ಬೆಂಗಳೂರು : ಈ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಹೊರಟಿರುವಂತ ರಾಜ್ಯ ಸರ್ಕಾರ, ಕಾಯ್ದೆಯ ತಿದ್ದುಪಡಿಗೂ ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ. ಒಂದು ವೇಳ ತಿದ್ದುಪಡಿಯಾಗಿ, ಜಾರಿಗೆ ಬಂದ್ರೆ, ಬಲವಂತವಾಗಿ ಸಾಲ ವಸೂಲಾತಿಗೆ ಬ್ರೇಕ್ ಬೀಳಲಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಬಲವಂತದಿಂದ ಸಾಲ ವಸೂಲಿ ಮಾಡುವ ಲೇವಾದೇವಿದಾರರಿಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ಬಲವಂತದ ಸಾಲ ವಸೂಲಾತಿಯಿಂದಾಗಿ ಮಾನಸಿಕವಾಗಿ ನೊಂದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸಾಲ ಕೊಟ್ಟು ಹೆಚ್ಚಿನ ಬಡ್ಡಿಗಾಗಿ ಕಿರುಕುಳ ನೀಡಿ, ಬಲವಂತವಾಗಿ ಸಾಲ ವಸೂಲಿ ಮಾಡುವುದನ್ನು ನಿಯಂತ್ರಿಸುವ ಸಂಬಂಧ ಕರ್ನಾಟಕ ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಈ ಕುರಿತು ಮಾಹಿತಿ ನೀಡಿದ್ದು, ಕರ್ನಾಟಕ ಮನಿ ಲಾಂಡರಿಂಗ್ ಕಾಯ್ದೆ ಕಲಂ 38 ಮತ್ತು 39ಗಳಿಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಕಾಯ್ದೆ ತಿದ್ದುಪಡಿಯಾದರೆ, ಒತ್ತಾಯಪೂರ್ವಕವಾಗಿ ಸಾಲ ಮತ್ತು ಬಡ್ಡಿ ವಸೂಲಿಗೆ 6 ತಿಂಗಳು ಶಿಕ್ಷೆ ವಿಧಿಸಲಾಗುತ್ತಿತ್ತು. ಅದನ್ನು 1 ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ. 2ನೇ ಅಪರಾಧಕ್ಕೆ 2 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. 5 ಸಾವಿರ ದಂಡವನ್ನು 50 ಸಾವಿರ ರೂಗಳಿಗೂ ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆ

ಗದಗ: ನಗರದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆಯಾಗಿದ್ದು. ಪ್ರತಿಷ್ಠಿತ ಬಹುರಾಷ್ಟಿಯ…

ವಿಷಕಾರಿ ಹಾವು ಕಚ್ಚಿ ವ್ಯಕ್ತಿ ಸಾವು

ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಚ್ಚಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಲಕ್ಷ್ಮೇಶ್ವರ ಬಳಿ ಟ್ರ್ಯಾಕ್ಟರ್ ಪಲ್ಟಿ: ಸ್ಥಳದಲ್ಲಿಯೇ ಇಬ್ಬರ ಸಾವು

ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಏಳು ಜನ ಗಾಯ‌ಗೊಂಡ ಘಟನೆ ಲಕ್ಷೇಶ್ವರ ತಾಲೂಕಿನ ಗುಂಜಳ ರಸ್ತೆಯಲ್ಲಿ ನಡೆದಿದೆ.

ರಾಜ್ಯದಲ್ಲಿಂದು 7330 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 7330 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 271876 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.