ಬೆಂಗಳೂರು : ಲಾಕ್ ಡೌನ್ ಹಿನ್ನೆಲೆ ಈಗಾಗಲೇ ಅದೆಷ್ಟೋ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವರು ಆರ್ಥಿಕ ಸ್ಥಿತಿಯಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದರೆ ಇನ್ನು ಕೆಲವರು ಹೇಗಾದರೂ ಮಾಡಿ ಖಾಸಗಿ ಶಾಲೆಯಲ್ಲಿಯೇ ನಮ್ಮ ಮಕ್ಕಳನ್ನು ಓದಿಸಬೇಕು ಅಂತ ಮಕ್ಕಳ ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದಾರೆ.

ಈ ಮದ್ಯೆ ಖಾಸಗಿ ಶಾಲೆಗಳು ವರ್ಷದ ಫೀ ಕಟ್ಟುವಂತೆ ಪಾಲಕರಿಗೆ ಹೇಳುತ್ತಿವೆ. ಆದರೆ ಬಹುತೇಕ ಪಾಲಕರು ಕಾಲಾವಕಾಶ ಕೇಳುತ್ತಿದ್ದು, ಫೀ ಕಟ್ಟದಿದ್ರೆ ನಿಮ್ಮ ಮಕ್ಕಳನ್ನು ಅನುತ್ತೀರ್ಣ ಮಾಡುವುದಾಗಿ ಖಾಸಗಿ ಶಾಲಾ ಸಂಸ್ಥೆಗಳು ಹೇಳುತ್ತಿವೆ ಎನ್ನುವ ಆರೋಪ ಕೇಳಿ ಬಂದಿತ್ತು.

ಶುಲ್ಕ ಕಟ್ಟದ ಕಾರಣಕ್ಕೆ ಅನುತ್ತೀರ್ಣಗೊಳಿಸಲು ಸಾಧ್ಯವಿಲ್ಲ ಈ ಬಗ್ಗೆ ಸರ್ಕಾರ ಒಂದು ನಿರ್ಧಾರಕ್ಕೆ ಬರುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಸಚಿವರ ಈ ಹೇಳಿಕೆ ಪಾಲಕರಲ್ಲಿ ನಿರೀಕ್ಷೆ ಹಾಗೂ ಸಂತಸ ಮೂಡಿಸಿದೆ.

Leave a Reply

Your email address will not be published. Required fields are marked *

You May Also Like

ನಾಳೆ ಕೆರೆ ಹಸ್ತಾಂತರ ಸಮಾರಂಭ ( ಉದ್ಘಾಟನೆಗೆ ವೀರೇಂದ್ರ ಹೆಗ್ಗಡೆಯವರ ಆಗಮನ)

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಬಾಲಲೀಲಾ ಮಹಾಂತ ಶಿವಯೋಗಿ ಕೆರೆ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ

ಶಾಲಾ ಕಾಲೇಜುಗಳಿಗೆ 12 ರಿಂದ 16ರ ವರೆಗೆ ರಾಜ್ಯ ಸರ್ಕಾರ ರಜೆ ಘೋಷಣೆ

ಉತ್ತರಪ್ರಭಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ದಿನಾಂಕ:08.02.2022 ರ ಸುತ್ತೋಲೆಯನ್ನು ಮುಂದುವರೆಸುತ್ತಾ,…

ಗದಗ ಜಿಲ್ಲೆ : ನರೇಗಾದಲ್ಲಿ ಬಿಎಫ್‌ಟಿ ಹುದ್ದೆಗೆ ಅರ್ಜಿ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 5 ಬಿ.ಎಫ್.ಟಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ ರೂ 10,000 ಪರಿಹಾರಕ್ಕೆ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಹಿನ್ನೆಲೆ ಅಸಂಘಟಿತ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಅವರಿಗೆ ತಿಂಗಳಿಗೆ…