ಮುಳಗುಂದ: ಸಮೀಪದ ಕಲ್ಲೂರ ಗ್ರಾಮದ 2ನೇ ವಾರ್ಡಿನ ಯಳವತ್ತಿ ರಸ್ತೆಯ ಚರಂಡಿಯಲ್ಲಿ ಸುಮಾರು ವರ್ಷಗಳಿಂದ ತುಂಬಿಕೊಂಡಿದ್ದ ಹೂಳು ಎತ್ತಿಸಿ ಸ್ವಚ್ಛತೆ ಕೈಗೊಂಡ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ರಾಮರಡ್ಡಿ ಅವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.

ಸುಮಾರು 8 ವರ್ಷಗಳ ಹಿಂದೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿತ್ತು. ಅಕ್ಕಪಕ್ಕದವರ ವ್ಯಾಜ್ಯ ಕಾರಣ ಪಂಚಾಯ್ತಿ ಅವರು ಸ್ವಚ್ಛತೆಗೆ ಮುಂದಾಗಿರಲಿಲ್ಲ ಇದರಿಂದ ರಸ್ತೆಯಲ್ಲಿ ಕೆಸರು ತುಂಬಿ ಸಂಚಾರವೇ ಬಂದಾಗಿತ್ತು. ಕೊಳಚೆಯಿಂದ ದುರ್ನಾತವೂ ಹೆಚ್ಚಾಗಿತ್ತು. ಇಲ್ಲಿನವರು ಪಂಚಾಯ್ತಿಗೆ ಸಾಕಷ್ಟು ಮನವಿ ಕೊಟ್ಟರೂ ಸಹ ಯಾವುದೇ ಪ್ರಯೋಜವಾಗಿರಲಿಲ್ಲ. ಸದಸ್ಯ ಬಸವರಾಜ ಅವರು ಕೈಗೊಂಡ ಕೆಲಸದಿಂದ ಈಗ ಚರಂಡಿ ದುರಸ್ತಿ ಹಾಗೂ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ ಎಂದು ಗ್ರಾಮಸ್ಥರಾದ ದಿನೇಶ ಹಿರೇತಿಮ್ಮಣ್ಣವರ, ಬಸವಂತಪ್ಪ ಕರಕಣ್ಣವರ, ಚನ್ನಪ್ಪ ಹಿರೇತಿಮ್ಮಣ್ಣವರ, ದಿನೇಶ ಅಂಗಡಿ, ನಾಗಪ್ಪ ಸಂಶಿ ತಿಳಿಸಿದರು.

ಜನರ ಮನವೋಲಿಸಿ ವ್ಯಾಜ್ಯವನ್ನ ಬಗೆಹರಿಸಲಾಗಿದೆ. ಚರಂಡಿ ಹೂಳು ಎತ್ತಿಸಿ ರಸ್ತೆ ಸಂಚಾರ ಸುಗಮ ಮಾಡಿದ್ದೇವೆ. ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು, ಕೊಳಚೆ ನೀರು ಹರಿಯಲು ಇನ್ನುಳಿದ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವದು. ಎಂದು ಗ್ರಾ.ಪಂ ಸದಸ್ಯ ಬಸವರಾಜ ರಾಮರಡ್ಡಿ ಹೇಳಿದರು.

1 comment
Leave a Reply

Your email address will not be published. Required fields are marked *

You May Also Like

ಕೋವಿಡ್ ನಿಂದ ಮೃತ ಪಟ್ಟ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ಪರಿಹಾರ

ಲಖನೌ: ಕೋವಿಡ್-19 ವೇಳೆ ಕರ್ತವ್ಯ ನಿಷ್ಠೆ ಮೆರೆದು ಪ್ರಾಣ ಕಳೆದುಕೊಂಡ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಕೊರೊನಾ ಎಫೆಕ್ಟ್ – ಹೊಲದಲ್ಲಿ ಬೆಳೆದ ಎಲೆಕೋಸನ್ನು ನಾಶ ಮಾಡಿದ ರೈತ!

ಚಿಕ್ಕಮಗಳೂರು: ಸರ್ಕಾರ ಎಷ್ಟೇ ಭರವಸೆ ನೀಡಿದರೂ ರೈತರ ಬವಣೆ ಮಾತ್ರ ನೀಗುತ್ತಿಲ್ಲ. ರೈತರೊಬ್ಬರು ಹಗಲಿರುಳು ಕಷ್ಟಪಟ್ಟು…

ಅಪ್ಪಾ ಹೇಳಿದ ಹೊಡಿ ಒಂಭತ್ತಿನ ಕಥಿ ಏನು ಗೊತ್ತಾ…?

ಹಿಗ್ಗಿನಿಂದ ಕುಣಿದಾಡಿದ ಅಪ್ಪನ ಮಾತು ನಂಬಿ ಪಾಪ ಗುಂಡ ಮುಗಿಲು ನೋಡಿಕೊಂಡ ಮಲಗಿದ. ಗುಂಡನ ಅಪ್ಪನ ಹಿಗ್ಗಿಗೆ ಕಾರಣ ಏನು ಗೊತ್ತಾ..? ಹಾಗಾದ್ರೆ ಈ ಕಥೆ ಓದಿ

ಜಿಲ್ಲೆಗಳಲ್ಲಿ ಎರಡು ಹಂತದಲ್ಲಿ ಗ್ರಾಪಂ ಚುನಾವಣೆ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ.ಬಸವರಾಜು ತಿಳಿಸಿದರು.