ಬೆಳಗಾವಿ : ನಾಡ ಪಿಸ್ತೂಲ್ ಸಮೇತ ಮೂರು ಜೀವಂತ ಗುಂಡುಗಳು ಸುಕ್ಕಿರುವ ಘಟನೆ ಖಾನಾಪೂರ ತಾಲೂಕಿನ ಉಚ್ಚವಡೆ ಕ್ರಾಸ್ ಬಳಿ ನಡೆದಿದೆ.

ಇವುಗಳನ್ನು ಇಟ್ಟುಕೊಂಡು ನಿಂತಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಕಾರು ಹಾಗೂ ಬೈಕ್ ಗಳನ್ನು ನಿಲ್ಲಿಸಿಕೊಂಡು ಯುವಕರು ನಿಂತಿದ್ದರು. ಈ ಯುವಕರ ತಂಡ ಪೊಲೀಸರರನ್ನು ನೋಡತ್ತಲೇ ಓಡಿ ಹೋಗಿದ್ದಾರೆ. ಇದನ್ನು ನೋಡಿ ಸಂಶಯಗೊಂಡ ಪೊಲೀಸರು ಚೇಸ್ ಮಾಡಿ ಅವರನ್ನು ಬಂಧಿಸಿದ್ದಾರೆ.

ಖಾನಾಪುರ ಠಾಣೆ ಇನ್ಸಪೆಕ್ಟರ್ ಸುರೇಶ ಶಿಂಗಿ ಅವರು ಈ ಪ್ರಕರಣ ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ತಪ್ಪಿಸಿಕೊಂಡಿದ್ದಾರೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಚಂದಗಡ ತಾಲೂಕಿನ ಕಾಲಕುಂದ್ರಿಯ ತುಳಸಿದಾಸ ಜೋಶಿ, ವಡಗಾಂವಿಯ ಸತೀಶ ಅಲಿಯಾಸ್ ಸಿದ್ದಪ್ಪಾ ಡವಳೆ, ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಉಮೇಶ ಬಿಳೆಯಲಿ ಹಾಗೂ ಗದಗ ಜಿಲ್ಲೆಯ ಅಂತೂರ – ಬೆಂತೂರಿನ ಗುರುವಯ್ಯಾ ಲಗಮಯ್ಯನವರ ಎಂದು ಗುರುತಿಸಲಾಗಿದೆ.

ಈ ಬಂಧಿತರಿಂದ ಪೊಲೀಸರು ಸೆಮಿ ಆಟೋಮೆಟಿಕ್ ನಾಡ ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮೊಬೈಲ್ ಹಾಗೂ ರೂ. 34 ಸಾವಿರ ಹಣ, ಕಾರು ಸೇರಿದಂತೆ ಎರಡು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಈ ನದಿಗಳ ಜಲಮಾರ್ಗದಲ್ಲಿ ಸರಕು ಸಾಗಾಟಕ್ಕೆ ನಿರ್ಬಂಧ

ರಾಜ್ಯದ 5 ಜಲಮಾರ್ಗಗಳಲ್ಲಿ ಸರಕು ಸಾಗಾಣಿಕೆ ಮಾಡುವ ಮಹತ್ವದ ಯೋಜನೆಗೆ ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ.

ಮಹಾರಾಷ್ಟ್ರದಲ್ಲಿ ಕರ್ಫ್ಯೂ ಜಾರಿ

ಮಹಾರಾಷ್ಟ್ರದಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗಿದ್ದು, ಇದೀಗ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಉಗ್ರರಿಗೆ ಚಿಕಿತ್ಸೆ ನೀಡಲು, ಶಸ್ತ್ರಾಸ್ತ್ರ ಪೂರೈಸುವುದಕ್ಕಾಗಿಯೇ ಈತ ಮಾಡಿದ್ದೇನು?

ಐಸಿಸ್ ನ ಉಗ್ರರಿಗೆ ವೈದ್ಯಕೀಯ ಸೇವೆ ಒದಗಿಸುವುದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಲು ರಹಸ್ಯವಾಗಿ ಸಂವಹನ ನಡೆಸುವುದಕ್ಕಾಗಿ ಪ್ರತ್ಯೇಕ ಆಪ್ ಗಳನ್ನು ನಗರ ಮೂಲದ ನೇತ್ರ ವೈದ್ಯನೊಬ್ಬ ಅಭಿವೃದ್ಧಿ ಪಡಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಚೀನಾದಲ್ಲಿ ಮತ್ತೆ ಶುರುವಾಗಿದೆ ಕೊರೊನಾ ಆತಂಕ!

ಕೊರೊನಾ ಹುಟ್ಟಿಗೆ ಕಾರಣವಾಗಿರುವ ಚೀನಾದಲ್ಲಿ ಮತ್ತೊಮ್ಮೆ ಮಹಾಮಾರಿ ತಾಂಡವಾಡುತ್ತಿದೆ.