ಅಲ್ವಾರ್ : ದಲಿತ ಯುವಕನನ್ನು ಉದ್ಯೋಗದಾತನೇ ಸುಟ್ಟು ಹಾಕಿರುವ ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದಿದೆ.

ಕಮಲ್ ಕಿಶೋರ್ ಮೃತ ದಲಿತ ಯುವಕನಾಗಿದ್ದು, ಬಾಕಿ ವೇತನವನ್ನು ನೀಡುವಂತೆ ಯುವಕ ನಿರಂತರವಾಗಿ ಕೇಳುತ್ತಿದ್ದ. ಇದರಿಂದ ಕೋಪಗೊಂಡ ಮಾಲೀಕ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಸರ್ಪಂಚ್ ನ ಪುತ್ರನೂ ಈ ಪ್ರಕರಣದಲ್ಲಿ ಇದ್ದಾನೆ ಎಂದು ತಿಳಿದು ಬಂದಿದೆ.

ಆತನ ಸಹೋದರ ರೂಪ್ ಸಿಂಗ್ ಧನ್ಕಾ, ತನ್ನ ಸಹೋದರ ಉದ್ದೇಶಪೂರ್ವಕವಾಗಿ ಮಾಡಿದ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತ ಯುವಕ, ರಾಕೇಶ್ ಯಾದವ್ ಹಾಗೂ ಸುಭಾಷ್ ಚಂದ್ ಎಂಬುವವರು ನಡೆಸುತ್ತಿದ್ದ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಆತನಿಗೆ ಕಳೆದ 5 ತಿಂಗಳಿಂದ ಸಂಬಳ ನೀಡಿರಲಿಲ್ಲ. ಕೇಳಿದರೆ, ಮಾಲೀಕರು ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ.

ಶನಿವಾರ ಮಧ್ಯಾಹ್ನ ಇಬ್ಬರೂ ಮಾಲೀಕರು ಆತನ ಮನೆಗೆ ಬಂದಿದ್ದರು. ಆಗ ಆತನನ್ನು ಕರೆದುಕೊಂಡು ಹೋಗಿದ್ದರು. ಆದರೆ, ಮರು ದಿನವೇ ಅಂಗಡಿಗೆ ಬೆಂಕಿ ಬಿದ್ದಿದೆ ಎಂಬ ಸುದ್ದಿ ಹಬ್ಬಿತು. ಸ್ಥಳಕ್ಕೆ ಪೊಲೀಸರು ತೆರಳುವ ವೇಳೆಗೆ ಮದ್ಯದ ಅಂಗಡಿ ಹಾಗೂ ಅಂಗಡಿಯಲ್ಲಿ ಕಬ್ಬಿಣದ ಕಂಟೈನರ್ ನಲ್ಲಿದ್ದ ಕಮಲ್ ನ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಆದರೆ, ಕುಟುಂಬ ಸದಸ್ಯರು ಉದ್ಧೇಶಪೂರ್ವಕವಾಗಿಯೇ ಆತನನ್ನು ಸುಟ್ಟು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಕೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಿರೇನ್ ಸಿಂಗ್ ಮಣಿಪುರ ಸಿಎಂ ಆಗಿ ಅವಿರೋಧವಾಗಿ ಆಯ್ಕೆ

ಉತ್ತರಪ್ರಭ ಸುದ್ದಿಮಣಿಪುರ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಹಂಗಾಮಿ ಸಿಎಂ ಎನ್ ಬಿರೇನ್ ಸಿಂಗ್…

ವಿಶ್ವ ಟೆಸ್ಟ್ನಲ್ಲಿ ಎರಡನೇ ಸ್ಥಾನಕ್ಕೆ ಭಾರತ

ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

ಕೇಂದ್ರದಿಂದ ರಾಜ್ಯಕ್ಕೆ ಜಿ.ಎಸ್.ಟಿ. ದ್ರೋಹ: ಸಿದ್ದರಾಮಯ್ಯ

ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ನೀಡಲು ಸಂಗ್ರಹ ಮಾಡಿದ್ದ ಸೆಸ್ ಹಣವನ್ನು @narendramodi ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಸಿಎಜಿ ನೀಡಿರುವ ವರದಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಬಗೆದಿರುವ ಜಿ ಎಸ್ ಟಿ ದ್ರೋಹಕ್ಕೆ ಪುರಾವೆಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾದ ಮಧ್ಯೆಯೂ ಸಂಗ್ರಹವಾದ ಜಿಎಸ್ ಟಿ ಮೊತ್ತ ಎಷ್ಟು ಗೊತ್ತಾ?

ನವದೆಹಲಿ : ಹಣಕಾಸು ಇಲಾಖೆ ಜಿಎಸ್‌ಟಿ ಸಂಗ್ರಹದ ಮಾಹಿತಿ ಬಿಡುಗಡೆ ಮಾಡಿದ್ದು, ಜೂನ್ ತಿಂಗಳಲ್ಲಿ ಒಟ್ಟು…