ಧಾರವಾಡ : ಜಿಲ್ಲೆಯಲ್ಲಿ ಎರಡು ಪ್ರದೇಶಗಳಲ್ಲಿ 7 ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ವ್ಯಕ್ತಿಗೆ ಇಲ್ಲಿಯ 2ನೇ ಜೆಎಂಎಫ್ ಸಿ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕಳ್ಳತನದ ಆರೋಪಿ ಹಸನಸಾಬ್‌ ಕಾಶೀಮಸಾಬ್‌ ಬೇಗ್‌ ಎಂಬ ವ್ಯಕ್ತಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಬರೋಬ್ಬರಿ 7 ವರ್ಷಗಳ ಹಿಂದೆ ಧಾರವಾಡದ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಮಂಗಳವಾರ ಪೇಟೆಯ ಉಮೇಶ ಮಹೇಂದ್ರಕರ್ ಎಂಬುವವರ ಮನೆಯಲ್ಲಿ ಚಿನ್ನಾಭರಣ, ಬೆಲೆಬಾಳುವ ಸಾಮಾಗ್ರಿ ಹಾಗೂ ಸಂಗಮ್ ಸರ್ಕಲ್ ಹತ್ತಿರದ ಕ್ಷೇತ್ರಿಯ ಮೊಬೈಲ್ ಅಂಗಡಿಯಲ್ಲಿ ಮೊಬೈಲ್‌, ನಗದು ಕಳ್ಳತನ ಮಾಡಿದ್ದ. ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿಯ 2ನೇ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶ ಆಚಪ್ಪ ದೊಡ್ಡ ಬಸವರಾಜ ಅವರು, ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ, ಪ್ರಕರಣದ ದೂರುದಾರರಿಗೆ ರೂ. 2 ಸಾವಿರ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಗೀತಾ ಹೊಸಗಾಣಿಗೇರ ವಾದಿಸಿದ್ದರು. 

Leave a Reply

Your email address will not be published. Required fields are marked *

You May Also Like

ಬಂಗಾಳದಲ್ಲಿ ಕೊರೊನಾದೊಂದಿಗೆ ಚಂಡಮಾರುತದ ಕಾಟ!

ಕೊರೊನಾ ವೈರಸ್ ನ ಹಾವಳಿಯ ಮಧ್ಯೆಯೇ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸುತ್ತಿದೆ.

ಗದಗ ಜಿಲ್ಲೆಯಲ್ಲಿಂದು 73 ಕೊರೊನಾ ಪಾಸಿಟಿವ್!

ಈ ಮೂಲಕ ಒಟ್ಟು ಈವರೆಗೆ 1140 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 56 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 438 ಜನ ಈವರೆಗೆ ಬಿಡುಗಡೆ ಹೊಂದಿದ್ದಾರೆ.

ನಿಖಿಲ್ ಕುಮಾರಸ್ವಾಮಿ ವಿವಾಹ: ಪಾಸ್ ನೀಡಿದ ವಾಹನಗಳ ವಿವರಣೆ ಕೇಳಿದ ಕೋರ್ಟ್..!

ದೇಶಾದ್ಯಂತ ಲಾಕ್ ಡೌನ್ ಮದ್ಯೆಯೂ ನಟ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ಇತ್ತಿಚೆಗಷ್ಟೆ ನಡೆದಿತ್ತು. ವಿವಾಹ ಸಂದರ್ಭದಲ್ಲಿ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ರೈತ ಸಂಘ, ಹಸಿರು ಸೇನೆ: ಮಹಿಳಾ ಘಟಕ ಉದ್ಘಾಟನೆ

ಉತ್ತರಪ್ರಭ ಸುದ್ದಿಆಲಮಟ್ಟಿ: ಕನಾ೯ಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಮಹಿಳಾ ಘಟಕವೊಂದು ನೂತನವಾಗಿ…