ಬಾಗಲಕೋಟೆ :
ಜಿಲ್ಲೆಯ ಇಳಕಲ್ ನಗರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಾಲ್ಕು ಅಂತಸ್ತಿನ ವಾಣಿಜ್ಯ ಮಳಿಗೆಯೊಂದು ಭಾರೀ ಅಗ್ನಿ ಅವಘಡಕ್ಕೆ ತುತ್ತಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಇಳಕಲ್ ನ ಬಸವೇಶ್ವರ ಸರ್ಕಲ್ ನಲ್ಲಿರುವ ಚಂದ್ರಶೇಖರ್ ಸಜ್ಜನ ಎಂಬುವರಿಗೆ ಸೇರಿದ ಶಾಪಿಂಗ್ ಸೆಂಟರ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೋರ್ ಸೂಪರ್ ಮಾರ್ಕೆಟ್, ಹಾರ್ಡ್ ವೇರ್ ಅಂಗಡಿ, ಕೇಕ್ ಬೇಕರಿ, ಸರೋದ್ ಇಳಕಲ್ ಸೀರೆ, ಪೀಟರ್ ಇಂಗ್ಲೆಂಡ್ ಬಟ್ಟೆ ಮಳಿಗೆ ಸೇರಿದಂತೆ ಅನೇಕ ಅಂಗಡಿಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.
ಮಾಹಿತಿ ತಿಳಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಿಂದ ಸುಮಾರು 20 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಪಾಸಿಟಿವ್ – ಜೆಡಿಎಸ್ ನಾಯಕನ ಹೈಡ್ರಾಮಾ!

ಮಂಡ್ಯ : ಜೆಡಿಎಸ್ ಮುಖಂಡರೊಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಆಸ್ಪತ್ರೆಗೆ ಹೋಗಲು ಕಿರಿಕ್ ಮಾಡಿರುವ ಘಟನೆ…

ಕೃಷಿಗೆ ಉತ್ತೇಜನ ನೀಡಲು ಭೂಕಾಯಿದೆಗೆ ತಿದ್ದುಪಡಿಯಾಗಿದೆ : ಸಚಿವ ಬಿ.ಸಿ.ಪಾಟೀಲ್

ಕಾಂಗ್ರೆಸ್ ಈಗ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಹಿರೆಕೆರೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಹೇಳುವುದೊಂದು ಮಾಡುವುದು ಇನ್ನೊಂದು. 2019 ರಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯಿದೆ ತಿದ್ದುಪಡಿ ಬಗ್ಗೆ ಸ್ಪಷ್ಟವಾಗಿ ಹೇಳಿತ್ತು ಎಂದರು.

ನರಗುಂದ: ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು

ನರಗುಂದ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ನರಗುಂದ…