ಮುಳಗುಂದ : ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 162 ನೇ ಸ್ಮರಣೋತ್ಸವದಂಗವಾಗಿ ಇದೇ ಫೆ 24 ರಿಂದ 26 ವರೆಗೆ  ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ ನೇತ್ರತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ, ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ನೀಲಗುಂದ ಹೇಳಿದರು.

     ಈ ಕುರಿತು ಶ್ರೀಮಠದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಸಂಕಷ್ಟದ ನಡುವೆಯೂ ಭಕ್ತರ ಒತ್ತಾಸೆಯಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಫೆ. 24ರಂದು ಬೆ.8-30ಕ್ಕೆ ಜನವಾಡ ಅಲ್ಲಮಪ್ರಭುದೇವರ ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ಸಮ್ಮುಖ ವಹಿಸುವರು.

     ಫೆ. 25ರಂದು ಮಧ್ಯಾಹ್ನ 1 ಗಂಟೆಗೆ ಮಹಾದಾಸೋಹ, ಸಾಯಂಕಾಲ 5 ಘಂಟೆಗೆ ಸಕಲ ವಾಧ್ಯ ಮೇಳಗಳೊಂದಿಗೆ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯಲಿದೆ.

     ಸಾಯಂಕಾಲ 7 ಘಂಟೆಗೆ ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ರದುರ್ಗ ಬೃಹನ್ಮಠ, ಬಸವಕೇಂದ್ರದ ಡಾ. ಶಿವಮೂರ್ತಿ ಮುರುಘಾ ಶರಣರು, ಉಪ್ಪಿನ ಬೆಟಗೇರಿ ವಿರಕ್ತ ಮಠದ ಕುಮಾರ ವಿರುಪಾಕ್ಷ ಸ್ವಾಮಿಜಿ, ಸಮ್ಮುಖವನ್ನು ಯರನಾಳ ವಿರಕ್ತ ಮಠದ ಸಂಗನಬಸವ ಸ್ವಾಮಿಜಿ, ಅಧ್ಯಕ್ಷತೆಯನ್ನು ಸಿ.ಬಿ. ಬಡ್ನಿ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಎಚ್.ಕೆ. ಪಾಟೀಲ ನೆರವೇರಿಸುವರು. ಅತಿಥಿಗಳಾಗಿ ಶಿವಕುಮಾರ ಉದಾಸಿ, ಆರ್.ಎನ್. ದೇಶಪಾಂಡೆ ಭಾಗವಹಿಸುವರು. ಶರಣರು ಕಟ್ಟಿಕೊಟ್ಟ ಬದುಕು ವಿಷಯ ಕುರಿತು ವಾಯ್.ಎಂ. ಯಾಕೊಳ್ಳಿ ಅವರಿಂದ ಉಪನ್ಯಾಸ, ರೇವಣ ಸಿದ್ಧಯ್ಯ ಮರಿದೇವರಮಠ, ಜಯಮ್ಮ ದಾನಮ್ಮನವರ ಅವರಿಂದ ವಚನ ಸಂಗೀತ ಜರುಗುವದು.

     ಫೆ. 26ರಂದು ಸಾಯಂಕಾಲ 5 ಘಂಟೆಗೆ ಮಲ್ಲಿಕಾರ್ಜುನ ಶ್ರೀಗಳಿಂದ ಕಡುಬಿನ ಕಾಳಗ, ಸಾಯಂಕಾಲ 7 ಘಂಟೆಗೆ ಜಾತ್ರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಸಾನಿಧ್ಯವನ್ನು ಶಿರಹಟ್ಟಿ ಸಂಸ್ಥಾನಮಠದ ಜ. ಫಕೀರಸಿದ್ಧರಾಮ ಸ್ವಾಮಿಜಿ, ಅತಿಥಿಗಳಾಗಿ ಎಸ್.ವ್ಹಿ. ಸಂಕನೂರ, ಡಿ.ಆರ್. ಪಾಟೀಲ, ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ ಭಾಗವಹಿಸುವರು.

     ನೀಲಗುಂದ ಜೈಭೀಮ ಗೀ ಗೀ ಜಾನಪದ ಮೇಳದಿಂದ ಜಾನಪದ ಕಾರ್ಯಕ್ರಮ, ಮುತ್ತು ನಾಯ್ಕರ ಕಲಾತಂಡದಿಂದ ರಸಮಂಜರಿ, ಜೀವನಸಾಬ ಬಿನ್ನಾಳ, ಶರಣು ಕುರ್ನಾಳ ಅವರಿಂದ ಹಾಸ್ಯ, ಖಾಸೀಮ ಅಲಿ, ಮನು ಪಾಟೀಲ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗುವವು ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ಡಾ. ಎಸ್.ಸಿ. ಚವಡಿ, ಷಣ್ಮುಖಪ್ಪ ಬಡ್ನಿ, ರಾಮಣ್ಣಾ ಕಮಾಜಿ ಬಸವರಾಜ ಹಾರೋಗೇರಿ, ಡಿ.ಎಸ್. ನೀಲಗುಂದ, ಡಿ.ಎಂ ನಿಂಗಪ್ಪನವರ,ನಾಗಪ್ಪ ಬಾಳಿಕಾಯಿ, ಗುರುಶಾಂತ ಮಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ವಿಜಯ ನಗರ ಶುಗರ್ಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೊಲೆ!

ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸೆಕ್ಯೂರಿಟಿ ಗಾರ್ಡ್ ನನ್ನು ಕೊಲೆ ಮಾಡಿದ ಘಟನೆ ತಡರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರೈತರಿಂದ ತರಾಟೆಗೆ

ಎನ್ ಆರ್ ಬಿ ಸಿ 5ಎ ನಾಲಾ ಯೋಜನೆ ಜಾರಿಗಾಗಿ ಕಳೆದ 9 ದಿನಗಳಿಂದ ಪಾಮನಕೆಲ್ಲೂರಿನಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ರೈತರು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.

ಮಾಗಡಿ : ಗ್ರಾಪಂ ಮಾಜಿ ಸದಸ್ಯರ ಬಣವಿಗೆ ಬೆಂಕಿ..!

ತಾಲೂಕಿನ ಮಾಗಡಿ ಗ್ರಾಪಂ ವ್ಯಾಪ್ತಿಯ ಪರಸಾಪೂರ (ವಾರ್ಡ ನಂ:6) ಗ್ರಾಮದಲ್ಲಿ ಶೇಂಗಾ ಬಣವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಮಾಜಿ ಗ್ರಾಪಂ ಸದಸ್ಯ ಬಸಪ್ಪ ಬೇರಗಣ್ಣವರ ಸದ್ಯ ನಡೆಯುತ್ತಿರುವ ಚುನಾವಣೆಗೆ ಅವರ ಮಗ‌ನನ್ನು ಕಣಕ್ಕೆ ಇಳಿಸಿದ್ದರು.