ಮುಳಗುಂದ : ಪಟ್ಟಣದ ಕಲ್ಲೂರ ರಸ್ತೆಗೆ ಹೊಂದಿಕೊAಡ ಪಟ್ಟಣಶೆಟ್ಟಿ ಕೆರೆ ಈಗ ಅಭಿವೃದ್ದಿಗೊಂಡಿದ್ದು ಕಡಿಮೆ ವೆಚ್ಚದಲ್ಲಿ ಬೃಹತ್ ಕೆರೆ ನಿರ್ಮಿಸಿದ ಅಭಿವೃದ್ದಿ ಸಮಿತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

     ರಿ.ಸ.ನಂ 572 ರಲ್ಲಿರುವ 6 ಎಕರೆ 3 ಗುಂಟೆ ಪಟ್ಟಣಶೆಟ್ಟಿ ಕೆರೆ ಸಾಕಷ್ಟು ಒತ್ತುವರಿಯಾಗಿ ಕೆರೆ ಅಂಗಳವೆ ಮಾಯವಾಗಿತ್ತು. ಸುತ್ತಲು ಜಾಲಿಬೆಳೆದು, ಹೂಳು ತುಂಬಿಕೊAಡಿತ್ತು. ಹಸಿರು ನ್ಯಾಯಾಧಿಕರಣ ಹಾಗೂ ಕೆರೆ ಅಭಿವೃದ್ದಿ ಪ್ರಾಧಿಕಾರದ ಆದೇಶದನ್ವಯ 2019 ರಲ್ಲಿ ಸ್ಥಳೀಯ ಪ.ಪಂ ಯಿಂದ ಸರ್ವೇ ನಡೆಸಿ ಅಂದಾಜು 2 ಎಕರೆ ಒತ್ತುವರಿ ಜಾಗವನ್ನ ತೆರವುಗೊಳಿಸಿ ಗಡಿ ಗುರುತಿಸಿದರು. ನಂತರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ನಮ್ಮ ಗ್ರಾಮ ನಮ್ಮ ಕೆರೆ ಯೋಜನೆ ಅಡಿ, ಕೆರೆ ಅಭಿವೃದ್ದಿ ಸಮಿತಿ ಹಾಗೂ ಪ.ಪಂ ಸಹಯೋಗದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಸಸತ 1 ತಿಂಗಳ ಬಳಿಕ ಕೆರೆ ಚಿತ್ರಣವೇ ಬದಲಾಗಿದೆ. ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಸುತ್ತಲು 10 ಅಡಿ ಎತ್ತರದ ಏರಿ ಹಾಕಿದೆ. ಮೊದಲಿಗಿಂತ ನೀರಿನ ಸಂಗ್ರಹ ಮಟ್ಟವನ್ನ ಹತ್ತುಪಟ್ಟು ಹೆಚ್ಚಿಸಲಾಗಿದೆ. ಕೆರೆಯ ಸುತ್ತಲು ವಾಯು ವಿಹಾರಕ್ಕೆ ಅನುಕೂಲವಾಗುಂತೆ ರಸ್ತೆ ನಿರ್ಮಿಸಲಾಗಿದೆ.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ಸಹಾಯದಿಂದ ನಮ್ಮೂರ ಕೆರೆಗೆ ಮರುಜೀವ ಬಂದತ್ತಾಗಿದೆ. ಕೆರೆ ಹೂಳೆತ್ತುವ ವೇಳೆ ಬಂದ ಮಣ್ಣನ್ನ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಫಲವತ್ತಾದ ಮಣ್ಣನ್ನ ಹೊಲಗಳಿಗೆ ಬಳಸಿಕೊಳ್ಳಲಾಗಿದೆ. ಕೆರೆಗೆ ಹರಿದು ಬರುವ ನೀರಿನ ಮೂಲವನ್ನ ಅಭಿವೃದ್ದಿ ಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಇನ್ನಷ್ಟು ಅನುದಾನದ ಕೊರತೆ ಇದ್ದು, ಜಿಲ್ಲಾಡಳಿತ ಯೋಜನೆ ರೂಪಿಸಿದರೆ ಅದುಕೂಡಾ ಸಾಕಾರವಾಗಲಿದೆ ಎಂದು ಕೆರೆ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ವಿಜಯ ನೀಲಗುಂದ ಹೇಳಿದರು.

ಕೆರೆಗಳ ರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಇದರಿಂದ ಅಂತರ್ಜಲ ವೃದ್ದಿ, ಹಸಿರು ಪರಿಸರ ಅಭಿವೃದ್ದಿಪಡಿಸಲು ಸಾಧ್ಯವಾಗುತ್ತಿದೆ. ಈ ದೆಸೆಯಲ್ಲಿ ಪಟ್ಟಣದಲ್ಲಿ  ಪಟ್ಟಣದ ಎಲ್ಲ ಕೆರೆಗಳ  ಸರವೇ ನಡೆಸಿ ಒತ್ತುವರಿ ತೆರುವು ಮಾಡಿ ಗಡಿ ಗುರುತಿಸಲಾಗಿದೆ. ಪಟ್ಟಣಶೆಟ್ಟಿ ಕೆರೆ ಧರ್ಮಸ್ಥಳ ಗ್ರಾಮಾಬೀವೃದ್ದಿ ಸಹಾಯಧನದಿಂದ ಅಭಿವೃದ್ದಿ ಮಾಡಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಎಂ.ಎಸ್.ಬೆAತೂರ ತಿಳಿಸಿದರು.

ಕೆರೆ ಅಭಿವೃದ್ದಿ ಸಮಿತಿ ಸದಸ್ಯರಾದ ರಾಮಣ್ಣ ಕಮಾಜಿ, ಅಶೋಕ ಹುಣಸಿಮರದ, ಎನ್.ಆರ್.ದೇಶಪಾಂಡೆ, ಕೋರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಗದಗ ನಗರಸಭಾ ಚುನಾವಣೆ ವಾಡ್೯ಗಳ ಮತದಾನ ಶೇಕಡಾವಾರು ಫಲಿತಾಂಶ

ವಾರ್ಡ್ ನಂ. 1 – 62.77 %ವಾರ್ಡ್ ನಂ. 2 – 57.64 %ವಾರ್ಡ್ ನಂ.…

ಜನಪದ ಜನರ ಜೀವನಾಡಿ; ಜನಪದ ಕಲಾವಿದರಿಗೆ ಹೆಚ್ಚಿನ ಗೌರವಗಳು ಸಿಗಬೇಕು: ರವಿಕಾಂತ ಅಂಗಡಿ

ಉತ್ತರಪ್ರಭ ಸುದ್ದಿಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಗದಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ,…

ಗದಗ ಜಿಲ್ಲೆ ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ

ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲ ಸದಸ್ಯರು ಇ-ಕೆವೈಸಿ ಸಂಗ್ರಹಣೆ ಮಾಡುವ ಕಾರ್ಯವು ಪ್ರತಿ ತಿಂಗಳ 1 ರಿಂದ 10ನೇ ದಿನಾಂಕದವರೆಗೆ ಮಾತ್ರ ಆಯಾ ಸ್ಥಳೀಯ ನ್ಯಾಯಬೆಲೆ ಅಂಗಡಿಯಲ್ಲಿ ಚಾಲ್ತಿಯಲ್ಲಿರುತ್ತದೆ.