ಬೆಂಗಳೂರು : ಕೊರೊನಾ ಮಹಾಮಾರಿ ಜನರ ಬದುಕಿನ ಮೇಲೆ ಬರೆ ಎಳೆದು ಬಿಟ್ಟಿದೆ. ಈ ನಿಟ್ಟಿನಲ್ಲಿ ನಿರುದ್ಯೋಗಿಗಳಿಗೆ ಸರ್ಕಾರ ಸಹಾಯ ಹಸ್ತ ಚಾಚಿದ್ದು, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದೆ.


ಹೊಸ ಉದ್ಯೋಗಗಳಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಬೈಕ್ ಖರೀದಿಗೆ ಸಹಾಯ ಮಾಡಲು ಮುಂದಾಗಿದೆ.
ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಈ ಅವಕಾಶ ಕಲ್ಪಿಸುತ್ತಿದೆ. ಅಲ್ಲದೇ, ಹಲವು ಯುವಕರು ಈಗಾಗಲೇ ಅರ್ಜಿಗಳನ್ನು ಕೂಡ ಸಲ್ಲಿಸಿದ್ದಾರೆ. ಸದ್ಯ ರಾಜ್ಯದಾದ್ಯಂತ ಸುಮಾರು 700 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು. ಹಿಂದುಳಿದ ವರ್ಗಗಳಿಗೆ ಅಂದರೆ ಕೆಟಗರಿ 1, 2, 2ಎ, 3ಎ, 3ಬಿಗೆ ಒಳಪಟ್ಟಿರುವ ಕನಿಷ್ಠ 18 ರಿಂದ 55 ವರ್ಷ ವಯಸ್ಸಿನೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹಿಂದೆ ಯಾವುದೇ ಬೈಕ್ ಖರೀದಿಸಿರಬಾರದು.
ನಿರುದ್ಯೋಗವನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಗೆ ಮುಂದಾಗಿದೆ. ಅಲ್ಲದೇ, ಬೈಕ್ ನ ಲೋನ್ ಸಂಪೂರ್ಣವಾಗಿ ಮುಟ್ಟುವವರೆಗೂ ನಿಗಮದ ಹೆಸರಿನಲ್ಲಿಯೇ ಬೈಕ್ ಇರಲಿದೆ. ಆನ್ ಲೈನ್ ಡೆಲಿವರಿ ಕೆಲಸದ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಮಹಿಳೆಯರೂ ಈ ಲಾಭವನ್ನು ಪಡೆಯಬಹುದು.

Leave a Reply

Your email address will not be published. Required fields are marked *

You May Also Like

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಚಲಚಿತ್ರರಂಗದ ಹಿರಿಯ ನಟ ಆರೋಗ್ಯ ಸ್ಥಿತಿ ಗಂಭೀರ. ನಟ ಶಿವರಾಂ ಅವರ  ಆರೋಗ್ಯದಲ್ಲಿ ಏರುಪೇರಾದ…

ಸುಮಲತಾಗೆ ಪಾಸಿಟಿವ್: ಸಂಪರ್ಕಿತರಿಂದ ಪರೀಕ್ಷೆಗೆ ರಶ್.!

ಮಂಡ್ಯ: ಸಂಸದೆ ಸುಮಲತಾ ತಮಗೆ ಪಾಸಿಟಿವ್ ಬಂದಿದೆ ಎಂದು ಸೋಮವಾರ ಘೋಷಿಸಿದ್ದರು. ತಮ್ಮ ಸಂಪರ್ಕಿತರ ಪಟ್ಟಿಯನ್ನು…

ಬೆಂಗಳೂರಿನ ಹೊಂಗಸಂದ್ರದಲ್ಲಿ ಮತ್ತೆ ಐವರಲ್ಲಿ ಕಂಡು ಬಂದ ಸೋಂಕು!

ಇಲ್ಲಿಯ ಹೊಂಗಸಂದ್ರದಲ್ಲಿನ ಮತ್ತೆ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಿಹಾರಿ ಕೂಲಿ ಕಾರ್ಮಿಕನಿಂದ 29 ಜನರಿಗೆ ಸೋಂಕು ಹರಡಿತ್ತು. ಕೆಲವು ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ.

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ

ಲಕ್ಷ್ಮೇಶ್ವರ :ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದು ಅಕ್ಕಿಯ ಲೋಡಿನ ಗಾಡಿಯನ್ನು…