ಲವ್ ಜಿಹಾದ್ ಪ್ರಕರಣ ಕ್ರಮಕ್ಕೆ ಒತ್ತಾಯಿಸಿ ಲಕ್ಷ್ಮೇಶ್ವರದಲ್ಲಿ ಮನವಿ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬುಧವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಶ್ರೀರಾಮಸೇನೆಯ ಕಾರ್ಯಕರ್ತರು ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಮುಖಂಡರಾದ ಪ್ರಕಾಶ ಮಾದನೂರ, ಅರುಣ ಮೆಕ್ಕಿ ಮಾತನಾಡಿ, ‘ಪ್ರೀತಿ, ಪ್ರೇಮದ ಹೆಸರಲ್ಲಿ ಅನ್ಯಕೋಮಿನ ಯುವ ಕರು ಹಿಂದೂ ಯುವತಿಯರಿಗೆ ಮೋಸ ಮಾಡುತ್ತಿದ್ದಾರೆ. ಹಿಂದೂ ಯುವತಿಯರಿಗೆ ಆಸೆತೋರಿಸಿ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿನಿಯರಿಗೆ ಪ್ರೇಮದ ಬಲೆ ಬೀಸುತ್ತಿದ್ದಾರೆ ಎಂದರು.
ಇಲ್ಲಿ ಒಂದೇ ತಿಂಗಳಲ್ಲಿ ಎರಡು ಪ್ರಕರಣಗಳು ನಡೆದಿವೆ. ಅಧಿಕಾರಿಗಳು ಪ್ರಕರಣಗಳು ಮುಚ್ಚಿಟ್ಟಿದ್ದಾರೆ ಎಂದು ದೂರಿದರು. ಬಸವರಾಜ ಹೊಗೆಸೊಪ್ಪಿನ, ಫಕ್ಕೀರೇಶ ಕರ್ಜೆಕಣ್ಣವರ, ಮಂಜುನಾಥ ಪಾಟೀಲ, ನವೀನ ಹಿರೇಮಠ, ಮುತ್ತು ಕರ್ಜೆಕಣ್ಣವರ, ವಿನಾಯಕ ಬೆಳವಡಿ, ಲೋಕೇಶ ಸುತಾರ, ಶಂಕರಗೌಡ ಪಾಟೀಲ, ಅರುಣ ಪಾಟೀಲ, ಈರಣ್ಣ ಶಿಗ್ಲಿ, ಮಾಂತೇಶ ಅಣ್ಣಿಗೇರಿ ಇದ್ದರು.

Exit mobile version