ಮುಂಬಯಿ : ಫೋರ್ಬ್ಸ್ ಪಟ್ಟಿಯಲ್ಲಿ ಹಿಂದಕ್ಕೆ ಬಿದ್ದಿರುವ ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಅವರು 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಷೇರು ಒಂದೇ ದಿನ ಸರಿ ಸುಮಾರು 5 ಬಿಲಿಯನ್ ಡಾಲರ್ ನಷ್ಟು ಕುಸಿತ ಕಂಡಿದೆ. ಹೀಗಾಗಿ ಅವರು 9ನೇ ಸ್ಥಾನಕ್ಕೆ ಕುಸಿಯುವಂತಾಗಿದೆ. ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರು ಸೋಮವಾರ ಒಂದೇ ದಿನ 7 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಫೋರ್ಬ್ಸ್ ರಿಯಲ್ ಟೈಮ್ ಡೇಟಾದಲ್ಲಿ ಮುಖೇಶ್ ಅವರು, ಗೂಗಲ್ ಸಹ ಸ್ಥಾಪಕ ಲ್ಯಾರಿ ಪೇಜ್ ಅವರಿಗಿಂತ ಹಿಂದೆ ಉಳಿದಿದ್ದಾರೆ. ರಿಲಯನ್ಸ್ ಷೇರು ಮೌಲ್ಯ ಶೇ. 9ರಂತೆ ರೂ. 1,871.90 ಕಳೆದುಕೊಂಡಿದ್ದು, ಕಳೆದ ಮೂರು ತಿಂಗಳಲ್ಲಿಯೇ ಇದು ಅತ್ಯಂತ ದೊಡ್ಡ ನಷ್ಟಕ್ಕೆ ಕಾರಣವಾಗಿದೆ.

2ನೇ ತ್ರೈಮಾಸಿಕ ವರದಿಯಲ್ಲಿ ನಿವ್ವಳ ಲಾಭ ಶೇ. 32.5ರಷ್ಟು ಕುಸಿತ ಕಂಡಿದೆ. ಹೀಗಾಗಿ ಮಾರುಕಟ್ಟೆ ಮೌಲ್ಯ ರೂ. 12,64,061.50 ಕೋಟಿಯಷ್ಟು ಕುಸಿತ ಕಂಡಿದೆ. ಷೇರುದಾರರು ಸುಮಾರು ರೂ. 1 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆ.

ಕಳೆದ ವರ್ಷ ಮೇ ತಿಂಗಳಿಂದ ಇಲ್ಲಿಯವರೆಗೆ ಪೆಟ್ರೋಲ್ ಬೆಲೆಯು 31ರೂ 95 ಪೈಸೆ ಹಾಗೂ ಡೀಸೆಲ್ ಬೆಲೆ 27ರೂ 58 ಪೈಸೆಗೆ ಏರಿಕೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಪ್ರಧಾನಿಯ ಮನ್ ಕಿ ಬಾತ್ ಏನು?

ದೆಹಲಿ: ಇಂದು ಪ್ರದಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಮಾಸಿಕ ಸಂಚಿಕೆಯಲ್ಲಿ…

ಯುದ್ಧಕ್ಕೆ ನೀವು ತಯಾರಿದ್ದರೆ ನಾವೂ ಸಿದ್ಧ!!

ನವದೆಹಲಿ : ಯುದ್ಧಕ್ಕೆ ಸಿದ್ಧವಾಗಿ ನಿಂತಿರುವ ಚೀನಾಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಯುದ್ಧಕ್ಕೆ ನೀವು ತಯಾರಿ ನಡೆಸಿದ್ದರೆ, ನಾವೂ ಸಿದ್ಧ ಎಂಬ ಮಾತನ್ನು ಭಾರತ ಹೇಳಿದೆ.

ಬಿರಿಯಾನಿಯಲ್ಲಿ ಲೆಗ್ ಪೀಸ್ ಕಡಿಮೆ ಕೊಟ್ಟಿದ್ದಕ್ ಈ ಭೂಪ್ ಏನ್ ಮಾಡಿದ ನೋಡಿ..!

ಹೈದರಾಬಾದ್: ಯಾಕೋ ಇವತ್ ಬಿರಿಯಾನಿ ಬೇಡ ಜೀವಕ್ಕ ಕೊಂಚ ನಿರಾಶೆಯಾಗೈತಿ ನೋಡ್ರಿ. ಆನ್ ಲೈನ್ ನ್ಯಾಗ್ ಬಿರಿಯಾನಿ ಬುಕ್ ಮಾಡಿದ ಮ್ಯಾಲೆ ಮನಿಗ್ ಬಂದ್ ಬಿರಿಯಾನ್ ಪ್ಯಾಕೇಟ್ ಬಿಚ್ಚಿ ಗಡದ್ ಆಗಿ ತಿಂದ್ರಾತು, ಅಂತ ಹೊಂಟ ವ್ಯಕ್ತಿಗೆ ಅದ್ಯಾಕೋ ಸಿಟ್ ಬಂದೈತಿ ನೋಡ್ರಿ.