ನರೆಗಲ್: ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಶಾಲೆಗಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದನ್ನು ಉಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದು ಶಿಕ್ಷಣವಂತರಾಗಬೇಕು ಎಂದು ಮಹಾಂತೇಶ ಜಕ್ಕಲಿ ಹೇಳಿದರು.

ಅವರು ಸಮೀಪದ ಕೋಟುಮಚಗಿ ಗ್ರಾಮದ ಸರಕಾರಿ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 72 ನೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹತ್ತು ಸಾವಿರ ರೂಪಾಯಿ ನಗದು ಹಾಗೂ ಒಂದು ಕಟ್ಟಿಗೆಯ ಕಪಾಟು ದೇಣಿಗೆ ನೀಡುವುದರ ಮೂಲಕ ಶಾಲಾ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಿ ಮಾತನಾಡಿದರು.

ಇದೇ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗದಗ ಗ್ರಾಮೀಣ ವಿಭಾಗಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಿಕ್ಷಕ ಎಸ್.ಪಿ.ಕೊಪ್ಪದ ಇವರಿಗೂ ಸನ್ಮಾನಿಸಲಾಯಿತು.

ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ದೇವಪ್ಪ ಹಕ್ಕಿ ಧ್ವಜಾರೋಹಣ ನೆರವೇರಿಸಿದರು.

ಈ ಸಮಯದಲ್ಲಿ ಕೋಟುಮಚಗಿ ಗ್ರಾಮ ಪಂಚಾಯತಿಯ ನೂತನ ಸದಸ್ಯರಾದ ಅಕ್ಬರ್ ಸಾಬ್ ನಾಗರಾಳ, ಮಹಾದೇವಪ್ಪ ಬ್ಯಾಹಟ್ಟಿ, ಶರಣಪ್ಪ ಮನೋಹರ್, ರವಿ ಮ್ಯಾಗೇರಿ, ಮಲ್ಲಿಕಾರ್ಜುನ ಗೋಧಿ, ಜೀವನಸಾಬ ಮಾಬುಸಾಬ ಸರಕವಾಸ, ಅಕ್ಷಯ ಅತ್ತಾರ, ಸುಭಾಸ ಅಬ್ಬಿಗೇರಿ, ರಮಜಾನಬಿ ಅತ್ತಾರ, ಬಸಮ್ಮ ತೋಟಪ್ಪ ನವಲಿ, ಶರಣಮ್ಮ ಶರಣಪ್ಪ ಕಾಡರ, ಯಲ್ಲವ್ವ ಮಹೇಶ ನೀರಲಗಿ, ಸುವರ್ಣ ನೀಲನಗೌಡ ಸಂಕನಗೌಡರ, ಮಾಳವ್ವ ಶಿವಪ್ಪ ಅಲ್ಲಾಪುರ, ಬಸವಣ್ಣೆವ್ವ ಸಕ್ರಪ್ಪ ತಳವಾರ, ಶೈನಾಜಬಿ ಬೂದಿಹಾಳ ಎಸ್ಡಿಎಂಸಿ ಉಪಾಧ್ಯಕ್ಷೆ ಶಿವಲೀಲಾ ತಳವಾರ, ಉರ್ದು ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಚಮನಸಾಬ ಹಿರೇಹಾಳ, ಗ್ರಾಮದ ಹಿರಿಯರಾದ ಮಲ್ಲಿಕಾರ್ಜುನ ಗುರುಸಿದ್ದಪ್ಪ ಅಣ್ಣಿಗೇರಿ, ವೀರೇಶ ನೇಗಿಲಿ, ಶಿವಪ್ಪ ಅಬ್ಬಿಗೇರಿ, ಕೋಟುಮಚಗಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಡಿ.ಎಸ್.ಕಳಕಣ್ಣವರ ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 120 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 120 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 6041 ಕ್ಕೆ ಏರಿಕೆಯಾದಂತಾಗಿದೆ.

ಎಸ್.ಎಸ್.ಎಲ್ಸಿ ಪರೀಕ್ಷೆ ಕುರಿತು ಶಿಕ್ಷಣ ಸಚಿವರ ವಿರುದ್ಧ ದೂರು ದಾಖಲು!

ಬೆಂಗಳೂರು: ರಾಜ್ಯದಲ್ಲಿ ಜೂನ್‌ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಬಗ್ಗೆ ವೇಳಾಪಟ್ಟಿ ಕೂಡ ಬಿಡುಗಡೆಯಾಗಿತ್ತು. ಈಗಾಗಲೇ…

ಸಿಎಂ ಪದಕಕ್ಕೆ 115 ಪೊಲೀಸ್ ಸಿಬ್ಬಂದಿ ಆಯ್ಕೆ

ಉತ್ತಮ ಸೇವೆ ಸಲ್ಲಿಸಿದ ರಾಜ್ಯದ 115 ಪೊಲೀಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಿದೆ.

ಜಿಲ್ಲಾ ಕಸಾಪ ದಿಂದ ಕಥೆ ಹಾಗೂ ಕವನಗಳ ಆಹ್ವಾನ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನೇವರಿ ತಿಂಗಳಲ್ಲಿ ಜರುಗುವ ಗದಗ ಜಿಲ್ಲಾ 9 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕಥೆಗಾರರ ಹಾಗೂ ಕವಿಗಳ ಪ್ರಾತಿನಿಧಿಕ ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರಲಾಗುತ್ತಿದೆ.