ಬೆಂಗಳೂರು : ಕನಕಪುರದಿಂದ ಬಂದವರೇ ಹಣ ಹಂಚಿಕೆ ಮಾಡಿದ್ದಾರೆ ಎಂದು ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಆರೋಪಿಸಿದ್ದಾರೆ.

ಕನಕಪುರದಿಂದ ಬಂದವರು ಹಣ ಹಂಚುವ ಸಂದರ್ಭದಲ್ಲಿ 7 ಕಡೆ ಸಿಕ್ಕಿದ್ದಾರೆ. ಹೀಗಾಗಿಯೇ 7 ಎಫ್ ಐಆರ್ ಗಳು ದಾಖಲಾಗಿವೆ. ಕೆಲವರು ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಸದ್ಯ ಎಲ್ಲ ಕಡೆ ತನಿಖೆ ನಡೆಯುತ್ತಿದೆ. ಅವರ ಹಣಕ್ಕಾಗಿ ಇಲ್ಲಿಯ ಜನ ಕಾಯುವುದಿಲ್ಲ. ಇಲ್ಲಿನ ಮತದಾರರೆಲ್ಲ ಶ್ರಮಿಕರು. ಅವರನ್ನು ಹಣದಿಂದ ಕೊಂಡುಕೊಳ್ಳಲು ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ಸಂಜೆಯಿಂದ ಹೊರಗಡೆಯ ಜನರು ಯಾರೂ ಇಲ್ಲಿ ಇರುವುದಿಲ್ಲ. ಹೀಗಾಗಿ ಜನ ನೆಮ್ಮದಿಯಾಗಿ ಮತ ಚಲಾಯಿಸಲಿ. ವಿರೋಧಿಗಳು ಒಂದು ಮತಕ್ಕೆ ರೂ. 2 ಸಾವಿರದಿಂದ 5 ಸಾವಿರದವರೆಗೂ ಆಮಿಷ ಒಡ್ಡುತ್ತಿದ್ದಾರೆ. ಸ್ವಲ್ಪ ಮೈಮರೆತರೂ ನಮ್ಮ ಕ್ಷೇತ್ರವೂ ಕೆಜೆ, ಡಿಜೆ ಹಳ್ಳಿ ಆಗುತ್ತದೆ. ಕೊಲೆಗಳೂ ನಡೆಯುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನಕಪುರದಿಂದ ಜನರನ್ನು ಕರೆತಂದು ಬೆಂಗಳೂರನ್ನು ಹಾಳು ಮಾಡುವ ಅಗತ್ಯವಿಲ್ಲ. ಈ ನಗರವನ್ನು ಶಾಂತಿಯಿಂದ ಇರಲು ಬಿಡಿ. ನಾನು ಕ್ಷೇತ್ರಕ್ಕೆ ಮಿಲಿಟರಿ ಬರಲಿ ಅಂತ ಕೇಳಿದ್ದು, ಇದೇ ಕಾರಣಕ್ಕೆ ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *

You May Also Like

ಆಗಸ್ಟ್ ನಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ

ಕೊರೊನಾ ತಡೆಯಲು ಲಾಕ್ ಡೌನ್ ಸಂದರ್ಭದಲ್ಲಿ ವಿಮಾನ ಸಂಚಾರವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಈ ನಡುವೆ ದೇಶೀಯ ವಿಮಾನ ಯಾನಕ್ಕೆ ಅವಕಾಶವನ್ನೂ ನೀಡಿದೆ. ಆದರೆ, ಆಗಸ್ಟ್ ತಿಂಗಳಿನಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅವಕಾಶವನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಮಹಾಮಾರಿಗೆ ಬಾಗಲಕೋಟೆಯಲ್ಲಿ ಬಲಿ

ಬಾಗಲಕೋಟೆ: ಇಲ್ಲಿನ ನವನಗರದ 47ನೇ ಸೆಕ್ಟರ್ ನಿವಾಸಿ 50 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.…

ಮುಳಗುಂದ: ಮಳೆಯಿಂದ ಬೆಳೆ ಜಲಾವೃತ

ಮುಳಗುಂದ: ಶನಿವಾರ ರಾತ್ರಿ ಪಟ್ಟಣ ಸೇರಿದಂತೆ ಚಿಂಚಲಿ, ಕಲ್ಲೂರ ಹಾಗೂ ನೀಲಗುಂದ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಬಿರುಸಿನ ಮಳೆ ಸುರಿದಿದೆ.

ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಶಾಲೆಯ ಸಿ.ಬಿ.ಎಸ್.ಇ ಫಲಿತಾಂಶ ಶೇ.100 ಕ್ಕೆ 100 ರಷ್ಟು

ಗದಗ: ಸ್ಥಳೀಯ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾ ಪೀಠದ ಸಿ.ಬಿ.ಎಸ್.ಇ. ಶಾಲೆಗೆ ೨೦೨೧-೨೨ನೇ ಸಾಲಿನ ಸಿ.ಬಿ.ಎಸ್.ಇ…