ಲಕ್ಷ್ಮೇಶ್ವರ: ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬುಧವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಶ್ರೀರಾಮಸೇನೆಯ ಕಾರ್ಯಕರ್ತರು ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಮುಖಂಡರಾದ ಪ್ರಕಾಶ ಮಾದನೂರ, ಅರುಣ ಮೆಕ್ಕಿ ಮಾತನಾಡಿ, ‘ಪ್ರೀತಿ, ಪ್ರೇಮದ ಹೆಸರಲ್ಲಿ ಅನ್ಯಕೋಮಿನ ಯುವ ಕರು ಹಿಂದೂ ಯುವತಿಯರಿಗೆ ಮೋಸ ಮಾಡುತ್ತಿದ್ದಾರೆ. ಹಿಂದೂ ಯುವತಿಯರಿಗೆ ಆಸೆತೋರಿಸಿ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿನಿಯರಿಗೆ ಪ್ರೇಮದ ಬಲೆ ಬೀಸುತ್ತಿದ್ದಾರೆ ಎಂದರು.
ಇಲ್ಲಿ ಒಂದೇ ತಿಂಗಳಲ್ಲಿ ಎರಡು ಪ್ರಕರಣಗಳು ನಡೆದಿವೆ. ಅಧಿಕಾರಿಗಳು ಪ್ರಕರಣಗಳು ಮುಚ್ಚಿಟ್ಟಿದ್ದಾರೆ ಎಂದು ದೂರಿದರು. ಬಸವರಾಜ ಹೊಗೆಸೊಪ್ಪಿನ, ಫಕ್ಕೀರೇಶ ಕರ್ಜೆಕಣ್ಣವರ, ಮಂಜುನಾಥ ಪಾಟೀಲ, ನವೀನ ಹಿರೇಮಠ, ಮುತ್ತು ಕರ್ಜೆಕಣ್ಣವರ, ವಿನಾಯಕ ಬೆಳವಡಿ, ಲೋಕೇಶ ಸುತಾರ, ಶಂಕರಗೌಡ ಪಾಟೀಲ, ಅರುಣ ಪಾಟೀಲ, ಈರಣ್ಣ ಶಿಗ್ಲಿ, ಮಾಂತೇಶ ಅಣ್ಣಿಗೇರಿ ಇದ್ದರು.

Leave a Reply

Your email address will not be published. Required fields are marked *

You May Also Like

ಶೀಘ್ರ 16000 ಪೊಲೀಸ್ ಸಿಬ್ಬಂದಿ ನೇಮಕ: ಸಚಿವ ಬೊಮ್ಮಾಯಿ

ರಾಜ್ಯ ಪೊಲೀಸ್‌ ಇಲಾಖೆಗೆ ನೂತನ 16 ಸಾವಿರ ಪೊಲೀಸ್‌ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯದಲ್ಲಿಂದು 5172 ಪಾಸಿಟಿವ್!: ಜಿಲ್ಲಾವಾರ ವಿವರ

ರಾಜ್ಯದಲ್ಲಿಂದು 5172 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 129287 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ

ಭಾರಿ ಕುತೂಹಲ ಕೆರಳಿಸಿದ 35ನೇ ವಾರ್ಡನ ಮತದಾನ

ಗದಗ: ಗದಗ ಬೆಟಗೇರಿ ನಗರಸಭೆ ಮತದಾನ ಪ್ರಕ್ರಿಯೆ ಇಂದು ಸಾಯಂಕಾಲ ಮುಕ್ತಾಯ ವಾಗಿದೆ.ನಗರಸಭೆಯ 35 ವಾರ್ಡಗಳ…

ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ನಿಮ್ಮ ಓಣಿಯಲ್ಲೂ ಕಸ ಹಾಕಿರಬಹುದು ನೋಡಿ…!

ಮುಂಡರಗಿ: ಯಾವುದಕ್ಕೂ ಒಂಚೂರು ನೀವು ನಿಮ್ಮ ಮನೆಯಿಂದ ಹೊರಗೆ ಬಂದು ನೋಡಿ ಬೀಡಿ. ಯಾಕಂದ್ರೆ ನಿಮ್ಮ…