ಲಕ್ಷ್ಮೇಶ್ವರ: ರಾಜ್ಯದಲ್ಲಿ ದೇವಾಂಗ ಸಮಾಜ ಅತ್ಯಂತ ಆರ್ಥಿಕವಾಗಿ ರಾಜಕೀಯ ಹಾಗು ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ದೇವಾಂಗ ಅಭಿವೃದ್ಧಿ ಮಂಡಳಿ ಅಥವಾ ನಿಗಮವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ಸಮಾಜದ ಬಾಂದವರು ಶನಿವಾರ ತಹಶಿಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ದೇವಾಂಗ ಸಮಾಜವೂ ನೇಕಾರಿಕೆ ವೃತ್ತಿಯನ್ನೇ ನಂಬಿ ಬದಕು ಸಾಗಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ನೆಕಾರಿಕೆಯಲ್ಲಿ ಆದುನಿಕ ತಂತ್ರಜ್ಞಾನ ಬಳಸುತ್ತಿರುವುದರಿಂದ ಆರ್ಥಿಕ ಹೊರೆಯಾಗಿ ವೃತ್ತಿಯನ್ನೇ ಬಿಟ್ಟು ಕೈಚೆಲ್ಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಾಜದ ಅಭಿವೃದ್ಧಿ ಆಗಬೇಕಾದರೆ ಪ್ರತ್ಯೇಕ ನಿಗಮದ ಸ್ಥಾಪನೆ ಅವಶ್ಯವಾಗಿದೆ. ಈಗಾಗಲೇ ಅನೇಕ ಮಂಡಳಿಗಳು ಅಸ್ತಿತ್ವದಲ್ಲಿದ್ದು, ಅದರರೋಟ್ಟಿಗೆ ದೇವಾಂಗ ಸಮಾಜದ ಅಭಿವೃದ್ಧಿ ಮಂಡಳಿಯು ಆಗಬೇಕಿದೆ. ಆದರಿಂದ ಜನಾಂಗದ ಹಿತಕ್ಕಾಗಿ ಮುಖ್ಯಮಂತ್ರಿ ಯುಡಿಯೂರಪ್ಪನವರು ನಿಗಮದ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜುಜಪ್ಪ ಅಗಡಿ, ಸುರೇಶ ಗುಲಗಂಜಿ, ಈರಣ್ಣ ಗಾಂಜಿ, ಈರಪ್ಪ ಸಾಂಬರಾಣಿ, ಕೃಷ್ಣ ಕೊಪ್ಪದ, ವಿಜಯ ಗುಲಗಂಜಿ, ಬಾಲಚಂದ್ರನ ನಂದರಗಿ, ದೇವರಾಜ ಬೇಟಗೇರಿ ಸೇರಿದಂತೆ ಅನೇಕರು ಇದ್ದರು

Leave a Reply

Your email address will not be published. Required fields are marked *

You May Also Like

ಮಾರ್ಗಸೂಚಿಗಳು ಕೇಂದ್ರ ಸಚಿವರಿಗೆ ಅನ್ವಯವಾಗುವುದಿಲ್ಲವೇ?

ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗುತ್ತವೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಕೆಲವು ವಿನಾಯಿತಿಗಳು ಇವೆ

ನಾಳೆ ಆಲಮಟ್ಟಿ ಎಂ.ಎಚ್.ಎಂ.ಪಿಯು ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಆಲಮಟ್ಟಿ : ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ…

ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಕೂಗು ಎತ್ತಿದ್ದು ನಿಜ- ಸಚಿವ ಉಮೇಶ್ ಕತ್ತಿ

ಆಲಮಟ್ಟಿ: ಉತ್ತರ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಾಗ ತಾವು ಸಹಜವಾಗಿಯೇ ಪ್ರತ್ಯೇಕ ರಾಜ್ಯದ ಕೂಗೆತ್ತಿರುವುದು…