ಪ್ರಸ್ತುತ ರಾಷ್ಟ್ರದಲ್ಲಿ ನಡೆದಿರುವ ರೈತ ಚಳುವಳಿ ಹಾಗು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆಯ ಕುರಿತು ಕಾಂಗ್ರೆಸ್ ಮುಖಂಡ ಅರಣ್ಯ ಕೈಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಅವರೊಂದಿಗೆ ಉತ್ತರಪ್ರಭ ಪ್ರತಿನಿಧಿ ಕೆ.ಸದಾನಂದ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ..

ರೈತ ಚಳುವಳಿಗೆ ಸರ್ಕಾರದ ಸ್ಪಂದನೆ ಸಿಕ್ಕಿಲ್ಲವೇ?

ದೇಶದ ಬೆನ್ನೆಲುಬಾಗಿರುವ ರೈತರ ಚಳುವಳಿ ಉಗ್ರ ಸ್ವರೂಪ ಪಡೆದುಕೊಳ್ಳುವ ಮಟ್ಟಿಗೆ ತಲುಪುವ ಕಾನೂನುಗಳು ತಂದಿರುವ ಸರ್ಕಾರ ಈ ದೇಶದಲ್ಲಿದೆ. ಸತತ ಎರಡು ತಿಂಗಳಿಂದ ದೇಶದ ರೈತರು ರಸ್ತೆಯಲ್ಲಿ ಹೊರಾಟ ಮಾಡುತ್ತಿದ್ದರು. ಅವರ ಮೇಲೆ ಕನಿಷ್ಠ ಸೌಜನ್ಯವೂ ಸರ್ಕಾರ ತೋರಿಲ್ಲ. ರೈತರೊಂದಿಗೆ ಬಿಜೆಪಿ ಸರ್ಕಾರ ಬ್ರಿಟೀಷರ ಕಂಪನಿ ಸರ್ಕಾರದಂತೆ ವರ್ತಿಸುತ್ತಿದೆ.

ಚಳುವಳಿಯ ವಿಫಲತೆಯೋ, ಸರ್ಕಾರದ ಮೊಂಡುತನವೋ?

ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಮೊಂಡುತನ ತೋರುತ್ತಿದೆ. ಬಂಡವಾಳ ಶಾಹಿಗಳ ಜೊತೆಗೆ ವ್ಯವಹಾರ ಕುದುರಿಸಿಕೊಂಡಿದೆ. ರೈತರಿಗೆ ಅಥವಾ ದೇಶಕ್ಕೆ ಬಿಜೆಪಿ ಸರ್ಕಾರ ಸಂಬಂಧವಿಲ್ಲದಂತೆ ತೋರುತ್ತಿದೆ. ಈಗಾಗಲೇ ಈ ವಿಚಾರವಾಗಿ ಬಂಡವಳ ಶಾಹಿಗಳಿಗೆ ಮಾತು ಕೊಟ್ಟಿದೆ. ಹೀಗಾಗಿ ಬಂಡವಾಳ ಶಾಹಿಗಳ ಪರ ಸರ್ಕಾರ ನಿಂತಿದೆ. ದೇಶದಲ್ಲಿ ಊಳುವವನೆ ಒಡೆಯ ಎಂಬ ಕಾನೂನನ್ನು ಇಂದಿರಾಗಾಂಧಿ ಸರ್ಕಾರ ಜಾರಿಗೆ ತಂದಿತ್ತು. ಅದರೆ, ಬಿಜೆಪಿ ಸರ್ಕಾರ ರೈತರ ವಿರುದ್ಧ ಕಾನೂನು ತಂದಿದೆ.

ಭೂಸುಧಾರಣಾ ಕಾಯ್ದೆ ರೈತರಿಗೆ ಮಾರಕವೆ?

ನೂರಾರೂ ಎಕರೆ ಜಮಿನು ಕೊಳ್ಳಬಹುದು ಎಂಬ ಕಾನೂನು ತಂದಮೇಲೆ ರೈತರು ಬೀದಿಗೆ ಬರುತ್ತಾರೆ. ರೈತರು ತಮ್ಮ ಕಷ್ಟಕ್ಕೆ ಬಂಡವಾಳ ಶಾಹಿಗಳಿಗೆ ಜಮಿನು ಮಾರಿಕೊಂಡರೆ ಮುಂದಿನ ದಿನಗಳಲ್ಲಿ ಅದೇ ಹೊಲದಲ್ಲಿ ಜೀತದಾಳಾಗಿ ದುಡಿಯುವ ಪರಸ್ಥಿತಿ ಎದುರಾಗುತ್ತದೆ. ರೈತ ತನ್ನ ಹೊಲದಲ್ಲಿ ಬೆಳೆ ಬೆಳೆದು ಮಾರುಕಟ್ಟೆಗೆ ತಂದು ನಿಗದಿತ ಬೆಳೆಗೆ ಮಾರುವುದು ಕೆಂದ್ರ ಸರ್ಕಾರ ಒಪ್ಪಿಕೊಂಡು ಜಾರಿಗೆ ತಂದಿದೆ. ಆದರೆ, ಈಗ ಬಂಡವಾಳ ಶಾಹಿಗಳ ಸರ್ಕಾರ ಅದನ್ನೆಲ್ಲ ಮೀರಿ ಹೊಸ ಕಾಯೆದೆಗಳನ್ನು ತರುವ ಮೂಲಕ ಬಂಡವಾಳ ಶಾಹಿಗಳಿಗೆ ಪ್ರೋತ್ಸಾಹ ನಿಡುತ್ತಿದ್ದಾರೆ. ಇದರಿಂದ ರೈತರಿಗೆ ದ್ರೋಹವೆಸಗುತ್ತಿದ್ದಾರೆ.

ಎಪಿಎಂಸಿ ಕಾಯ್ದೆ ಜಾರಿಗೆ ತಂದಿದ್ದು ರೈತರಿಗೆ ಎಷ್ಟು ಪ್ರಯೋಜನ?

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಬೆಳದೆ ಬೆಳೆಗೆ ನಿಗದಿತ ದರ ನಿಡುವ ಮೂಲಕ ರೈತರಿಗೆ ಬೆಂಬಲ ದರ ನೀಡಲಾಗುತ್ತೆ. ಈಗ ಹೊಸದಾಗಿ ಕಾಯ್ದೆ ಜಾರಿಗೆ ತಂದರೆ, ರೈತರ ಜೀವನದ ಮೇಲೆ ಬರೆ ಎಳೆದಂತಾಗುತ್ತದೆ.

ರೈತ ಚಳುವಳಿ ಕಾಂಗ್ರೆಸ್ ಪ್ರಾಯೋಜಿತ್ವದಲ್ಲಿ ನಡೆಯುತ್ತಿದೆಯೇ?

ರೈತರ ಪರವಾಗಿ ಮಾತನಾಡಿದ ತಕ್ಷಣ ರೈತ ಹೋರಾಟ ಕಾಂಗ್ರೆಸ್ ಪ್ರಾಯೋಜಕತ್ವ ಎಂದುಕೊಂಡರೆ ಹೇಗೆ.? ರೈತರ ಕಷ್ಟ ದುಃಖ ಕಾಂಗ್ರೆಸ್ ಪಕ್ಷದ ನೋವಾಗಲ್ಲವೆ.? ವಿರೋಧ ಪಕ್ಷದ ಸ್ಥಾನದಲ್ಲಿದ್ದುಕೊಂಡು ಕಣ್ಣೆದುರಿಗೆ ರೈತರಿಗೆ ಆಗುವ ಅನ್ಯಾಯ ಸಹಿಸಿಕೊಂಡು ಸುಮ್ಮನಿರಬೇಕೆ.? ಈ ಬಗ್ಗೆ ಧ್ವನಿ ಎತ್ತಿದರೆ ಪ್ರಾಯೋಜಕತ್ವ ಎಂದು ಬಿಂಬಿಸುವುದು ಎಷ್ಟು ಸರಿ.? ಕಷ್ಟದಲ್ಲಿರುವವರ ಬಗ್ಗೆ ಮಾತನಾಡುವುದು ವಿರೋಧ ಪಕ್ಷದ ಜವಾಬ್ದಾರಿ. ವಿರೋಧಿಸುವ ಹಕ್ಕು ನಮಗಿದೆ. ರೈತರ ಪರವಾಗಿ ಧ್ವನಿ ಎತ್ತುವ ಕೆಲಸ ನಮ್ಮದು. ನಾವು ರೈತರ ಮಕ್ಕಳು.

