ಪಿಸ್ತೂಲ್, ಮೂರು ಜೀವಂತ ಗುಂಡುಗಳೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದವರಲ್ಲಿ ಗದಗ ಜಿಲ್ಲೆಯವನೂ ಇದ್ದಾನೆ!

ಬೆಳಗಾವಿ : ನಾಡ ಪಿಸ್ತೂಲ್ ಸಮೇತ ಮೂರು ಜೀವಂತ ಗುಂಡುಗಳು ಸುಕ್ಕಿರುವ ಘಟನೆ ಖಾನಾಪೂರ ತಾಲೂಕಿನ ಉಚ್ಚವಡೆ ಕ್ರಾಸ್ ಬಳಿ ನಡೆದಿದೆ.

ಇವುಗಳನ್ನು ಇಟ್ಟುಕೊಂಡು ನಿಂತಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಕಾರು ಹಾಗೂ ಬೈಕ್ ಗಳನ್ನು ನಿಲ್ಲಿಸಿಕೊಂಡು ಯುವಕರು ನಿಂತಿದ್ದರು. ಈ ಯುವಕರ ತಂಡ ಪೊಲೀಸರರನ್ನು ನೋಡತ್ತಲೇ ಓಡಿ ಹೋಗಿದ್ದಾರೆ. ಇದನ್ನು ನೋಡಿ ಸಂಶಯಗೊಂಡ ಪೊಲೀಸರು ಚೇಸ್ ಮಾಡಿ ಅವರನ್ನು ಬಂಧಿಸಿದ್ದಾರೆ.

ಖಾನಾಪುರ ಠಾಣೆ ಇನ್ಸಪೆಕ್ಟರ್ ಸುರೇಶ ಶಿಂಗಿ ಅವರು ಈ ಪ್ರಕರಣ ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ತಪ್ಪಿಸಿಕೊಂಡಿದ್ದಾರೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಚಂದಗಡ ತಾಲೂಕಿನ ಕಾಲಕುಂದ್ರಿಯ ತುಳಸಿದಾಸ ಜೋಶಿ, ವಡಗಾಂವಿಯ ಸತೀಶ ಅಲಿಯಾಸ್ ಸಿದ್ದಪ್ಪಾ ಡವಳೆ, ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಉಮೇಶ ಬಿಳೆಯಲಿ ಹಾಗೂ ಗದಗ ಜಿಲ್ಲೆಯ ಅಂತೂರ – ಬೆಂತೂರಿನ ಗುರುವಯ್ಯಾ ಲಗಮಯ್ಯನವರ ಎಂದು ಗುರುತಿಸಲಾಗಿದೆ.

ಈ ಬಂಧಿತರಿಂದ ಪೊಲೀಸರು ಸೆಮಿ ಆಟೋಮೆಟಿಕ್ ನಾಡ ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮೊಬೈಲ್ ಹಾಗೂ ರೂ. 34 ಸಾವಿರ ಹಣ, ಕಾರು ಸೇರಿದಂತೆ ಎರಡು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Exit mobile version