ಬೆಂಗಳೂರು: ಕುರುಬರ ಎಸ್ಟಿಷ ಮೀಸಲಾತಿಗಾಗಿ ಹೋರಾಡುತ್ತಾ ದಲಿತರ ಮೀಸಲಾತಿ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿದ್ದಾರೆ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ್ ಆರೋಪಿಸಿದರು.

ಮೀಸಲಾತಿ ಕಾವಲು ಸಮಿತಿಯು ಪ.ಜಾ ಮತ್ತು ಪ.ಪಂ ಮೀಸಲಾತಿ ಪಟ್ಟಿಗೆ ಅನ್ಯ ಜಾತಿಗಳ ಸೇರ್ಪಡೆ ಕುರಿತು ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಬ್ರಾಹ್ಮಣರಲ್ಲಿರುವ ಮಲೆ, ಮಾಲೆಯ ಸಮುದಾಯದವರ ಮಕ್ಕಳು ದಲಿತರಿಗಿಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಮೀಸಲಾತಿ ಇಂತಹವರಿಗೆ ಸಿಗಬೇಕು. ಆದರೆ, ಸಮಾಜದ ಉನ್ನತ ಸ್ಥಾನದಲ್ಲಿರುವ ಬ್ರಾಹ್ಮಣರು ಮೀಸಲಾತಿ ಬೇಡುತ್ತಿರುವುದು ವಿಪರ್ಯಾಸ. ಮನುಷ್ಯತ್ವದ ಪರಿಕಲ್ಪನೆ ಜಾಗೃತ ಆಗುವವರೆಗೂ ಮೀಸಲಾತಿ ಹೋಗುವುದಿಲ್ಲ. ಮೀಸಲಾತಿ ಬೇಡುವವರು ಜಾತಿ ಬಿಡಲಿ ಎಂದರು.

ಈಶ್ವರಪ್ಪ ಅವರು ಇಡೀ ಕುರುಬ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ವೀರಶೈವರ ಜಂಗಮರಿಗೂ ‘ಬೇಡ ಜಂಗಮ’ ಪ್ರಮಾಣಪತ್ರ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಹೋದ ನಿಯೋಗದ ನೇತೃತ್ವವನ್ನು ನಿಡುಮಾಮಿಡಿ ಮಠದ ಚೆನ್ನಮಲ್ಲ ವೀರಭದ್ರ ಸ್ವಾಮೀಜಿ ವಹಿಸಿದ್ದಾರೆ.

ಜಾತಿಯ ಹೆಸರಿನಲ್ಲಿ ಶೋಷಿತರ ಹಕ್ಕು ಕದಿಯುವ ಕೆಟ್ಟತನವನ್ನು ಬಿಡಬೇಕು. ದಲಿತರ ಮೇಲಿನ ಶೋಷಣೆ ಎಂದಿಗೂ ಸಹಿಸುವುದಿಲ್ಲ. ನಿಡುಮಾಮಿಡಿ ಸ್ವಾಮೀಜಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ‘ಬೇಡ ಜಂಗಮ ಪ್ರಮಾಣಪತ್ರಕ್ಕೆ ಆಗ್ರಹಿಸಿರುವ ನಿಡುಮಾಮಿಡಿ ಸ್ವಾಮೀಜಿಯ ನಡೆ ಆಘಾತಕಾರಿ. ಇದು, ಬಸವಣ್ಣನವರಿಗೆ ಮಾಡಿರುವ ಅಪಚಾರ. ಈ ಬಗ್ಗೆ ಸ್ವಾಮೀಜಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ, ‘ಜಾತಿಯ ಆಲೋಚನಾ ಕ್ರಮದಿಂದ ಮನಸ್ಸುಗಳು ಕಲುಷಿತಗೊಂಡಿವೆ. ಈಗ ಮೀಸಲಾತಿ ಕೇಳುವ ಮೂಲಕ ಶೋಷಿತ ಸಮುದಾಯದ ಹಕ್ಕುಗಳನ್ನು ಲೂಟಿ ಮಾಡುವ ಹುನ್ನಾರ ನಡೆಸಿದ್ದಾರೆ’ ಎಂದು ಕಿಡಿ ಕಾರಿದರು.

ಕುರುಬರು, ಪಂಚಮಸಾಲಿ ಸಮುದಾಯಗಳು ದಲಿತರ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ. ಅವರ ಹೋರಾಟಕ್ಕೆ ಅರ್ಥವೇ ಇಲ್ಲ. ಮೀಸಲಾತಿ ನೀಡಿ ಸಾಮಾಜಿಕ ಸಂಘರ್ಷಕ್ಕೆ ಸರ್ಕಾರ ಅವಕಾಶ ನೀಡಬಾರದು. ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 1498 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 1498 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 26815 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 571. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 11098 ಕೇಸ್ ಗಳು. ರಾಜ್ಯದಲ್ಲಿ 15297 ಸಕ್ರೀಯ ಪ್ರಕರಣಗಳಿವೆ.

ಕಳ್ಳರ ಕಣ್ಣು ಈಗ ಆಡಿನ ಮ್ಯಾಲೆ…!!! ಸ್ಕಾಪಿ೯ಯೋದಲ್ಲಿ ಬಂದು ಆಡು ಕದ್ದ ಖದೀಮರು?

ಉತ್ತರಪ್ರಭ ಸುದ್ದಿನಿಡಗುಂದಿ: ಕಳ್ಳತನದ ಹಾವಳಿ ಹಾಡುಹಗಲೇ ಶುರುವಾಗಿವೆ. ಜಿಲ್ಲೆಯಲ್ಲಿಗ ಮಕ್ಕಳ ಕಳ್ಳತನದ ಗುಲ್ಲು ಒಂದಡೆ ಆತಂಕ…

ಗದಗ ಜಿಲ್ಲೆಯಲ್ಲಿಂದು 19 ಕೊರೊನಾ ಪಾಸಿಟಿವ್ : ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು?

ಜಿಲ್ಲೆಯಲ್ಲಿ ಇಂದು 19 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ಒಟ್ಟು 10241 ಪ್ರಕರಣಗಳು ಪತ್ತೆಯಾದಂತಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 87677 ಆಗಿದೆ.

ಕುರುಬರಿಗೆ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು – ಈಶ್ವರಪ್ಪ!

ನೆಲಮಂಗಲ : ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.