ರೈತ ಚಳುವಳಿಯಲ್ಲಿ ಮಾಧ್ಯಮ ಎಷ್ಟು ಪ್ರಾಮುಖ್ಯತೆ ಹೊಂದಿದೆ?

ರೈತರ ಚಳುವಳಿ ಅಷ್ಟೇ ಅಲ್ಲದೇ, ಸರ್ಕಾರದ ವೈಫಲ್ಯಗಳನ್ನು ವಿರೋಧಿ ಪಕ್ಷ ಏನಾದರೂ ಹೇಳಲು ಮುಂದಾದರೆ, ಅದನ್ನು ವ್ಯಂಗ್ಯವಾಗಿ ತೆಗೆದುಕೊಲ್ಳುವ ಕೆಟ್ಟ ಸಂಪ್ರದಾಯ ಮಾಧ್ಯಮದಲ್ಲಿದೆ. ಈ ದೇಶ ಕಾಪಾಡಲು ಮಾಧ್ಯಮದ ಮೂಲಕ ಏನಾದರೂ ಹೇಳಲು ಮುಂದಾದರೆ ಒಬ್ಬ ಉತ್ತಮ ಸಾಹಿತಿ ಹಂಪಾನಾ ಅವರಂಥವರನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆ ಎದುರು ನಿಲ್ಲಿಸುತ್ತಾರೆ. ವಿಚಾರಗಳ ಬಗ್ಗೆ ಧ್ವನಿ ಎತ್ತುವುದು ಬೇಡ ಎಂದರೇ ಹೇಗೆ.? ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಹತ್ತಿಕ್ಕುವ ಕಾರ್ಯ ಮಾಡಲು ಹೊರಟಿದೆ.

ರೈತ ಚಳುವಳಿ ಯಶಸ್ವಿಯತ್ತ ಸಾಗಿದೆ ಅನಿಸುತ್ತದೆಯೇ?

ರೈತ ಚಳುವಳಿ ದೇಶದ ಇತಿಹಾಸದಲ್ಲಿ ಬರೆದಿಡುವಂತದ್ದು. ಮಾಧ್ಯಮ ಬಿಟ್ಟು ಚಳುವಳಿ ಅಷ್ಟೋಂದು ಗಟ್ಟಿಯಗಿದೆ. ಈ ದೇಶಕ್ಕೆ ಸ್ವಾತಂತ್ರ್ಯಯ ತಂದುಕೊಡುವಲ್ಲಿ ಮಾಧ್ಯಮದ ಮಹತ್ವದ ಪಾತ್ರವಿದೆ. ದೇಶ ಕಷ್ಟದಲ್ಲಿದ್ದಾಗ ಜನರ ಪರವಾಗಿ ವಿಚಾರಿಸುತ್ತಿತ್ತು. ಕೆಟ್ಟ ಸರ್ಕಾರ ಆಡಳಿತಕ್ಕೆ ಬಂದಾಗ ಅದನ್ನು ಕೆಳಗಿಳಿಸಿ ಹೊಸ ಸರ್ಕಾರ ತಂದ ಉದಾಹರಣೆ ಸಾಕಷ್ಟಿವೆ. ಆದರೆ, ದುರಂತ ಎಂದರೆ ರೈತ ಚಳುವಳಿಗೆ ಮಾಧ್ಯಮಗಳು ಪರವಾಗಿ ನಿಲ್ಲದೇ, ಬಂಡವಾಳ ಶಾಹಿಗಳ ಪರ, ಸರ್ಕಾರದ ನಿಲ್ಲುತ್ತಿದೆ. ಇದು ದುರಂತ ಸಂಗತಿ.

ರೈತ ಚಳುವಳಿಗೆ ನೈತಿಕ ಬೆಂಬಲ ಸಿಕ್ಕಿದೆಯೇ?

