ದೆಹಲಿ : ಬಾಲಿವುಡ್ ಖ್ಯಾತ ಸಹನಟ ರಣವೀರ್ ಶೌರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ರಣವೀರ್ ಶೌರಿ, ಪರೀಕ್ಷೆಗೆ ಒಳಗಾದಾಗ ಕೊರೊನಾ ಪಾಸಿಟಿವ್ ಬಂದಿದೆ. ರೋಗಲಕ್ಷಣಗಳು ಕಡಿಮೆ ಇವೆ, ನಾನು ಪ್ರಸ್ತುತ ಕ್ವಾರಂಟೈನ್‌ನಲ್ಲಿದ್ದೇನೆ ಎಂದು ರಣ್ವೀರ್ ಶೌರಿ ಟ್ವೀಟ್ ಮಾಡಿದ್ದಾರೆ.

ರಣವೀರ್ ಶೌರಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅವರ ಅಭಿಮಾನಿಗಳು, ಬೇಗನೆ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಉಚ್ರಾಯ ಸ್ಥಿತಿಯಲ್ಲಿದ್ದಾಗ ಅಮೆರಿಕಕ್ಕೆ ತೆರಳಿ ವೆಬ್ ಸರಣಿಯ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಆಗ ಅವರಿಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಆದರೆ ಈಗ ಶೌರಿಗೆ ಕೊರೊನಾ ಪಾಸಿಟಿವ್ ಆಗಿದೆ.

ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಸಂದೀಪ್ ನಾಹರ್ ಅವರ ಗೆಳೆಯರಾಗಿದ್ದ ರಣವೀರ್ ಶೌರಿ, ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ, ‘ತೆರೆಯ ಹಿಂದಿನ ಒತ್ತಡವನ್ನು ಚಿತ್ರಮಂದಿರದ ಬಾಲ್ಕನಿಗಳಿಂದ ನೋಡಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

You May Also Like

ಕೊರೊನಾ ಹೋರಾಟದಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ – ಕೇಂದ್ರ ಸರ್ಕಾರ!

ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ಉತ್ತಮ ಸ್ಥಿತಿಯಲ್ಲಿಯೇ ಹೊರಟಿದೆ. ಆದರೂ ಮರೆಯುವಂತಿಲ್ಲ ಎಂದು ಕೇಂದ್ರ…

ಕೊರೋನಾ ಸೋಂಕಿತ ಮಹಿಳೆ ಸಾವು

ಕೊರೋನಾ ಸೋಂಕಿತ ಮಹಿಳೆ ಸಾವುವಿಜಯಪುರ : ಕೊರೊನಾ ಪೀಡಿತ ಮಹಿಳೆ ಸಾವನ್ನಪ್ಪಿದ ಘಟನೆ ಇಜಯಪುರ ಜಿಲ್ಲೆಯಲ್ಲಿ…

ಕೋವಿಡ್ನಿಂದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಪಿಂಚಣಿ ಪ್ರಕಟ: ಕೇಂದ್ರ ಏನೆಲ್ಲ ಸೌಲಭ್ಯಗಳನ್ನು ಘೋಷಿಸಿದೆ?

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿoದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಕುಟುಂಬವನ್ನು ಸಲುಹಲು ಸಂಪಾದನೆ ಮಾಡುತ್ತಿದ್ದ ಸದಸ್ಯನನ್ನು ಕಳೆದುಕೊಂಡ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪ್ರಯೋಜನಗಳನ್ನು ಪ್ರಕಟಿಸಿದೆ.

ಪಾಕ್, ಅಪ್ಘಾನಿಸ್ತಾನ ರಾಷ್ಟ್ರಗಳ ಮುಂದೆ ಕೊರೊನಾ ವಿಷಯದಲ್ಲಿ ನಾವು ಸೋತಿದ್ದೇವೆ – ರಾಹುಲ್

ನವದೆಹಲಿ : ಕೊರೊನಾ ವಿಷಯದಲ್ಲಿ ನಾವು ಸೋಲು ಕಂಡಿದ್ದೇವೆ. ನಮ್ಮ ಶತೃ ರಾಷ್ಟ್ರ ಪಾಕ್ ವಿರುದ್ಧ ನಮಗೆ ಮುಖಭಂಗವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.