ಪ್ರಸ್ತುತ ಮೋಡಕವಿದ ವಾತಾವರಣ, ಕಡಿಮೆ ಉಷ್ಣಾಂಶ ಉಷ್ಣಾಂಶ ಮತ್ತು ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಂಭವ ಹೆಚ್ಚಾಗಿರುವುದರಿಂದ, ಇಂತಹ ಹವಾಮಾನದಲ್ಲಿ ಈಗಾಗಲೇ ಬಿಟ್ಟಿರುವ ಹೂ ಅರಳುವಾಗ ಅತಿಯಾದ ಚಳಿ ಇರುವುದರಿಂದ ಅಂತಹ ಸಮಯದಲ್ಲಿ ಪರಾಗ ಸ್ಪರ್ಶಕ್ಕೆ ಬರುವ ಕೀಟಗಳ ಸಂಖ್ಯೆ ತುಂಬಾ ವಿರಳ. ಒಂದು ವೇಳೆ ಈ ಹೂಗಳನ್ನು ಉಳಿಸಿಕೊಳ್ಳಲು ಹೆಚ್ಚೆಚ್ಚು ಸಿಂಪರಣೆ ಕೈಗೊಂಡರೂ ಸಹ ಕಾಯಿ ಕಚ್ಚುವ ಪ್ರಮಾಣ ತೀರಾ ಕಡಿಮೆಯಿದ್ದು, ಕಾಯಿ ಬೆಳೆವಣಿಗೆಗೆ ಪೂರಕವಾದ ಉಷ್ಣಾಂಶದ ಕೊರತೆಯಿಂದಾಗಿ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಹಾಗೂ ಹೆಚ್ಚಿನದಾಗಿ ರೈತರು ಆದಾಯ ಗಳಿಸಿಕೊಳ್ಳಲು ಸಾದ್ಯವಾಗುವುದಿಲ್ಲ.

ಕೀಟ ಉಲ್ಭಣ ತಪ್ಪಿಸಲು…

ಜನೇವರಿ ಮಾಹೆಯಲ್ಲಿ ಹಾಗೂ ನಂತರ ಹೊರ ಬರುವ ಹೂ ತೆನೆಗಳನ್ನು ಉಳಿಸಿಕೊಳ್ಳುವುದು ಸೂಕ್ತ ಹಾಗೂ ಮಾವಿನ ತಾಕುಗಳಲ್ಲಿ ಎಲೆ ಚಿಗುರು ಮತ್ತು ಹೂವು ಗೊಂಚಲು ಬರುತ್ತಿದ್ದು, ಎಲೆ ತಿನ್ನುವ (ಗೂಡುಮಾಡಿ ಹುಳು, ಎಲೆ ತಿನ್ನುವ ಹುಳು ಮತ್ತು ಅರೆ ಎಲೆ ತಿನ್ನುವ ಹುಳು, ಕುಡಿ ಕೊರಕ, ಗೊಂಡೆ ಹುಳು ಇತ್ಯಾದಿ) ಕೀಟಗಳ ಬಾಧೆಯನ್ನು ನಿಯಂತ್ರಿಸಲು ಹಾಗೂ ಜನೇವರಿ ಮಾಹೆಯ ನಂತರ ಹೂವು ಬಿಡುವ ಸಮಯದಲ್ಲಿ ಬರುವ ಈ ಕೀಟಗಳು ಉಲ್ಬಣಗೊಳ್ಳುವುದನ್ನು ತಪ್ಪಿಸಲು ಸಿಂಪರಣೆಯನ್ನು ಕೈಗೊಳ್ಳಬಹುದಾಗಿದೆ.

ಜನೇವರಿ ಮಾಹೆಯಲ್ಲಿ ಬರುವ ಮಾವಿನ ಎಲೆ ಚಿಗುರು, ಹೂಗೊಂಚಲುಗಳಿಗೆ ಬಾಧಿಸುವ ಗೂಡುಮರಿ ಹುಳು, ಎಲೆ ತಿನ್ನುವ ಹುಳು ಮತ್ತು ಅರೆ ಎಲೆ ತಿನ್ನುವ ಹುಳು, ಕುಡಿ ಕೊರಕ, ಗೊಂಡೆ ಹುಳು ಇತ್ಯಾದಿಗಳ ಹತೋಟಿಗೆ ಕೈಗೊಳ್ಳಲು ಪ್ರತಿ ಲೀಟರ್ ನೀರಿಗೆ 1.0 ಮಿ.ಲಿ, ಅಜಾಡಿರಕ್ಟಿನ್ 10,000 ಪಿಪಿಎಂ ಅಥವಾ 2.5 ಮಿ.ಲಿ ಕ್ಲೋರಪೈರಿಫಾಸ್ ಶೇ.20 ಇಸಿ ಅಥವಾ 2.0 ಮಿ.ಲಿ ಕ್ವಿನಾಲ್ಫಾಸ್ ಶೇ.25 ಇ.ಸಿ ಅಥವಾ 1.0 ಮಿ.ಲಿ. ಇಂಡೋಕ್ಸಿಕಾರ್ಬ್ ಎಂಬ ಕೀಟನಾಶಕಗಳನ್ನು ಹತ್ತು ದಿನಗಳ ಅಂತರದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಒಂದರ ನಂತರ ಒಂದರAತೆ ಸಿಂಪಡಿಸುವುದು.