ರೈತನಿಂದ ಮನುಷ್ಯನಷ್ಟೇ ಅಲ್ಲದೇ ಪಕ್ಷಿ, ಪ್ರಾಣಿಗಳು, ಕ್ರಿಮಿ ಕೀಟಗಳು, ಜೀವಕೋಶಗಳು ಬದುಕುತ್ತಿವೆ. ರೈತ ಪ್ರಚಾರ ಪ್ರೀಯನಲ್ಲ. ವ್ಯವಸ್ಥಿತ ಪ್ರಚಾರವನ್ನು ಕೂಡ ಬಿಜೆಪಿಯವರು ಮಾರಕವಾಗಿ ಮಾಡುತ್ತಿದ್ದಾರೆ. ಈಗಲೂ ಮೋದಿ ಚುನಾವಣೆಗೆ ನಿಂತರೆ ಪ್ರಚಂಡ ಬಹುಮತದಿಂದ ಗೆದ್ದು ಬರುತ್ತಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಜುನಾವಣೆಗೆ ನಿಲ್ಲಲು ಈಗೇನು ಎಂಪಿ ಎಲೆಕ್ಷನ್ ಇದೆಯಾ? ಏನು. ಜನರು ಬುದ್ದಿವಂತರು. ಈಗ ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಜನಪರ ಸರ್ಕಾರವಲ್ಲ. ಪ್ರಜಾಪ್ರಭುತ್ವ ವಿರೋಧಿಸುವ ಸರ್ಕಾರ. ಇವರು ಸಂವಿಧಾನ ಸುಟ್ಟು ಹಾಕಲು ಮುಂದಾಗಿದ್ದಾರೆ. ಇದು ಡಾ.ಅಂಬೇಡ್ಕರ್ ಅವರಿಗೆ ಕೊಡುವ ಗೌರವವಲ್ಲ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ, ಅಭಿವೃದ್ಧಿ ಮಾಡಿದೆ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಬಹಳಷ್ಟಿದೆ.

ಕೃಷಿ ಸಚಿವರು ಈಗಾಗಲೇ ರೈತರಿಂದ ಸಾಕಷ್ಟು ಬಾರಿ ಮುಜುಗುರಕ್ಕೀಡಾಗುತ್ತಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯ?

ಕಾಂಗ್ರೆಸ್‌ನವರಿಗೆ ನಾಟಕವಾಡಲು ಬರಲ್ಲ. ಕೃಷಿ ಸಚಿವ ಬಿ.ಸಿ.ಪಾಟೀಲ ಸಿನೆಮಾ ರಂಗದವರು. ಸಿನೆಮಾದಲ್ಲಿ ರೈತನಾಗುವುದು ಬೇರೆ, ನಿಜ ಜೀವನದಲ್ಲಿ ರೈತನಾಗುವುದು ಬೇರೆ. ಬಿ.ಸಿ.ಪಾಟೀಲ ಅವರಿಗೆ ಅದು ಗೊತ್ತಿಲ್ಲ. ಪೊಲೀಸರಾಗಿ, ನಾಟಕ ಮಾಡಿಕೊಂಡು ಬಂದವರು. ಇವರು ಬಾಂಬೆಯಿಂದ ಲಾಟರಿ ಹೊಡೆದು ಬಂದ ಮಂತ್ರಿಗಳು. ಜನರಿಂದ ಆಯ್ಕೆಯಾದವರಲ್ಲ. ನಾಟಕ ಮಾಡಲು ರೈತರ ಹೊಲದಲ್ಲಿ ಬಿತ್ತಿದ ಹಾಗೆ ನಾಟಕ ಮಾಡಿ ಫೋಟೋ ತೆಗೆಸಿಕೊಳ್ಳುತ್ತಾರೆ. ರೈತರ ವಿರೋಧಿ ಕಾಯ್ದೆ ತಡೆಯಿರಿ. ಆಗ ನಿಜವಾದ ರೈತನ ಮಗ ಆಗುತ್ತೀರಿ.

ಗೋ ಹತ್ಯೆ ನಿಷೆಧ ಕಾಯ್ದೆಗೆ ನಿಮ್ಮೆ ನಿಲುವೇನು?

ಎಲ್ಲವೂ ಧಾರ್ಮಿಕವಾಗಿ ನೋಡಬೇಕು. ಗೋಹತ್ಯೆ ಕಾಯ್ದೆ ಮೊದಲಿನಿಂದಲೂ ಇದೆ. ಗಾಂಧಿಜೀ ಹಾಗೂ ಸ್ವಾಮೀ ವಿವೇಕಾನಂದರು ಹೇಳುವ ಹಿಂದೂ ಧರ್ಮ ನಿಜವಾದ ಹಿಂದೂ ಧರ್ಮ. ಆದರೆ, ಬಿಜೆಪಿ ಸರ್ಕಾರ ಧರ್ಮದಿಂದ ಆಳುತ್ತಿದೆ. ಇದು ನಿಜವಾದ ಆಡಳಿತವಲ್ಲ.

