ದುಬೈ : ಚೆನ್ನೈ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಪ್ಲೇ ಆಫ್‌ ಗೆ ಪ್ರವೇಶಿಸಲು ಈ ಪಂದ್ಯವೇ ಚೆನ್ನೈಗೆ ನಿರ್ಣಾಯಕ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರಷ್ಟೇ ಚೆನ್ನೈನ ಪ್ಲೇ ಆಫ್ ಕನಸು ಜೀವಂತವಾಗಿ ಉಳಿಯಲಿದೆ.

ಇಂದು ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡ ಚೆನ್ನೈ ಎದುರಿಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸದ್ಯ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ತಾನು ಆಡಿದ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಬೀಗಿದೆ.  ಆದರೆ, ಚೆನ್ನೈ ತಂಡ ಮಾತ್ರ ಕೊನೆಯ ಸ್ಥಾನದಲ್ಲಿದೆ. ತಾನು ಆಡಿದ 11 ಪಂದ್ಯಗಳಲ್ಲಿ 3 ಪಂದ್ಯ ಗೆದ್ದು ಹೀನಾಯ ಸ್ಥಿತಿಯಲ್ಲಿದೆ. 

ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲಿಯೂ ಹಿನ್ನಡೆ ಅನುಭವಿಸುತ್ತಿರುವ ಚೆನ್ನೈ ಇಂದು ಟಾಸ್ ಗೆದ್ದರೆ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇಂದು ನಡೆಯುತ್ತಿರುವ ಈ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ನೆರವಾಗಬಲ್ಲದು. ಈ ಮೈದಾನದಲ್ಲಿ 160 ರನ್ ಗಳಿಸಿದರೂ ಗೆಲ್ಲುವ ಸಾಧ್ಯತೆ ದಟ್ಟ ಎನ್ನಬಹುದು. 

ಇಂದು ಚೆನ್ನೈ ತಂಡದಲ್ಲಿ ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎನ್.ಜಗದೀಸನ್, ಎಂ.ಎಸ್.ಧೋನಿ (ಸಿ & ಡಬ್ಲ್ಯೂಕೆ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ / ಕೆಎಂ ಆಸಿಫ್, ಇಮ್ರಾನ್ ತಾಹಿರ್, ಜೋಶ್ ಹ್ಯಾಝಲ್ವುಡ್ / ಲುಂಗಿ ಎನ್‌ಗಿಡಿ / ಮಿಚೆಲ್ ಸ್ಯಾಂಟ್ನರ್ ಆಡುವ ಸಾಧ್ಯತೆ ಇದೆ.

ಅಲ್ಲದೇ, ಬೆಂಗಳೂರು ತಂಡದಲ್ಲಿ ಆ್ಯರನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ಸಿ), ಎಬಿ ಡಿವಿಲಿಯರ್ಸ್ (ವಿಕೆ), ಗುರ್ಕೀರತ್ ಸಿಂಗ್ ಮಾನ್, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್ ಆಡುವ ಸಾಧ್ಯತೆ ಇದೆ. 

Leave a Reply

Your email address will not be published. Required fields are marked *

You May Also Like

ಚೆನ್ನೈ ತಂಡದ ಕೆಲವರು ಸರ್ಕಾರಿ ನೌಕರಿ ಸಿಕ್ಕಂತೆ ಮಾಡುತ್ತಿದ್ದಾರೆ – ಸೆಹ್ವಾಗ್!

ಮುಂಬಯಿ : ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆ.ಎಲ್. ರಾಹುಲ್ ಆರೆಂಜ್ ಕ್ಯಾಪ್ ಗಾಗಿ ಆಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಅಭಿಮಾನಿಗಳು!

ದುಬೈ : ಬ್ಯಾಟಿಂಗ್ ನಲ್ಲಿ ಅಬ್ಬರಿಸಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾಗುತ್ತಿರುವ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ವಿರುದ್ಧ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಭರ್ಜರಿ ಫಾರ್ಮ್ ಗೆ ಮರಳಿದ ತಂಡದ ಸ್ಟಾರ್ ಆಟಗಾರರಿಗೆ ಗಿಫ್ಟ್ ನೀಡಿದ ಪ್ರೀತಿ ಜಿಂಟಾ!

ದುಬೈ : ಪ್ರಾರಂಭದಲ್ಲಿ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಗೆ ಮರಳಿದೆ. ಅಲ್ಲದೇ, ಕಳೆದ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಹೀಗಾಗಿ ತಂಡದ ಮಾಲಕರಾದ ಪ್ರೀತಿ ಜಿಂಟಾ ಅವರು ತಂಡದ ನಾಯಕ ಹಾಗೂ ಗೇಲ್ ಗೆ ಉಡುಗೊರೆ ನೀಡಿದ್ದಾರೆ.

ಹರ್ಭಜನ್ ಸಿಂಗ್ ವಿರುದ್ಧ ಚೆನ್ನೈ ಅಭಿಮಾನಿಗಳೇಕೆ ಕಿಡಿ ಕಾರುತ್ತಿದ್ದಾರೆ?

ಮುಂಬಯಿ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಸನ್‍ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ನಡೆದ ಪಂದ್ಯದ ಸಂದರ್ಭದಲ್ಲಿ ಅಂಪೈರ್ ವೈಡ್ ನೀಡಲು ಮುಂದಾಗಿ ಧೋನಿ, ಆಕ್ಷೇಪಿಸುತ್ತಿದ್ದಂತೆ ತೀರ್ಮಾನ ಬದಲಿಸಿದ್ದ ಘಟನೆ ಸದ್ಯ ಚೆರ್ಚೆಗೆ ಕಾರಣವಾಗಿದೆ.