ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಾದು ಹೋಗುವ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿ 06 ರಲ್ಲಿ ಮಳೆಯಿಂದ ಹಾನಿಗೀಡಾದ ಸುಮಾರು 2.5ಕೀ ರಸ್ತೆಯನ್ನು 2.60 ಲಕ್ಷ ರೂಗಳಲ್ಲಿ ಮರು ಡಾಂಬರೀಕರಣಕ್ಕೆ ಶಾಸಕ ರಾಮಣ್ಣ ಲಮಾಣಿ ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ, ಲಕ್ಷ್ಮೇಶ್ವರ ಪಟ್ಟಣದ ಅಭಿವೃದ್ಧಿಗೆ ಎಲ್ಲಾ ರೀತಿಯ ನೇರವು ಸಹಕಾರ ನೀಡುವುದಾಗಿ ಹೇಳಿದರಲ್ಲದೆ, ಕ್ಷೇತ್ರದಲ್ಲಿ ಹಾಳಾಗಿರುವ ರಸ್ತೆಗಳ ಸುಧಾರಣೆಗಾಗಿ 80 ಕೋಟಿ ರೂ.ಗಳ ಕ್ರೀಯಾ ಯೋಜನೆಯನ್ನು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಲಾಗಿದೆ. ಶೀಘ್ರವೇ ಶಿಗ್ಲಿ ನಾಕಾದಿಂದ ದೂದಪೀರದವರೆಗೆ 2ಕೋಟಿ ರೂ ವೆಚ್ಚದಲ್ಲಿ ದ್ವೀಪತ ರಸ್ತೆಗೆ ಚಾಲನೆ ನೀಡಲಾಗುವುದು. 45 ರೂ ವೆಚ್ಚದಲ್ಲಿ ಕೆಂಚಲಾಪೂರದಿಂದ ಮತ್ತು ಮುಕ್ತಿಮಂದಿರ ರಸ್ತೆಗೆ ಅನುದಾನ ಬಿಡುಗಡೆಯಾಗಲಿದೆ ಎಂದರು.

ಮುಖಂಡರಾದ ಸೋಮಣ್ಣ ಮುಳಗುಂದ ಮಾತನಾಡಿ, ಶಾಸಕ ರಾಮಣ್ಣ ಲಮಾಣಿಯವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಹೊಂದಿದ್ದು ಅವರು ಸ್ವಚ್ಛ ಪಾರದರ್ಶಕ ಪ್ರಾಮಾಣಿಕ ಆಡಳಿತ ನೀಡುತ್ತಿದ್ದಾರೆ ಎಂದ ಹೇಳಿದರು.

ಪಟ್ಟಣದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಅವಶ್ಯಕತೆ ಇದ್ದು ಈ ಬಗ್ಗೆ ಶಾಸಕರು ಹೆಚ್ಚು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯೆ ಅಶ್ವಿನಿ ಅಂಕಲಕೋಟಿ, ಮಂಡಳ ಅಧ್ಯಕ್ಷ ಪಕ್ಕೀರೇಶ ರಟ್ಟೆಹಳ್ಳಿ, ನಗರ ಘಟಕ ಬಿಜೆಪಿ ಅಧ್ಯಕ್ಷ ದುಂಡೇಶ ಕೋಟಗಿ ಮಾತನಾಡಿದರು.

ಪುರಸಭಾ ಅಧ್ಯಕ್ಷೆ ಪೂರ್ಣಿಮಾ ಎಂ.ಪಾಟೀಲ್, ತಾ.ಪಂ.ಅಧ್ಯಕ್ಷ ಪರಶುರಾಮ ಇಮ್ಮಡಿ, ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ, ಚಂಬಣ್ಣ ಬಾಳಿಕಾಯಿ, ನೀಲಪ್ಪ ಕರ್ಜಕಣ್ಣವರ, ಪಿ.ಬಿ.ಕರಾಟೆ, ಶಿವಯೋಗಿ ಅಂಕಲಕೋಟಿ, ಸಿದ್ದಣ್ಣಗೌಡ ಬಳ್ಳೊಳ್ಳಿ, ಪ್ರವೀಣ ಬೋಮಲೆ, ಚಾಯಪ್ಪ ಬಸ್ಸಾಪೂರ, ಚಂದ್ರು ಹಂಪಣ್ಣವರ, ಪಿಡ್ಲೂಡಿ ನರೇಂದ್ರ, ಡಿ.ಬಿ.ಬಸವರಾಜ ಅನೇಕರು ಇದ್ದರು.

ಶಿರಹಟ್ಟಿ ಮಂಡಳ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಚಂದ್ರಕಾಂತ ನಗರಗೋಜಿ ಇದ್ದರು.

Leave a Reply

Your email address will not be published. Required fields are marked *

You May Also Like

ಇನ್ಮುಂದೇ ಚುನಾಯಿತ ಪ್ರತಿನಿಧಿಗಳು ಕೊರೊನಾ ವಾರಿಯರ್ಸ್

ಬೆಂಗಳೂರು: ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಜಿ.ಪಂ, ತಾ.ಪಂ ಸದಸ್ಯರು ಮತ್ತು ಗ್ರಾ.ಪಂ. ಸದಸ್ಯರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಮೊದಲ ಡೋಸ್ ಕೊವಿಡ್ ಲಸಿಕೆ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಕೈ ಕಮಲದ ನಡುವೆ ಟ್ವೀಟ್ ಸಮರ

ಬ್ರಷ್ಟಾಚಾರದ ವಿಷಯವೀಗ ಕೈ-ಕಮಲದ ಟ್ವೀಟ್ ಸಮರಕ್ಕೆ ಕಾರಣವಾಗಿದೆ. ಡಿಕೆಶಿ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದರೆ, ಸಿಎಂ ಬಿಎಸ್ವೈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ.

ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ

ಜೀವನದಲ್ಲಿ ಒಂದಿಲ್ಲ ಒಂದು ಸಂಕಷ್ಟಗಳು ಇರುತ್ತವೆ. ಸಂಕಷ್ಟ ಎದುರಿಸುವ ಮನೋಬಲ ಬಲಿಷ್ಠವಿದ್ದರೆ ಎಂತಹ ಸಮಸ್ಯೆಯೂ ದೂರ ಮಾಡಬಹುದು ಈ ನಿಟ್ಟಿನಲ್ಲಿ ಸಾಧಕರ ಯಶೋಗಾಥೆಗಳನ್ನು ಅವಲೋಕಿಸಿಕೊಂಡು ಮುನ್ನಡೆಯಿರಿ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸುರೇಂದ್ರಸಾ ರಾಯಬಾಗಿ ಹೇಳಿದರು.

ಗದಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಕೊರೋನಾ ಭೀತಿ..!

ಗದಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಕೊರೋನಾ ಭೀತಿ..! ಗದಗ: ಪಕ್ಕದ ಬಾಗಲಕೋಟೆ ಜಿಲ್ಲೆಯಿಂದ ಗದಗ ಜಿಲ್ಲೆಯ…