ನವದೆಹಲಿ: ಲಡಾಖ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ಸಮಸ್ಯೆ ಸೃಷ್ಟಿಯಾದ ಬಳಿಕ ಸೇನೆ ನಿಯೋಜಿಸಲಾಗಿದ್ದು, ಇದೀಗ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳದ ಹೊರತು ಭಾರತ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಿಲ್ಲ ಎಂದು ಸೇನೆ ತಿಳಿಸಿದೆ.
ಸುಮಾರು 10 ತಿಂಗಳಿನಿಂದಲೂ ಪ್ಯಾಂಗಾಂಗ್ ತೀರದಲ್ಲಿ ಭಾರತ ಮತ್ತು ಚೀನಾದ ಎರಡು ಸೇನೆಗಳು ವಾಸ್ತವ್ಯ ಹೂಡಿದ್ದು, ಏನೇ ಸಮಸ್ಯೆಗಳಿದ್ದರೂ ಕೂಡ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ತೀರ್ಮಾನಿಸಿದ್ದರೂ ಸಹ ಎರಡೂ ರಾಷ್ಟ್ರಗಳ ಪೂರ್ತಿಯಾಗಿ ಸೇನೆ ವಾಪಸ್ ಆಗಿಲ್ಲ.
ಈ ಹಿನ್ನೆಲೆ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ನಂತರವಷ್ಟೇ ಭಾರತ ತನ್ನ ಸೇನಾಪಡೆಯನ್ನು ಹಿಂಪಡೆಯಲಿದೆ ಎಂದು ತಿಳಿಸಿದೆ.ಆದರೆ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಮತ್ತಷ್ಟು ಸಮಯ ಬೇಕಾಗಬಹುದು. ಹೀಗಾಗಿ ಗಡಿಯಲ್ಲಿ ಸೇನೆ ಸನ್ನದ್ಧ ಸ್ಥಿತಿಯಲ್ಲೇ ಇರಲಿದೆ ಎಂದು ನವದೆಹಲಿ ಮತ್ತು ಬೀಜಿಂಗ್ ನಡುವೆ ಮಾತುಕತೆಯಾಗಿದೆ ಎಂದು ತಿಳಿದು ಬಂದಿದೆ.
