ಗದಗ: ನಗರದ ಹಾತಲಗೇರಿ ನಾಕಾ ಬಳಿ ವಿವೇಕಾನಂದ ನಗರದಲ್ಲಿ ನೂತನವಾಗಿ ನಿರ್ಮಿಸಿದ ಗಾಣಿಗ ಸಮಾಜದ ಸಮುದಾಯ  ಭವನ ನ.30 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಗಾಣಿಗ ಸಮುದಾಯ ಭವನ ಕಟ್ಟಡ ಕಾರ್ಯಕಾರಣಿ ಸಮಿತಿ ಅಧ್ಯಕ್ಷ ನಿಂಗಪ್ಪ ಕೆಂಗಾರ ಹೇಳಿದರು.

ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ರಾಜಕೀಯ ನಾಯಕರ ಹಾಗೂ ಗಾಣಿಗ ಸಮುದಾಯ ಸ್ವ ಇಚ್ಛೇಯಿಂದ ದೇಣಿಗೆ ನೀಡಿದರ ಫಲವಾಗಿ ಹಾಗೂ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗ ವರ್ಧಕ ಟ್ರಸ್ಟ್ ವತಿಯಿಂದ ನಿರ್ಮಿಸಿದ ಗಾಣಿಗ ಸಮುದಾಯ ಭವನದ ದ್ಘಾಟನೆ ನಡೆಯಲಿದೆ. ಇದೇ ವೇಳೆ ಸಮುದಾಯದ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕೂಡ ಜರುಗಲಿದೆ ಎಂದರು.

ನೂತನವಾಗಿ ನಿರ್ಮಿಸಿದ ಗಾಣಿಗ ಸಮಾಜದ ಸಮುದಾಯ  ಭವನ

ಜ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ವಿರೇಶ್ವರ ಪುಣ್ಯಾಶ್ರಮದ ಪಂ.ಕಲ್ಲಯ್ಯಜ್ಜನವರು ಸಮುದಾಯ ಭವನ ಉದ್ಘಾಟಿಸಲಿದ್ದಾರೆ. ಬೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಮಹಾಸ್ವಾಮಿಗಳು, ಆಧ್ಯಾತ್ಮ ವಿದ್ಯಾಶ್ರಮದ ಡಾ. ನಿಲಮ್ಮ ತಾಯಿ ಅಸುಂಡಿ, ದೆಹಲಿಯ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು, ಟ್ರಸ್ಟ್ ಗೌರವಾಧ್ಯಕ್ಷ ಸಿ.ಬಿ.ಬಡ್ನಿ ಭಾಗವಹಿಸುವವರು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬಸವರಾಜ ವೀರಪ್ಪ ಬಿಂಗಿ, ಮುರುಘರಾಜೇಂದ್ರ. ಎಂ ಬಡ್ನಿ, ಅಶೋಕ ಮಂದಾಲಿ, ಬಸವರಾಜಪ್ಪ ನವಲೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ನಟ ದರ್ಶನ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲು!

ಬೆಂಗಳೂರು : ನಟ ದರ್ಶನ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಇಂದು 22 ಕೊರೋನಾ ಪಾಸಿಟಿವ್ ಕೇಸ್ ಪತ್ತೆ

ಕೋವಿಡ್ ಸೋಂಕಿನ ಅಂಕಿ ಅಂಶಗಳಲ್ಲಿ ಮಾರ್ಚ್ ನಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ, ಇಂದು ಹದಿಮೂರನೇ ಸ್ಥಾನದಲ್ಲಿದೆ ಶೇ.5.97 ನ ರಾಷ್ಟ್ರೀಯ ಸರಾಸರಿಗೆ ಹೋಲಿಸಿದಲ್ಲಿ‌ ರಾಜ್ಯದ ‌ಸರಾಸರಿ ಶೇ.3.13 ಇದೆ.

ಒಂದೇ ದಿನ 53 ಜನರಲ್ಲಿ ಸೋಂಕು!

ಇಂದು ಒಂದೇ ದಿನ ರಾಜ್ಯದಲ್ಲಿ 53 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೋವಿಡ್ 19 ನಿಯಮ ಉಲ್ಲಂಘನೆ: ಪಿ.ಟಿ. ಪರಮೇಶ್ವರ ನಾಯ್ಕ್ ವಿರುದ್ಧ ದೂರು ದಾಖಲು

ಹರಪನಹಳ್ಳಿ: ನಿನ್ನೆಯಷ್ಟೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರನ ವಿವಾಹ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ…