ಮೊಮ್ಮಗನ ಚಿತ್ರ ನೋಡಿದ ಅಜ್ಜಿ ಫುಲ್ ಖುಷ್
ತ್ರಿಭಾಷೆಯಲ್ಲಿ ಬಿಡುಗಡೆಯಾದ ಪೊಗರು ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶುಕ್ರವಾರ ತೆರೆಕಂಡ ಪೊಗರು ಶಿವನಿಗೆ ಅಭಮಾನಿಗಳು ಫಿದಾ ಆಗಿದ್ದಾರೆ. ಬೆಳಿಗ್ಗೆಯಿಂದಲೇ ಚಿತ್ರ ಮಂದಿರಗಳು ಹೌಸ್ಫುಲ್ ಆಗಿದ್ದು, ಈ ಮೂಲಕ ಪೊಗರು ಗ್ರ್ಯಾಮಡ್ ಎಂಟ್ರಿ ಕೊಟ್ಟಂತಾಗಿದೆ.
ನಂದ ಕಿಶೋರ್ ನಿರ್ದೇಶನದ ಸಿನಿಮಾ ಪೊಗರು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ನೋಡಲು ಜನರು ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಸಾಕಷ್ಟು ಮಲ್ಟಿಪ್ಲೆಕ್ಸ್ ಗಳಲ್ಲಿ ಈ ಸಿನಿಮಾಗೆ ದಿನಕ್ಕೆ 18 ಶೋಗಳನ್ನು ನೀಡಲಾಗಿದೆ. ಅದರಲ್ಲೂ ಬಹುತೇಕ ಶೋಗಳು ಈಗಾಗಲೇ ಹೌಸ್ಫುಲ್ ಆಗಿದೆ.
800 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೊಗರು ಸಿನಿಮಾ ಬಿಡುಗಡೆಯಾಗಿದೆ. ಅಭಿಮಾನಿಗಳು ಧ್ರುವ ಸರ್ಜಾ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ನಂತರ ಆರತಿ ಮಾಡಿ ಸಂಭ್ರಮಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪೊಗರು ಚಿತ್ರ. ಬರೋಬ್ಬರಿ ಮೂರು ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಧ್ರುವ ಈ ಸಿನಿಮಾದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.
ಕೊರೊನಾ ದಿಂದಾಗಿ ಚಿತ್ರ ಮಂದಿರಗಳು ಬಂದ್ ಆಗಿದ್ದವು. ಲಾಕ್ ಡೌನ್ ತೆರವಾದ ಮೇಲೂ ಚಿತ್ರ ಮಂದಿರ ರಂಭಕ್ಕೆ ಅನುಮತಿ ಇರಲಿಲ್ಲ. ಇದರಿಂದ ಸಿನಿಪ್ರೀಯರು ಸಿನಿಮಾ ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು. ಈ ಮದ್ಯೆ ಪೊಗರು ಸಿನಿಮಾ ರಿಲೀಸ್ ಆಗಿ ಸ್ಯಾಂಡಲ್ ವಿಡ್ ನಲ್ಲಿ ಸದ್ದು ಮಾಡುವಂತಾಗಿದೆ.
ಇನ್ನು ಒಂದು ವರ್ಷದ ಬಳಿಕ ಮುಂಜಾನೆ ಶೋ ಹೌಸ್ ಫುಲ್ ಆಗಿರುವುದು ಕೂಡ ಖುಷಿಯ ವಿಚಾರ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ನೋಡಲು ಜನರು ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಇನ್ನು ಮಾಗಡಿ ರಸ್ತೆಯ ಪ್ರಸನ್ನ ಚಿತ್ರ ಮಂದಿರದಲ್ಲಿ ನಟ ಧ್ರುವ ಸರ್ಜ ಅಜ್ಜಿ ಮೊಮ್ಮಗನ ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You May Also Like

ಸಸ್ಯ ಪ್ರೇಮ ನಿತ್ಯ ಮೂಡಲಿ-ಶಿವಾನಂದ ಪಟ್ಟಣಶೆಟ್ಟರ

ವರದಿ : ಗುಲಾಬಚಂದ ಜಾಧವಆಲಮಟ್ಟಿ: ಸಕಲ ಜೀವ ಸಂಕುಲಗಳಿಗೆ ಪ್ರಕೃತಿ ಮಾತೆಯೆ ಆಧಾರ.ಪ್ರಕೃತಿ ಸೃಷ್ಟಿಯಿಂದಲೇ ನಮಗೆಲ್ಲ…

ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಮನವಿ.

ಉತ್ತರಪ್ರಭ ಸುದ್ದಿ ನರಗುಂದ: ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ಸಾಮಾನ್ಯ ವ್ಯವಸ್ಥೆಗಳು…

ಸರ್ಕಾರಿ ನೌಕರಸ್ಥರಿಗೆ ಆರೋಗ್ಯ ಸೇತು ಆಪ್ ಕಡ್ಡಾಯ!

ಕೇಂದ್ರ ಸರ್ಕಾರ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಕೆಲಸಗಾರರು ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

Казино Leonbets играть онлайн бесплатно, официальный сайт, скачать клиент

Как скачать приложение Leonbets на Айфон iOS бесплатно Есть леон ру скачать…