ನೆಲಮಂಗಲ : ತಾಲೂಕಿನ ವಿಶ್ವೇಶ್ವರಪುರ ಹತ್ತಿರದ ಆಂಜನೇಯ ದೇಗುಲಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಇದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ದೇವಸ್ಥಾನವು ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಾಸ್ ಟೋಲ್ ಹತ್ತಿರದ ಸರ್ಕಲ್ ಬಳಿ ಇದೆ. ಬೆಂಕಿ ಹಚ್ಚಿದ ಕಿಡಿಗೇಡಿಗಳು ವಿಗ್ರಹವನ್ನು ಜಖಂ ಕೂಡ ಮಾಡಿದ್ದಾರೆ. ಪರಿಣಾಮವಾಗಿ ದೇವರ ವಿಗ್ರಹ ಹಾಗೂ ದೇವಾಲಯ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. 

ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಲವು ಸಂಘಟನೆಯ ಮುಖಂಡರು, ಪ್ರತಿಭಟನೆ ನಡೆಸಿ ಈ ಕೃತ್ಯಕ್ಕೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದಾರೆ. 

Leave a Reply

Your email address will not be published. Required fields are marked *

You May Also Like

ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಹೇಳಿಕೆ: ಭವನ ನಿರ್ಮಾಣಕ್ಕೆ ಅಗತ್ಯ ಅನುದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲಾಗುವುದು

ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಅವರು ಶನಿವಾರ ಪಟ್ಟಣದಲ್ಲಿ ನಿರ್ಮಣ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಕಂಟೆನ್ಮೆಂಟ್ ಜೋನ್ ಹಾಗೂ ಬಫರ್ ವಲಯಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿ

ರಾಜ್ಯದಲ್ಲಿ ಕೋವಿಡ್-19 ವಿಕಸಿಸುತ್ತಿರುವ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಅಕ್ಕ-ಪಕ್ಕದಲ್ಲಿರುವ/ಹತ್ತಿರದಲ್ಲಿಯೇ ಇರುವ ಮನೆಗಳು ಅಥವಾ ಅಪಾರ್ಟ್ಮೆಂಟ್/ ವಸತಿ ಸಮುಚ್ಛಯಗಳಲ್ಲಿ ವರದಿಯಾಗುತ್ತಿವೆ. ಇದರಿಂದ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯು ಮಿತಿ ಮೀರಿದ್ದು, ಪ್ರಾಧಿಕಾರಿಗಳಿಗೆ ಸರ್ವೇಕ್ಷಣಾ ಚಟುವಟಿಕೆಗಳನ್ನು ಸುಲಭವಾಗಿ ಕೈಗೊಳ್ಳಲು ಅಡ್ಡಿಯಾಗುವುದೇ ಅಲ್ಲದೇ, ಪರಿಧಿ ವಲಯ ನಿಯಂತ್ರಣವನ್ನೂ ಸಹ ಖಚಿತಪಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ವಿದ್ಯುತ್ ಸ್ಪರ್ಷ: ಯುವಕ ಸಾವು

ವಿದ್ಯುತ್ ಸ್ಪರ್ಷದಿಂದ ಯುವಕ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಕದಡಿ ಗ್ರಾಮದಲ್ಲಿ ನಡೆದಿದೆ. ಕದಡಿ ಗ್ರಾಮದ ಬಸನಗೌಡ ರಾಮನಗೌಡ ಸಣಗೌಡ್ರ (25) ಸಾವನ್ನಪ್ಪಿದ ದುರ್ದೈವಿ.

ಸುರೇಶ ಬಳಗಾನೂರ್ ಗೆ ರಾಜ್ಯ ಪತ್ರಿಕೋದ್ಯಮ ರತ್ನಪ್ರಶಸ್ತಿ

ಉತ್ತರಪ್ರಭ ಸುದ್ದಿ ಮಸ್ಕಿ: ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದಿಂದ ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಮಾಡಿದ…