ಲಕ್ಷ್ಮೇಶ್ವರ: ಪಟ್ಟಣ ತೋಟಗಾರಿಕಾ ಇಲಾಖೆಯ ಮಹಾಂತಿನಮಠದಲ್ಲಿ ಬುದವಾರ ತೋಟಗಾರಿಕಾ ಇಲಾಖೆ ವತಿಯಿಂದ ತಾಲೂಕ ಪಂಚಾಯತಿ ಯೋಜನೆಯಡಿ ರೈತ ಮತ್ತು ರೈತ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ ಬುಧವಾರ ಜರುಗಿತು.

ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯ ಎಸ್.ಪಿ.ಬಳಿಗಾರ, ರೈತರು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಕಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೃಷಿಯಿಂದ ವಿಮೆ ಮುಕ್ತ ಆಗುತ್ತಿದ್ದ ರೈತರಿಗೆ ತೋಟಗಾರಿಕಾ ಕ್ಷೇತ್ರ ಹೊಸ ಆಯಾಮ ನೀಡಿದ್ದು ರೈತರು ಆದುನಿಕ ತಂತ್ರಜ್ಞಾನ ಬಳಸಿಕೊಂಡು ಆದಾಯ ಹೆಚ್ಚಿಸಕೊಳ್ಳಬೇಕು. ಇಂದು ಅನ್ನದಾತ ಪರಿಶ್ರಮದಿಂದಲ್ಲೆ ಬದುಕಿದ್ದು ಸರಕಾರ ಅವರಿಗೆ ಸಾಕಷ್ಟು ಯೋಜನೆಗಳನ್ನು ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಸ್ವಾವಲಂಭನೆ ಹೊಂದಬೇಕು ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ, ಬಸವರಾಜ ಬೆಂಡಿಗೇರಿ ಮಾತನಾಡಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ಪುರಸಭಾ ಅಧಕ್ಷ ಪೂರ್ಣಿಮಾ ಪಾಟೀಲ್, ಮಲ್ಲೇಶಪ್ಪ ಲಮಾಣಿ, ಚನ್ನಪ್ಪ ಜಗಲಿ, ಬಸಣ್ಣ ಮೆಣಸಿನಕಾಯಿಪಾಟೀಲ್ ಸೇರಿದಂತೆ ಅನೇಕರು ಇದ್ದರು.

ಇದೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ತೋಟಗಾರಿಕಾ ಬೆಳೆಗಾರರ ಪ್ರಶಸ್ತಿ ಪಡೆದ ಹನಮಂತಪ್ಪ ಸಾಲಿ, ಬಸವರಾಜ ನಾವಿ ಇವರನ್ನು ಸನ್ಮಾನಿಸಲಾಯಿತು.

ಎಂ.ಐ.ನಧಾಪ ಮತ್ತು ಪಾಟೀಲ್ ನಿರ್ವಹಿಸಿದರು.

Leave a Reply

Your email address will not be published. Required fields are marked *

You May Also Like

ನಾನು ಎಸ್ಕಾರ್ಟ್ ನಲ್ಲಿ ಓಡಾಡುವುದು ಕೆಲವರಿಗೆ ಬೇಸರ ತಂದಿರಬಹುದು: ಸಚಿವ ಡಾ. ನಾರಾಯಣಗೌಡ

ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿಡಿ ವಿಚಾರ ಏನು ಹೇಳಿಲ್ಲ. ಅವರು ಏಕೆ ಹಾಗೆ ಮಾತಾಡಿದ್ರೊ ನನಗೆ ಗೊತ್ತಿಲ್ಲ.

ರಾಜ್ಯ ಸರ್ಕಾರ ವಿರುದ್ಧ ಕನಕಶ್ರೀ ಆಕ್ರೋಶ

ಸಾರಾಯಿ ಮಾರಾಟ ಮತ್ತೆ ಪ್ರಾರಂಭಿಸಿರುವ ಕಾರನ ರಾಜ್ಯ ಸರ್ಕಾರದ ವಿರುದ್ಧ ಕನಕ ಶ್ರೀಗಳು ಕಿಡಿಕಾರಿದ್ದಾರೆ.

ಮುಂಡರಗಿಗೆ ಬಿಇಓ ನೇಮಕ, ಶಿರಹಟ್ಟಿ ಬಿಇಓ ವರ್ಗಾವಣೆ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿಗೆ ಖಾಲಿ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಯುವರಾಜ್ ನಾಯ್ಕ್ ಅವರನ್ನು…

ರಸ್ತೆ ಅಪಘಾತ ಮಗು ಸೆರಿ ಇಬ್ಬರ ದುರ್ಮರಣ

ಮುಂಡರಗಿ: ಮುಂಡರಗಿ ತಾಲೂಕಿನ ಡಂಬಳ ಮತ್ತು ಮೇವುಂಡಿ ಮಾರ್ಗ ಮಧ್ಯೆ ಮೆಕ್ಕೆ ಜೋಳ ತುಂಬಿಕೊಂಡು ಹೊರಟಿದ್ದ ಟ್ರಾಕ್ಟರಗೆ ಹಿಂದಿನಿಂದ ಬಂದ ಕಾರು ಟ್ರಾಕ್ಟರಗೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಮಗು ಸೆರಿ ಇಬ್ಬರ ಸಾವು, ಉಳಿದವರ ಪರಿಸ್ಥಿಥಿ ಗಂಭಿರ. ಮುಂಡರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.