ಕಾಂಗ್ರೆಸ್ ವಿರೋಧ ಪಕ್ಷವಾಗಿ ಗಟ್ಟಿ ನಿಲುವು ತೆಗೆದುಕೊಳ್ಳಲು ಆಗುತ್ತಿಲ್ಲವೇ?

ಕಾಂಗ್ರೆಸ್ ಪಕ್ಷ ಒಟ್ಟಾಗಿದೆ. ಪಕ್ಷದಲ್ಲಿ ಆಂತರಿಕ ಭೇದವಿಲ್ಲ. ಎಲ್ಲರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ. ನಮ್ಮಲ್ಲಿ ಯಾವುದೇ ಬೇಗುದಿ ಇಲ್ಲ. ಕಾಂಗ್ರೆಸ್ ಕೊಟ್ಟ ಫಲಗಳು ಪ್ರತಿಯೊಬ್ಬರ ಮನೆಯಲ್ಲಿ ಇವೆ. ಜಾತಿ ಆಧಾರದಲ್ಲಿ, ಪಕ್ಷದ ಅಧಾರದಲ್ಲಿ ರಾಜಕೀಯ ನಡೆಸುತ್ತಿರುವ ಪಕ್ಷಗಳು ಮುಕ್ತ ಮಾಡುವಂತಹ ಕೆಲ ಎದುರಾಗಿದೆ. ಇನ್ನು ಕೆಲದಿನಗಳಲ್ಲಿ ಬಿಜೆಪಿ ಮುಕ್ತ ರಾಷ್ಟçವಾಗಲಿದೆ.

ಸೌಜನ್ಯತೆಯಾಗಿ ಸರ್ಕಾರ ಯಾವ ರೀತಿ ಸ್ಪಂದನೆ ಕೊಡಬೇಕಾಗಿತ್ತು

ದೆಹಲಿಯಲ್ಲಿ ಹಮ್ಮಿಕೊಂಡ ಚಳುವಳಿಯಲ್ಲಿ ರೈತರಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಇಲ್ಲಿಯವರೆಗೆ ಯಾವ ಮಂತ್ರಿಗಳು ಅಲ್ಲಿಗೆ ಭೇಟಿ ನೀಡಿ, ಅವರ ಕಷ್ಟಗಳು ಕೇಳಿಲ್ಲ. ಒಂದು ಹನಿ ನೀರು ಸಹ ನೀಡಿಲ್ಲ. ರೈತರಿಗೆ ಅಡುಗೆ ಮಾಡಲು ಬಿಡುತ್ತಿಲ್ಲ. ಅಡುಗೆ ಮಾಡುವವರ ಮೇಲೆ ಪೊಲೀಸರಿಂದ ಲಾಠಿ ಪ್ರಯೋಗ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ರೈತರು ಟ್ರಾö್ಯಕ್ಟರ್ ತಂದರೆ ಅಂತವರ ಮೇಲೆ ಕೇಸ್ ದಾಖಲು ಮಾಡುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವದ ಮೇಲೆ ಹಕ್ಕಿಲ್ಲವೆ? ನಮ್ಮ ಬೇಡಿಕೆಯನ್ನು ನ್ಯಾಯಬದ್ಧವಾಗಿಲ್ಲ ಅಂದರೆ ಕೇಳುವ ಹಕ್ಕಿದೆ. ನಮಗೆ ಸಂವಿಧಾನ ಕೊಟ್ಟಿರುವ ಹಕ್ಕಿದು. ಯಾರು ಭಿಕ್ಷೆ ನೀಡಿಲ್ಲ. ಆದರೆ, ಸರ್ಕಾರ ನಮ್ಮ ಹಕ್ಕುಗಳನ್ನು ಹತ್ತಿಕ್ಕುತ್ತಿದೆ.

