ಗದಗ: ಕುರುಬರು ಮೂಲತ: ಬುಡಕಟ್ಟು ಜನಾಂಗದವರಾಗಿದ್ದು, ರಾಜ್ಯದಲ್ಲಿ ಈಗಾಗಲೇ ಜೇನು ಕುರುಬ, ಕಾಡು ಕುರುಬರು, ಗೊಂಡ, ರಾಜಗೊಂಡ, ಕುರುಬ, ಕುರುಮನ್ಸ್ ಜಾತಿಗಳು ಪರಿಶಿಷ್ಟ ಪಂಗಡದಲ್ಲಿವೆ. ಆದರೆ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಕುರುಬರಿಗೂ ಎಸ್.ಟಿ.ಮೀಸಲಾತಿ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಎಸ್.ಟಿ ಮೀಸಲಾತಿ ಹೋರಾಟ ಸಮೀತಿ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ತಿಳಿಸಿದರು.

ಈ ಕುರಿತು ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಕುರುಬ ಸಮಾಜವನ್ನು ಎಸ್.ಟಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಕಾಗಿನೆಲೆ ಕನಕ ಗುರುಪೀಠದ ಪೂಜ್ಯರ ನೇತೃತ್ವದಲ್ಲಿ ಸಮಾಜದ ಮುಖಂಡರು ಪಕ್ಷಾತೀತವಾಗಿ ಸಂಘಟಿತರಾಗಿ ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಮಟ್ಟದಲ್ಲಿ ನಿಯೋಗವು ಸಂಬಂಧಿಸಿದ ಸಚಿವರಿಗೆ ಮನವಿ ಕೂಡ ಸಲ್ಲಿಸಿದೆ. ಇದಕ್ಕೆ ಪೂರಕವಾಗಿ ಮೊದಲ ಹಂತದಲ್ಲಿ ನ.27 ರಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಮನವಿ ಸಲ್ಲಿಸಲಿದೆ. ಎರಡನೇ ಹಂತದಲ್ಲಿ ನವ್ಹಂಬರ್ 29 ರಂದು ಬಾಗಲಕೋಟೆಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಈ ಭಾಗದ 5 ಜಿಲ್ಲೆಗಳ ಪೈಕಿ 2 ಲಕ್ಷ ಜನ ಸೇರುವ ಅಂದಾಜಿದೆ. ಗದಗ ಜಿಲ್ಲೆಯಿಂದಲೂ ಕೂಡ ಅಂದಾಜು 50 ಸಾವಿರ ಜನ ಭಾಗವಹಿಸಲಿದ್ದಾರೆ.

ಇನ್ನು ಜನವರಿ 14 ರಿಂದ ಕಾಗಿನೆಲೆ ಪೂಜ್ಯರ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರು ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ಫೆ.7 ರಂದು ಬೆಂಗಳೂರು ತಲುಪಿ, ಬೆಂಗಳೂರಿನಲ್ಲಿ ಸಮಾವೇಶ ಆಯೋಜನೆ ಮಾಡಲಾಗುವುದು. ಈ ಸಮಾವೇಶದಲ್ಲಿ 10 ಲಕ್ಷ ನಾಡಿನ ಕುರುಬ ಸಮಾಜ ಬಾಂಧವರು ಸೇರುವ ಅಂದಾಜಿದೆ. ಕೂಡಲೇ ಈ ಬಗ್ಗೆ ಸರ್ಕಾರ ಆಸಕ್ತಿ ತೋರಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಬಹುದಿನಗಳಿಂದ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಸರ್ಕಾರಗಳು ಮನವಿಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿವೆ. ಈ ದೆಸೆಯಲ್ಲಿ ನಮ್ಮ ಹಕ್ಕುಗಳಿಗಾಗಿ ಸಮಾಜದ ಜಗದ್ಗುರುಗಳು ಹಾಗೂ ಪರಮಪೂಜ್ಯರು, ಜನಪ್ರತಿನಿಧಿಗಳು, ಮುಖಂಡರು, ಸಮಸ್ತ ಸಮಾಜ ಬಾಮಧವರು ಒಕ್ಕೋರಲಿನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕುರುಬ ಸಮಾಜಕ್ಕಾಗುತ್ತಿರುವ ಅನ್ಯಾಯ ಸರಿಪಡಿಸಿ ಎಸ್.ಟಿ ಮೀಸಲಾತಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು.

ಮೀಸಲಾತಿಯಿಂದ ಶೈಕ್ಷಣಿಕವಾಗಿ ಪ್ರಾತಮಿಕ ಶಿಕ್ಷಣದಿಂದ ನ್ನತ ಶಿಕ್ಷಣದವರೆಗೂ ಸೌಲಭ್ಯಗಳು ದೊರೆಯುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿ ಹಾಗೂ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸೌಲಬ್ಯಗಳು ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ಸಹ ಹೆಚ್ಚಿನ ಅವಕಾಶಗಳು ಸಿಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹೊಸಳ್ಳಿ, ನಾಗರಾಜ ಮೆಣಸಗಿ, ಚನ್ನಮ್ಮ ಹುಳಕಣ್ಣವರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಕರ್ನಾಟಕದಲ್ಲಿ ಕಿಕ್ಕಿರಿಯುತ್ತಿದೆ ಸೋಂಕು!: ಇಂದು 5030 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 5030 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…

ಅನೈತಿಕ ಸಂಬಂಧ : ಪತಿ ಕೊಲೆ, ಇಬ್ಬರ ಬಂಧನ

ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಪ್ರೀಯಕರನ ಜತೆಗೂಡಿ ಪತಿನ್ನೆ ಕೊಲೆ ಮಾಡಿರುವ ಘಟನೆ ಸಮೀಪದ ಕಬಲಾಯತಕಟ್ಟಿ ತಾಂಡದಲ್ಲಿ ಗುರುವಾರ ನಡೆದಿದೆ.

ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ

ಇತ್ತಿಚಿಗಷ್ಟೆ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿದ್ದು.ಕೊರೊನಾ ಕಾರಣದಿಂದ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗಳು ನಡೆಯದ ಕಾರಣ, 5 ವರ್ಷ ಅವಧಿಯನ್ನು ಮುಗಿಸಿದ ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ,1993ರ ಪ್ರಕರಣ 8(1)ಬಿ(2)ರಡಿ ಕಲಂ 321ರ ಅಡಿಯಲ್ಲಿ ಆಡಳಿತಾಧಿಕಾರಿಗಳನ್ನು

ಪ್ರಕಾಶ ಗೊಂಗಡಿ ದಂಪತಿಗೆ ಆತ್ಮೀಯ ಸನ್ಮಾನ

ಆಲಮಟ್ಟಿ : ವಿಜಯಪುರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧೀಕ್ಷಕ ಪ್ರಕಾಶ ಗೊಂಗಡಿ ಅವರಿಗೆ…