ಜನೆವರಿ ಮಾಹೆಯಲ್ಲಿ ಹಾಗೂ ಹೂವು ಬಿಡಲಿರುವ ಮಾವಿನ ತೋಟಗಳಿಗೆ ಕೈಗೊಳ್ಳಬೇಕಾದ ಸಸ್ಯ ಸಂರಕ್ಷಣೆ ಕ್ರಮಗಳಾದ ಪ್ರಥಮ ಸಿಂಪರಣೆ ಹೂ ಬಿಡುವ ನಿಕಟ ಪೂರ್ವ ಮತ್ತು ಹೂತೆನೆ ಹೊರ ಬರುವ ಹಂತದಲ್ಲಿ ಜಿಗಿಹುಳು, ಹೂತೆನೆ ಕೊರಕ, ಥ್ರಿಪ್ಸ್, ಬೂದಿ ರೋಗ, ನುಸಿ, ಕಾಡಿಗೆ ರೋಗದ ಶೇಷ ಕಂಡುಬರಬಹುದು. ಅಂತಹ ರೋಗಗಳು ಕಂಡು ಬಂದಲ್ಲಿ ಲಾಂಬ್ಡಾಸೈಹ್ಯಾಲೋಥ್ರಿನ್ ಶೇ.5 ರಷ್ಟು ಇಸಿ-06 ಮಿ.ಲಿ/ ಲೀ + ನೀರಿನಲ್ಲಿ ಕರಗುವ ಗಂಧಕ 80 ವಿಪಿ 3 ಗ್ರಾಂ./ಲೀ ಅಥವಾ ಇಮಿಡಾಕ್ಲೋಪ್ರಿಡ್ ಶೇ.17.8 ರಷ್ಟು ಎಸ್‌ಎಲ್ -0.3 ಮಿ.ಲೀ./ಲೀ + ನೀರಿನಲ್ಲಿ ಕರಗುವ ಗಂಧಕ 80 ವಿಪಿ 3ಗ್ರಾಂ./ಲೀ ಅಥವಾ ಥಯೋಮೆಥೋಕ್ಸಾಮ್ ಶೇ.25 ಶಛ -20 ಮಿ.ಲಿ/ಲೀ + ನೀರಿನಲ್ಲಿ ಕರಗುವ ಗಂಧಕ 80 ವಿಪಿ 3ಗ್ರಾಂ./ಲೀ ಅಥವಾ ಬುಪ್ರೊಪೆಜಿನ್ ಶೇ.25- ಎಸ್‌ಸಿಬಿ 2.0ಮಿ.ಲಿ./ಲೀ + ನೀರಿನಲ್ಲಿ ಕರಗುವ ಗಂಧಕ 80 ವಿಪಿ 3ಗ್ರಾಂ./ಲೀ ಬಳಸಿ ಔಷಧಿಗಳ ಸಿಂಪರಣೆ ಮಡುವುದರಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವಿಕೆ ಕುಂಠಿತಗೊAಡು ಇಳುವರಿಗೆ ತೀವ್ರ ಧಕ್ಕೆಯಾಗುತ್ತದೆ.

ಜಿಲ್ಲೆಯಲ್ಲಿ ಸುಮಾರು 1200 ಹೆಕ್ಟರ್ ಮಾವು ಬೆಳೆಯುತ್ತಿದ್ದು, ಮಾವಿನ ಹಣ್ಣಿಗೆ ಬೂದು ರೋಗ ಅಂಟುಕೊಳ್ಳುವುದರಿAದ ರೈತರಿಗೆ ಉತ್ತಮ ಫಸಲು ಬರದೆ ಕಡಿಮೆ ಇಳುವರಿಯಾಗುತ್ತಿದ್ದು, ಅದನ್ನು ನಿಯಂತ್ರಣಕ್ಕೆ ತರುವುದಕ್ಕೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ರೈತರಿಗೆ ನೀಡಿದ ಸಲಹೆಗಳು ಇಲ್ಲಿವೆ.

ಎರಡನೇ ಹಂತದಲ್ಲಿ…

ಹೂತೆನೆ ಉದ್ದವಾಗುವ ಹಾಗೂ ಅರಳುವ ಎರಡನೇ ಹಂತದಲ್ಲಿ ಜಿಗಿ ಹುಳು, ಥ್ರಿಪ್ಸ್, ಬೂದು ರೋಗ, ಹೂತೆನೆ ಒಣಗುವ ರೋಗ ಹರಡಲಿದ್ದು, ಇಮಿಡಾಕ್ಲೋಪ್ರಿಡ್ ಶೇ.17.8 ಎಸ್‌ಎಲ್ 0.3 ಮಿ.ಲಿ/ಲೀ + ಹೆಕ್ಸಕೊನಜೋಲ್ ಶೇ.70 ಇಸಿ-2.0 ಮಿ.ಲಿ/ಲೀ ನೀರಿನಲ್ಲಿ ಅಥವಾ ಇಮಿಡಾಕ್ಲೋಪ್ರಿಡ್ ಶೇ.17.8 ಎಸ್.ಎಲ್ – 0.3 ಮಿ.ಲಿ/ಲೀ + ಥಯೋಫಿನೇಟ್ ಮಿಥೈಲ್ ಶೇ.70 ಡಬ್ಲೂಪಿ -1.0 ಮಿ.ಲಿ /ಲೀ ನೀರಿನಲ್ಲಿ ಮಿಶ್ರಣಮಾಡಿ ಸಿಂಪರಣೆ ಮಾಡಬೇಕು.

ಮಾವಿನ ತೋಟವನ್ನು ಕಳೆ ರಹಿತವಾಗಿ ತೆಳುವಾಗಿ ತೋಟದಲ್ಲಿ ಉಳುಮೆ ಅಗತ್ಯಗಳನ್ನು ಬಳಸಿ ಈ ಕಾರ್ಯವನ್ನು ಪೂರೈಸುವುದು. ತೋಟವನ್ನು ಕಳೆರಹಿತವಾಗಿ ಇಟ್ಟುಕೊಂಡರೆ ತೊಟವನ್ನು ಸಂಭವನೀಯ ಬೆಂಕಿ ಅನಾಹುತಗಳಿಂದ ರಕ್ಷಿಸಲು ಸಾಧ್ಯ. ಹಣ್ಣಿನ ನೊಣದ ಕೋಶಗಳು ಗಿಡದ ಕೆಳಗಿನ ಮಣ್ಣಿನಲ್ಲಿ ಅಡಗಿರುವುದರಿಂದ, ಇವುಗಳನ್ನು ನಿಯಂತ್ರಿಸುವುದು ಅಗತ್ಯವಾಗಿಟ್ಟುಕೊಂಡರೆ ಪ್ರಸ್ತುತ ಮಳೆ ಬಿದ್ದಾಗ ಗಿಡದ ಕೆಳಗಿನ ಪಾತಿಯನ್ನು ಕೆದಕುವುದು ಮತ್ತು 500 ಗ್ರಾಂ ರಿಂದ 1 ಕೆಜಿ ವರಗೆ ಉತ್ತಮ ಗುಣಮಟ್ಟದ ಬೇವಿನ ಹಿಂಡಿಯನ್ನು ಮಣ್ಣಿಗೆ ನೀಡಿರುವುದರಿಂದ ಮುಂದಿನ ಹಂಗಾಮಿನಲ್ಲಿ ಹೆಚ್ಚಾಗುವ ಹಣ್ಣಿನ ಭಾದೆಯನ್ನು ತಡೆಯಬಹುದಾಗಿದೆ. ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಶವಾಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಿಡಗಳಿಗೆ ಗಂಧಕವನ್ನು ಸಿಂಪಡಿಸಬಾರದು. ಏಕೆಂದರೆ, ಗಂಧಕವು ಪರಾಗ ಸ್ಪರ್ಶ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂಗಳು ಮತ್ತು ಎಳೆಯ ಕಚ್ಚಿದ ಕಾಯಿಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ಪರಾಗ ಸ್ಪರ್ಶವಾಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಿಡಗಳಿಗೆ ನೀರುಣಿಸಬಾರದು. ಪರಾಗ ಸ್ಪರ್ಶ ಪುರ್ಣಗೊಂಡ ನಂತರ ಕಾಯಿಯು ಬಟಾಣಿಯಿಂದ ಗೋಲಿ ಗಾತ್ರದ ಹಂತದಲ್ಲಿ ನೀರು ಕೊಡಲು ಪ್ರಾರಂಭಿಸಬಹುದು. ಎರಡು ಮತ್ತು ಮೂರು ರಕ್ಷಣಾತ್ಮಕ ನೀರಾವರಿ ಕೈಗೊಳ್ಳಬಹುದು. ಕಚ್ಚಿದ ಕಾಯಿಗಳು ಉದುರದಂತೆ ನೋಡಿಕೊಳ್ಳಲು ಅವುಗಳಿಗೆ ಸಸ್ಯ ಬೆಳವಣಿಗೆ ಛೋಧಕ ಎನ್‌ಎಎ 50 ಪಿಪಿಎಂ ಪ್ರಮಾಣದಲ್ಲಿ ಸಿಂಪಡಿಸಬೇಕು.

ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಅವುಗಳಿಗೆ ಭಾರತೀಯ ತೋಟಗಾರಿಕೆ ಸೋಶೋಧನಾ ಸಂಸ್ಥೆ ಐಐಎಚ್‌ಆರ್ ಅವರು ಹೊರತಂದಿರುವ ಮ್ಯಾಂಗೋ ಸ್ಪೇಷಲ್ ಅನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪರಡಿಸುವುದು. ಈ ಸಿಂಪರಣೆ ದ್ರಾವಣಕ್ಕೆ ಸೋಪು ದ್ರಾವಣವನ್ನು 0.5 ಮಿ.ಲಿ/ಲೀ ಮತ್ತು ಅರ್ಧ ಹೋಳು ನಿಂಬೆ ರಸ ಬೆರಸಿ ಸಿಂಪಡಿಸಿದರೆ, ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುವುದು. ಪೊಟ್ಯಾಸಿಯಮಂ ನೈಟ್ರೈಟ್ 20 ಗ್ರಾಂ /ಲೀ ಸಿಂಪಡಣೆಯನ್ನು ಕೈಗೊಳ್ಳುವುದರಿಂದ ಮುಗ್ಗು ಅರಳಲು ಮತ್ತು ಎಕ ರೂಪದ ಹೂ ಬಿಡಲು ಸಹಕಾರಿಯಾಗಿದೆ.

– ಸುರೇಶ ಕುಂಬಾರ, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ

1 comment
Leave a Reply

Your email address will not be published. Required fields are marked *

You May Also Like

ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಿ: ನೆಲಗುಡ್ಡದ

ಉತ್ತರಪ್ರಭ ಸುದ್ದಿಶಿರಹಟ್ಟಿ : ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ…

ಭೂ ಸುಧಾರಣಾ ಕಾಯ್ದೆ ಯಾರಿಗೆ ಲಾಭ- ಯಾರಿಗೆ ನಷ್ಟ?

ಧಾರ್ಮಿಕ ಸಂಸ್ಥೆಗಳು, ಸೇವಾ ಸಂಘಗಳು, ಕಂಪನಿ ಸ್ಥಾಪನೆ, ಸಹಕಾರ ಸಂಘಗಳು ಕೃಷಿ ಭೂಮಿ ಖರೀದಿ ಮಾಡುವುದಕ್ಕೆ…

ಕೃಷಿ ಅಧಿಕಾರಿಗಳು ಸಹ ಕೊರೊನಾ ವಾರಿಯರ್ಸ್‌ಗಳಂತೆ: ಬಿ.ಸಿ.ಪಾಟೀಲ

ಬೆಂಗಳೂರು: ರೈತರು ಕೋವಿಡ್ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಕೃಷಿ ಅಧಿಕಾರಿಗಳು ಸಹ ಕೊರೊನಾ…

ಸಹಕಾರ ಬ್ಯಾಂಕ್ ಗಳ ಮೂಲಕ ರೈತರಿಗೆ 20,810 ಕೋಟಿ ಬೆಳೆ ಸಾಲ-ಸಚಿವ ಸೋಮಶೇಖರ್

ಬೆಂಗಳೂರು: ಸಹಕಾರ ಬ್ಯಾಂಕ್ ಗಳ ಮೂಲಕ ಈ ವರ್ಷ20,810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗುರಿ ತಲುಪಲು ರಾಜ್ಯದ 212 ಡಿಸಿಸಿ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ. 303 ಲಕ್ಷ ರೈತರನ್ನು ತಲುಪಲು ಹೇಳಿದ್ದೇವೆ ಎಂದರು.