ನವದೆಹಲಿ: ಲಡಾಖ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ಸಮಸ್ಯೆ ಸೃಷ್ಟಿಯಾದ ಬಳಿಕ ಸೇನೆ ನಿಯೋಜಿಸಲಾಗಿದ್ದು, ಇದೀಗ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳದ ಹೊರತು ಭಾರತ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಿಲ್ಲ ಎಂದು ಸೇನೆ ತಿಳಿಸಿದೆ.

ಸುಮಾರು 10 ತಿಂಗಳಿನಿಂದಲೂ ಪ್ಯಾಂಗಾಂಗ್ ತೀರದಲ್ಲಿ ಭಾರತ ಮತ್ತು ಚೀನಾದ ಎರಡು ಸೇನೆಗಳು ವಾಸ್ತವ್ಯ ಹೂಡಿದ್ದು, ಏನೇ ಸಮಸ್ಯೆಗಳಿದ್ದರೂ ಕೂಡ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ತೀರ್ಮಾನಿಸಿದ್ದರೂ ಸಹ ಎರಡೂ ರಾಷ್ಟ್ರಗಳ ಪೂರ್ತಿಯಾಗಿ ಸೇನೆ ವಾಪಸ್ ಆಗಿಲ್ಲ.

 ಈ ಹಿನ್ನೆಲೆ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ನಂತರವಷ್ಟೇ ಭಾರತ ತನ್ನ ಸೇನಾಪಡೆಯನ್ನು ಹಿಂಪಡೆಯಲಿದೆ ಎಂದು ತಿಳಿಸಿದೆ.ಆದರೆ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಮತ್ತಷ್ಟು ಸಮಯ ಬೇಕಾಗಬಹುದು. ಹೀಗಾಗಿ ಗಡಿಯಲ್ಲಿ ಸೇನೆ ಸನ್ನದ್ಧ ಸ್ಥಿತಿಯಲ್ಲೇ ಇರಲಿದೆ ಎಂದು ನವದೆಹಲಿ ಮತ್ತು ಬೀಜಿಂಗ್ ನಡುವೆ ಮಾತುಕತೆಯಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ತಮಿಳುನಾಡಿನಲ್ಲಿ ಉಚಿತ ಕೊರೊನಾ ಲಸಿಕೆ ವಿತರಣೆ – ಸಿಎಂ ಘೋಷಣೆ!

ತಿರುಚ್ಚಿ : ತಮಿಳುನಾಡಿನ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ.

ದಿನವೂ 24 ಕಿಮೀ ಸೈಕಲ್ ಹೊಡ್ದು ಕಲಿತಳು:10ನೇತರಗತಿಯಲ್ಲಿ ಶೇ. 98.75 ಗಳಿಸಿದಳು!

ಭೋಪಾಲ್: ಹತ್ತನೆ ಕ್ಲಾಸ್ ಪರೀಕ್ಷೆಯಲ್ಲಿ ಬರೊಬ್ಬರಿ 98.75 ಪರ್ಸೆಂಟು ಮಾಡಿದ ಈ ಛೋಟಿ, ರಾಜ್ಯಕ್ಕೆ 8ನೇ…

ಜೆಇಇ, ನೀಟ್ ಪರೀಕ್ಷೆ ವೇಳಾಪಟ್ಟಿ

ಜೆಇಇ ಹಾಗೂ ನೀಟ್ ಪರೀಕ್ಷೆಗಾಗಿ ಎದುರು ನೋಡುತ್ತಿದ್ದ ವಿದ್ಯಾರ್ಥಿಗಳಿಗೆ ಹೊಸ ವೇಳಾ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿಕೊಂಡರೆ ಹುಷಾರ್!

ನವದೆಹಲಿ : ಸಾಮಾಜಿಕ ಜಾಲತಾಣ ದುರ್ಬಳಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.