ಪಂಜಾಬ್: ಹೆಂಡತಿ ಸ್ನಾನ ಮಾಡುತ್ತಿದ್ದ ಫೋಟೋಗಳನ್ನೇ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

ಈ ಘಟನೆ ರಾಜ್ಯದ ಲೂಧಿಯಾನದಲ್ಲಿ ನಡೆದಿದೆ. ಸ್ನಾನ ಮಾಡುತ್ತಿದ್ದ ಫೋಟೋಗಳನ್ನೇ ಇಟ್ಟುಕೊಂಡು ರೂ. 20 ಲಕ್ಷ ಕೊಡುವಂತೆ ಪತಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ನಾನು ಪತಿಯೊಂದಿಗೆ ವಾಸಿಸುತ್ತಿದ್ದ ಸಂದರ್ಭದಲ್ಲಿ ಅರಿವಿಲ್ಲದೆ ಕೆಲವು ಫೋಟೋಗಳನ್ನು ತೆಗೆದಿದ್ದಾನೆ. ಸದ್ಯ ಅದೇ ಫೋಟೋಗಳನ್ನು ಇಟ್ಟುಕೊಂಡು ನನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಪತಿ ಸ್ನಾನದ ಮನೆಯಲ್ಲಿ ಕ್ಯಾಮೆರಾ ಇಟ್ಟಿದ್ದಾನೆ.

ಅಲ್ಲಿ ತೆಗೆದಿರುವ ಕೆಲವು ಫೋಟೋಗಳನ್ನು ಬೆದರಿಕೆ ಹಾಕಲು ಬಳಸುತ್ತಿದ್ದಾನೆ. ನನಗೆ ರೂ. 20 ಲಕ್ಷ ಕೊಡಬೇಕು. ಹಣ ಕೊಡದಿದ್ದರೆ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತೇನೆ ಎಂದು ಬೆದರಿಸುತ್ತಿದ್ದಾನೆ ಎಂದು 23 ವರ್ಷದ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ, ಈ ಮಹಿಳೆ ತನ್ನ ಅತ್ತೆ, ಪತಿ ಮತ್ತು ಇನ್ನೂ ಕೆಲವು ವ್ಯಕ್ತಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ನಾಳೆ ಕೆರೆ ಹಸ್ತಾಂತರ ಸಮಾರಂಭ ( ಉದ್ಘಾಟನೆಗೆ ವೀರೇಂದ್ರ ಹೆಗ್ಗಡೆಯವರ ಆಗಮನ)

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಬಾಲಲೀಲಾ ಮಹಾಂತ ಶಿವಯೋಗಿ ಕೆರೆ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ

ನಕಲಿ ಓಟರ್ ಐಡಿ ತಯಾರಿಸುತ್ತಿದ್ದ ಜಾಲ ಪೊಲೀಸ್ ಬಲೆಗೆ

ನಕಲಿ ಓಟರ್ ಐಡಿ ತಯಾರಿಸುತ್ತಿದ್ದ ಜಾಲವನ್ನು ಹಾವೇರಿ ಪೊಲೀಸರು ಜಾಲಾಡಿದ್ದಾರೆ. ಡಿಸಿ ಹಾಗು ಎಡಿಸಿ ನೇತೃತ್ವದಲ್ಲಿ ದಾಳಿ ನಡೆಸಿ ನಕಲಿ ಓಟರ್ ಐಡಿ ತಯಾರಿಸುತ್ತಿದ್ದ ತಂಡವನ್ನು ಭೇದಿಸುವಲ್ಲಿ ಯಶಸ್ವಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹನುಮನ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ನೆಲಮಂಗಲ : ತಾಲೂಕಿನ ವಿಶ್ವೇಶ್ವರಪುರ ಹತ್ತಿರದ ಆಂಜನೇಯ ದೇಗುಲಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಇದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.