ಗದಗ: ಬಂಜಾರ – ಲಂಬಾಣಿ ಸಮಾಜದ ಕುಲಗುರು, ಸಂತ ಸೇವಾಲಾಲ್ ವಂಶಸ್ಥರಾದ ಪೂಜ್ಯ ಡಾ.ರಾಮ್ ರಾವ್ ಮಹಾರಾಜ್ ಶುಕ್ರವಾರ ಲಿಂಗೈಕ್ಯರಾಗಿದ್ದಾರೆ.

ಬಂಜಾರರ ಆರಾಧ್ಯ ದೈವಸ್ವರೂಪಿ, ಮಹಾರಾಷ್ಟ್ರ ಪೌರಾಗಡ್ ನ  ಪರಮಪೂಜ್ಯ ಡಾ. ರಾಮ್ ರಾವ್ ಮಹಾರಾಜರು ನಿನ್ನೆ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ 10.30ಕ್ಕೆ ಶಿವೈಕ್ಯರಾಗಿದ್ದಾರೆ. ಇದರಿಂದ ಬಂಜಾರ ಜನಾಂಗಕ್ಕೆ ತುಂಬಲಾರದ ನಷ್ಟ ಆಗಿದೆ.

ಪೂಜ್ಯರ ಅಂತ್ಯಕ್ರಿಯೇ ಸೋಮವಾರ ಮಹರಾಷ್ಟ್ರದ ಪೌರಾದೇವಿಯಲ್ಲಿ ನಡೆಯಲಿದೆ. ಜಗತ್ತಿನಾದ್ಯಂತ ಅಪಾರ ಭಕ್ತ ಸಮೂಹ ಹೊಂದಿರುವ ಕಾರಣ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.   

ರಾಮ್ ರಾವ್ ಮಹಾರಾಜರು ಲಿಂಗೈಕ್ಯರಾದ ಹಿನ್ನೆಲೆ ರಾಜ್ಯ ಸೇರಿದಂತೆ ದೇಶ ಹಾಗೂ ವಿದೇಶದ ಬಂಜಾರ ಬಾಂಧವರು ಶ್ರದ್ಧಾಂಜಲಿ ಸಭೆಗಳ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಎಲ್‌ಪಿಜಿ ದರ ದುಪ್ಪಟ್ಟು: ಧರ್ಮೇಂದ್ರ ಪ್ರಧಾನ್

ಕಳೆದ 7 ವರ್ಷಗಳಲ್ಲಿ ಎಲ್‌ಪಿಜಿ ದರ ದುಪ್ಪಟ್ಟಾಗಿದ್ದು, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಶೇ.459ರಷ್ಟು ಹೆಚ್ಚಿದೆ ಎಂದು ಕೇಂದ್ರ ಸರಕಾರ ಒಪ್ಪಿಕೊಂಡಿದೆ.

ಕೊರೊನಾ ಸಂದಿಗ್ಧತೆ: ಸಿಎಂಗಳ ಜೊತೆ ಪ್ರಧಾನಿ ವಿಡಿಯೋ ಸಂವಾದ

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತ್ತು ನಾಳೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳೊಂದಿಗೆ…

2019-20: ತೆರಿಗೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

2019-20ರ ಹಣಕಾಸು ವರ್ಷದ ತೆರಿಗೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ದಿನಾಂಕ ಮತ್ತು ಅಂತಿಮ ದಿನಾಂಕಗಳನ್ನು (ಡೆಡ್ ಲೈನ್) ಇಲ್ಲಿ ಪ್ರಕಟಿಸಲಾಗಿದೆ. ತೆರಿಗೆ ಪಾವತಿದಾರರಾಗಿದ್ದಲ್ಲಿ, ಇವನ್ನು ನೋಟ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸರ್ಕಾರಿ ನೌಕರರು ಆರೋಗ್ಯ ವಿಮಾ ಸೌಲಭ್ಯವನ್ನು ಪಡೆಯಬಹುದು- ಸುಪ್ರೀಂ

ಕೇಂದ್ರ ಸರ್ಕಾರದ ನೌಕರರು ತುರ್ತು ಸಮಯದಲ್ಲಿ ಸಿಜಿಹೆಚ್‌ಎಸ್‌ ಅಂದರೆ ಕೇಂದ್ರ ಸರ್ಕಾರ ಸೂಚಿಸಿರುವ ಆಸ್ಪತ್ರೆಗಳ ಹೊರತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ನೌಕರರ ಹಕ್ಕಿನ ಅನ್ವಯ ಸರ್ಕಾರದಿಂದ ಮೆಡಿಕ್ಲೇಮ್‌ ಪಡೆಯಬುದು ಎಂದು ಹೇಳುವ ಮೂಲಕ ಸರ್ಕಾರಿ ನೌಕರರಿಗೆ ಸುಪ್ರೀಂ ಸಿಹಿ ಸುದ್ದಿ ನೀಡಿದೆ.