ಬಿಜೆಪಿ ಸರ್ಕಾರ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಿನೇ ದಿನೇ ಪೆಟ್ರೋಲ್, ಡಿಸೆಲ್ ಹಾಗೂ ಗ್ಯಾಸ್ ದರ ಏರುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರದಲ್ಲಿ ತಮ್ಮದೆ ಪಕ್ಷದ ಆಡಳಿವಿದ್ದರರೂ ನಮ್ಮ ರಾಜ್ಯದಲ್ಲಿ ಸಿಎಂ ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ. ಸರ್ಕರಕ್ಕೆ ನಾಚಿಕೆಯಾಗಬೇಕು. ಸಮಾಜವನ್ನು ಒಡೆದಾಳುವ ಕೆಲಸ ಮಾಡುತ್ತಿದ್ದಾರೆ. ಜಾತಿ ಜಾತಿ ಮದ್ಯೆ ವೈಮನಸ್ಸು ತರುವಂತಹ ಕೆಲಸಕ್ಕಿಳಿದಿದ್ದಾರೆ. ತಮ್ಮದೇ ಸರ್ಕಾರದ ವಿರುದ್ಧ ಈಶ್ವರಪ್ಪ ಪ್ರತಿಭಟಿಸುವ ನಾಟಕವಾಡುತ್ತಿದ್ದಾರೆ. ಹೀಗೆ ಎಷ್ಟು ದಿನ ನಾಟಕ ಮಾಡುತ್ತಾರೆ. ಗಣಿಗಳೆಲ್ಲವೂ ಆಡಳಿತದಲ್ಲಿರುವ ರಾಜಕಾರಣಿಗಳದ್ದೇ ಇವೆ. ಈಗ ಕಪ್ಪತ್‌ಗುಡ್ಡದ ಮೇಲೂ ಕನ್ನ ಹಾಕಿದ್ದಾರೆ. ಪ್ರಜಾಪ್ರಭುತ್ವ ಬಿಜೆಪಿ ಕೈಯಲ್ಲಿ ಸಿಕ್ಕು ಧೂಳಿಪಟವಾಗಿದೆ. ಅಂತಹ ಕೆಟ್ಟ ಸರ್ಕಾರ ದೇಶದಲ್ಲಿ ಬಂದಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು ಎಂದರೆ, ಜನಪರ ಚಿಂತನೆ ಪಕ್ಷಗಳು ಆಡಳಿತಕ್ಕೆ ಬರಬೇಕು.

Leave a Reply

Your email address will not be published. Required fields are marked *

You May Also Like

ಆಸ್ಪತ್ರೆ ಬೆಡ್ ಮ್ಯಾಲೆ ತಾಳಿ ಕಟ್ಟಿ ಮದ್ವಿ ಮಾಡಿಕೊಂಡು ಮಾನವೀಯತೆ ಮೆರೆದ ವರ

ಮದ್ವಿ ಅನ್ನೋದು ಸ್ವರ್ಗದಾಗ ನಿಶ್ಚಯ ಅನ್ನೋದು ಕೇಳಿವಿ. ಆದ್ರ ಅದೆಷ್ಟೋ ಮದ್ವಿ ಇನ್ನೇನು ತಾಳಿ ಕಟ್ ಬೇಕು ಅನ್ನೋ ಹೊತ್ನ್ಯಾಗ ನಿಂತಿರೋ ಉದಾಹರಣೆಗಳು ಭಾಳ್ ಅದಾವು.

ಗಡಿಯಾರವೇ ನಿರ್ಧಾರಗಳ ಬಂಡಿ

ಜೀವನದ ಯಾವ ಹಂತದಲ್ಲಾದರೂ ಸಮಸ್ಯೆಗಳು,ನೋವು,ಹತಾಶೆಗಳು ಬಂದೇ ಬರುತ್ತವೆ.ಬರೀ ನೋವುಗಳಷ್ಟೇ ಅಲ್ಲ ನಲಿವುಗಳೂ ಕೂಡ.ಈ ನೋವು ಸಂತಸಗಳೆಲ್ಲಾ ನಮ್ಮ ಜೀವನದ ಸಮಯ ಜೀವಿಗಳು ಎಂದರೆ ತಪ್ಪಾಗದು.

ಕೊರೋನಾ ಸೊಂಕು: ಪೊಲೀಸರಲ್ಲೂ ಆತಂಕ

ಕೊರೋನಾ ಸೊಂಕು: ಪೊಲೀಸರಲ್ಲೂ ಆತಂಕ ಬೆಂಗಳೂರು : ಬೇಗೂರು ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು…

ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಡೆ ಭೂ ಕಂಪನ ಅನುಭವ

ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯದ  ಹಲವೆಡೆ ಭೂಮಿ ಕಂಪಿಸಿದ ಅನುಭವ .ರಾಮನಗರ  ಸೇರಿದಂತೆ ಮಂಡ್ಯದಲ್ಲಿಯೂ…