ಗದಗ: ಲಾಕ್ ಡೌನ್ ಸಮಯದಲ್ಲಿ 5 ಕೆಜಿ ಬದಲಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಿದ್ದೆ ಅಕ್ರಮ ಅಕ್ಕಿದಂಧೆಗೆ ಕಾರಣ ದು ಆಹಾರ ಇಲಾಖೆ ಅಧಿಕಾರಿ ವಿಠಲ್ ರಾವ್ ಹೇಳಿದರು.

ಗದಗ ನಗರದ ಶುಕ್ರವಾರ ಟ್ಯಾಗೋರ್ ರಸ್ತೆಯಲ್ಲಿ ಮನೆಯೊಂದರಲ್ಲಿ ಅಕ್ರಮ ಅಕ್ಕಿ ಸಂಗ್ರಹ ಮನೆಯ ಮೇಲೆ ದಾಳಿ ನಡೆಸಿ ಅಲ್ಲಿದ್ದ ಅಕ್ಕಿ, ಬೇಳೆ ಇನ್ನಿತರೆ ಆಹಾರ ಧಾನ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇಲ್ಲಿ ದೊರೆತ ಅಕ್ಕಿ ಅನ್ನಭಾಗ್ಯ ಅಕ್ಕಿ ಎಂದು ಅನಿಸುತ್ತಿದೆ. ಜೊತೆಗೆ ಸ್ಥಳದಲ್ಲಿ ದೊರೆತ ಚೀಲ ಹಾಗು ಕಾಳುಗಳು ಅಂಗನವಾಡಿಯಲ್ಲಿ ವಿತರಿಸಲಾಗುತ್ತಿದ್ದ ಧಾನ್ಯಗಳು ಎಂದು ತಿಳಿದು ಬಂದಿದೆ. ಈಗಾಗಲೇ ಪೊಲೀಸರು ಪರಿಶೀಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಇಸಿ ಆಕ್ಟ್ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಆಹಾರ ಇಲಾಖೆಯ ಅಧಿಕಾರಿಗಳೆ 5 ಕೆಜಿ ಬದಲಿಗೆ 10 ಕೆಜಿ ಅಕ್ಕಿ ವಿತರಿಸಿದ್ದರಿಂದಲೇ ಅಕ್ರಮ ದಂಧೆಗೆ ಕಾರಣ ಎಂದು ಹೇಳಿರುವುದು ಎಷ್ಟು ಸರಿ? ಈಗಾಗಲೇ ಜಿಲ್ಲೆಯಾದ್ಯಂತ ಅಕ್ರಮ ಅಕ್ಕಿ ದಂಧೆ ನಡೆದೆ ಇದೆ. ಹಾಗಾದರೆ ಒಬ್ಬ ಸರ್ಕಾರಿ ಅಧಿಕಾರಿಯೇ ಸರ್ಕಾರದ ಯೋಜನೆ ಬಗ್ಗೆ ಈ ರೀತಿ ಹೇಳುವುದು ಸರಿಯೇ? ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಬಸವರಾಜ್ ವಾಲಿ ಎನ್ನುವವರಿಗೆ ಸೇರಿದ ಮನೆ ಮಹಾಂತೇಶ್ ಎನ್ನುವವರಿಗೆ ಬಾಡಿಗೆ ಕೊಟ್ಟಿದ್ದಾರೆ. ಆದರೆ ಬಾಡಿಗೆದಾರ ಸಿಕ್ಕಿಲ್ಲ. ಕೆಎಮ್ ಗೋಲ್ಡ್ ಜೀರಾ ಬ್ಯಾಂಡ್ ಹೆಸರಿನ 94 ಚೀಲ ಅಕ್ಕಿ ಸೇರಿದಂತೆ ಬೆಳೆ, ಗೋಧಿ ದೊರೆತಿದೆ. ಈಗಾಗಲೇ ಗದಗ ತಾಲೂಕಿನಲ್ಲಿ ವಿಚಾರಕ್ಕೆ ಸಂಬಂಧಿಸಿದಂತೆ 15 ಕೇಸ್ ದಾಖಲಾಗಿದ್ದು ಈ ಪ್ರಕರಣ ಸೇರಿ ಒಟ್ಟು 16 ಕೇಸ್ ದಾಖಲಾದಂತಾಗಿದೆ. ಲಾಕ್ ಡೌನ್ ನಲ್ಲಿ 5 ಕೆಜಿ ಬದಲಿಗೆ 10 ಕೆಜಿ ಅಕ್ಕಿ ಕೊಟ್ಟಿದ್ದೆ ಈ ಅಕ್ರಮ ದಂಧೆಗೆ ಕಾರಣ. ಈಗಾಗಗಲೇ ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶೀಘ್ರ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *

You May Also Like

ಗಜೇಂದ್ರಗಡ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ 

ಗಜೇಂದ್ರಗಡ: ತೀವೃ ಕುತೂಹಲ ಕೆರಳಿಸುವುದಲ್ಲದೇ, ಪೈಪೋಟಿಗೆ ಕಾರಣವಾಗಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದೆ.

ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ?: ನಿಯಮಗಳೇನು ಗೊತ್ತಾ?

ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್…

ರೈತರ ಹೋರಾಟಕ್ಕೆ ಸ್ಪಂದಿಸಿ ಶೀರ್ಘದಲ್ಲೆ ರೈತರ ಬೇಡಿಕೆಗಳನ್ನ ಈಡೇರಿಸಲು ಭರವಸೆ

ಉತ್ತರಪ್ರಭ ಸುದ್ದಿ ಗದಗ: ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ರೈತರು ಶಿಂಗಟಾಲೂರ ಏತ ನೀರಾವರಿ ಎಡದಂಡೆ…

ಅಭಿನವ ಅನ್ನದಾನ ಶ್ರೀ ಗಳ ದರ್ಶನ ಪಡೆದ ಸಿಎಂ ಬೊಮ್ಮಾಯಿ ಹಾಗೂ ಸಚಿವ ಸಿ,ಸಿ,ಪಾಟೀಲ

ಲಿಂಗೈಕ್ಯ ಶ್ರೀ ಗಳ ದರ್ಶನ ಪಡೆದ ಮುಖ್ಯಮಂತ್ರಿ ಮಾತನಾಡಿ ತ್ರಿವಿಧ ದಾಸೋಹಿಗಳು ಅನ್ನ ಅಕ್ಷರ ನೀಡುವ ಮೂಲಕ ಶೈಕ್ಷಣಿಕವಾಗಿ ಧಾರ್ಮಿಕವಾಗಿ ನಾಡಿಗೆ ಕೊಟ್ಟ ಕೊಡುಗೆ ತುಂಬಾ ದೊಡ್ಡದು ಎಂದು ಹೇಳಿದರು.