ಹುಬ್ಬಳ್ಳಿ : ಜಿಪಂನ ಮಾಜಿ ಸದಸ್ಯ ಯೋಗೇಶ್ ಗೌಡ ಗೌಡರ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೀಗಾಗಿ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಲಿಂಗಾಯಿತ ಪಂಚಮ ಸಾಲಿ ಮಠದ ಜಯ ಮೃತ್ಯುಂಜಯ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಭಾವಿ ವ್ಯಕ್ತಿಗಳ ಕೈವಾಡ ಇದರಲ್ಲಿ ಇದೆ ಎಂದು ಆರೋಪಿಸಿದ್ದಾರೆ.

ಲಿಂಗಾಯತ ಸಮಾಜದ ಮುಖಂಡರೊಬ್ಬರನ್ನು ಸಿಬಿಐ ಪೋಲಿಸರು ಬಂದಿಸಿರುವುದು ಖಂಡನೀಯ. ಉತ್ತಮ ಕುಟುಂಬದಿಂದ ಬಂದ ವ್ಯಕ್ತಿಯನ್ನು ಏಕಾಏಕಿ ಬಂಧಿಸಿರುವುದು ಸರಿಯಲ್ಲ. ಮೊದಲು ನೊಟೀಸ್ ನೀಡಬೇಕಿತ್ತು. ಈ ನಾಯಕರು ಚುನಾವಣೆಯಲ್ಲಿ ಮಾತ್ರ ಲಿಂಗಾಯತ ಸಮುದಾಯ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನಯ್ ಕುಲಕರ್ಣಿ ಅವರು ಈ ಪ್ರಕರಣದಲ್ಲಿ ಅಪರಾಧಿಯಲ್ಲ. ಹೀಗಾಗಿ ಅವರನ್ನು ವಿಚಾರಣೆಗೊಳಪಡಿಸುವುದು ಸರಿಯಲ್ಲ. ಸಿಎಂ ಈ ವಿಚಾರದಲ್ಲಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಪಂಚಾಮ ಸಾಲಿ ಮಠ ಹಾಗೂ ನಮ್ಮ ಸಮುದಾಯ ಅವರೊಂದಿಗೆ ಇದೆ. ವಿನಯ್ ಕುಲಕರ್ಣಿ ಅವರ ಬಗ್ಗೆ ಇಡೀ ಜಿಲ್ಲೆಯ ಜನರಿಗೆ ಗೊತ್ತಿದೆ. ರಾಜಕೀಯವಾಗಿ ಹತ್ತಿಕ್ಕಲು ಈ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಕ್ಸಿಜನ್ ಬಗ್ಗೆ ಯಾರು ಭಯಪಡಬೇಡಿ: ಸಚಿವ ಪ್ರಹ್ಲಾದ್ ಜೋಷಿ

ಕೊವಿಡ್ ರೋಗಿಗಳಿಗಾಗಿ ವಿಶೇಷ ಹೆಚ್ಚುವರಿ 10 ಆ್ಯಂಬ್ಯುಲೇನ್ಸ್ ಸಿದ್ಧಪಡಿಸಲಾಗಿದೆ. ಜನರು ಜಾಗೃತರಾಗಿರಬೇಕು. ಆದರೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ನೀಡಿದ ಸಲಹೆ ಏನು?

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಆಲಮಟ್ಟಿಗೆ ಸಿಎಂ ಆಗಮನ – ಬಿಗಿ ಭದ್ರತೆ ನಿಯೋಜನೆ

ಆಲಮಟ್ಟಿ : ರಾಜ್ಯದ ದೊರೆ ಆಗಮನದ ಹಿನ್ನೆಲೆಯಲ್ಲಿ ಉದ್ಯಾನ ನಗರಿ ಆಲಮಟ್ಟಿ ಸಕಲ ಭದ್ರತಾ ಸಿದ್ದತೆಯೊಂದಿಗೆ…

ಮತ್ತೆ ಕೇಂದ್ರದಿಂದ ಪಡಿತರರಿಗೆ ಶುಭ ಸುದ್ದಿ

ಕೊರೋನಾ ಹಿನ್ನಲೆಯಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪರಿತರ ಚೀಟಿ ಹೊಂದಿದವರಿಗೆ 5 ಕೆ.ಜಿ ಅಕ್ಕಿ ವಿತರಸಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ತಿಳಿಸಿದ್ದಾರೆ.