ಸೌಲಭ್ಯವನ್ನು ಒದಗಿಸಲಾಗಿದೆ.

ಯುಐಡಿಎಐ ಈ ಕುರಿತಾಗಿ ಮಾಹಿತಿ ನೀಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಆ ಮಗುವಿನ ತಂದೆ ಅಥವಾ ತಾಯಿಯಲ್ಲಿ ಒಬ್ಬರ(ಮಗುವಿನ ಬದಲು) ದೃಢೀಕರಣ ನೀಡಬೇಕು. ಈ ಮಕ್ಕಳಿಗೆ ಬಯೋಮೆಟ್ರಿಕ್ ಇರುವುದಿಲ್ಲ. ಹೀಗಾಗಿ ಮಗುವಿನ ಪೋಷಕರಲ್ಲಿ ಒಬ್ಬರು ದಾಖಲಾತಿಯಲ್ಲಿ ಸಹಿ ಮಾಡಬೇಕಿದೆ.

ಪ್ರತಿಯೊಬ್ಬರೂ ಆಧಾರ್ ಗೆ ದಾಖಲಾಗಬೇಕು ಎಂದು ಯುಐಡಿಎಐ ಟ್ವೀಟ್ ಮಾಡಿದೆ. ನವಜಾತ ಶಿಶುವನ್ನು ಸಹ ಆಧಾರ್ ಗೆ ದಾಖಲಿಸಬಹುದು. ಜನನ ಪ್ರಮಾಣ ಪತ್ರದೊಂದಿಗೆ ಪೋಷಕರಲ್ಲಿ ಒಬ್ಬರ ಆಧಾರ್ ನೀಡಬೇಕು. ಒಂದು ದಿನದಿಂದ ಐದು ವರ್ಷಗಳವರೆಗೆ ಮಗುವಿನ ಬಯೋಮೆಟ್ರಿಕ್ ಡೇಟಾವನ್ನು ಪಡೆಯುವುದಿಲ್ಲ.

ಐದು ವರ್ಷಗಳಾದ ನಂತರ ಅದನ್ನು ನವೀಕರಿಸಬಹುದಾಗಿದೆ. ಒಂದು ದಿನದ ಮಗುವಿಗೆ ಆಧಾರ್ ಪಡೆಯಲು ಮಗುವಿನ ಜನನ ಪ್ರಮಾಣ ಪತ್ರ ಮತ್ತು ಪೋಷಕರೊಬ್ಬರ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ ಸಹಾಯದಿಂದ ಸುಲಭವಾಗಿ ಮಗುವಿನ ಆಧಾರ್ ಕಾರ್ಡ್ ಮಾಡಿಸಬಹುದಾಗಿದೆ.

ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ಆಧಾರ್ ಕಾರ್ಡ್ ನೋಂದಣಿಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಮಗುವಿನ ಹೆಸರು, ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸವನ್ನು ಭರ್ತಿ ಮಾಡಿ. ನಂತರ, ನೀವು ಆಧಾರ್ ಕಾರ್ಡ್ ಕೇಂದ್ರಕ್ಕೆ ಅಪಾಯಿಂಟ್ಮೆAಟ್ ಪಡೆಯುತ್ತೀರಿ. ನೀವು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಿಗದಿತ ದಿನ ಮತ್ತು ಸಮಯದ ಮೇಲೆ ಆಧಾರ್ ದಾಖಲಾತಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.

Leave a Reply

Your email address will not be published. Required fields are marked *

You May Also Like

ಕೊರೊನಾದಂತಹ ಗಂಡಾಂತರಗಳು ಇನ್ನೂ ಇವೆಯಂತೆ!

ಬೆಂಗಳೂರು : ಐದು ವರ್ಷಗಳ ಹಿಂದೆಯೇ ಕೊರೊನಾ ವೈರಸ್ ನಂತಹ ಗಂಡಾಂತರದ ಬಗ್ಗೆ ಎಚ್ಚರಿಕೆ ನೀಡಿದ್ದ ಉದ್ಯಮಿ ಬಿಲ್ ಗೇಟ್ಸ್ ಈಗ ಮತ್ತೆ ಎರಡು ಗಂಡಾಂತರಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಅನಾರೋಗ್ಯ ಹಿನ್ನೆಲೆ ಬಾಲಿವುಡ್ ನಟ ರಿಷಿ ಕಪೂರ್ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.ಈ ಕುರಿತು ರಿಷಿ ಅವರ ಸಹೋದರ ರಣಧೀರ್ ಕಪೂರ್ ತಿಳಿಸಿದ್ದಾರೆ.

ಮೋದಿ ವಿರುದ್ಧ ಗುಡುಗಿರುವ ಮಾಜಿ ಪ್ರಧಾನಿ!

ನವದೆಹಲಿ : ಚೀನಾ ಸಂಘರ್ಷದ ಕುರಿತು ಮಾತನಾಡಿರುವ ಪ್ರಧಾನಿ ತಾವು ಆಡುವ ಮಾತುಗಳ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ತಮ್ಮ ಸ್ಥಾನದ ಸಮರ್ಥನೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾರು ಆಯ್ಕೆ..?

ಆಂಧ್ರವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ,…