ದುಬೈ : ಆರ್ ಸಿಬಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ, ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಆರ್ಧಶತಕದ ನೆರವಿನಿಂದ ನಿಗದಿತ ಓವರ್ ಗಳಲ್ಲಿ ಕೇವಲ 145 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಅಂಬಾಟಿ ರಾಯುಡು ಮತ್ತು ರುತುರಾಜ್ ಗಾಯಕ್ ವಾಡ್ ಅವರ ತಾಳ್ಮೆಯ ಜೊತೆಯಾಟದ ನೆರವಿನಿಂದ ಎಂಟು ಬೌಲ್ ಇರುವಾಗಲೇ 150 ರನ್ ಹೊಡೆದು ಗೆದ್ದು ಬೀಗಿದೆ.
ಈ ಹಿಂದೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಭರ್ಜರಿಯಾಗಿ ಜಯಗಳಿಸಿತ್ತು. ಸದ್ಯ ಈ ಸೇಡನ್ನು ಚೆನ್ನೈ ತೀರಿಸಿಕೊಂಡಿದೆ. ಈ ಪಂದ್ಯದಲ್ಲಿ ಕೊಹ್ಲಿ ಕೇವಲ 52 ಬೌಲ್ ಗಳನ್ನು ಆಡಿ 90 ರನ್ ಗಳಿಸಿದ್ದರು. ಈ ಮೂಲಕ ಆರ್ ಸಿಬಿ 37 ರನ್ಗಲಳ ಅಂತರದಲ್ಲಿ ಜಯ ಸಾಧಿಸಿತ್ತು. ಸದ್ಯ ಸೇಡು ತೀರಿಸಿಕೊಂಡು ಚೆನ್ನೈ ಬೀಗಿದೆ.
ಈ ಪಂದ್ಯದಲ್ಲಿ ಕಳಪೆ ಬೌಲಿಂಗ್ ಹಾಗೂ ಕಳಪೆ ಬ್ಯಾಟಿಂಗ್ ಮೂಲಕ ಆರ್ ಸಿಬಿ ತಂಡ ಸೋಲು ಕಂಡಿದೆ. 145 ರನ್ಗದಳ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಐದು ಓವರ್ ಗಳ ಮುಕ್ತಾಯಕ್ಕೆ 46 ರನ್ ಸಿಡಿಸಿದ್ದರು. ಆ ನಂತರ ಡು ಪ್ಲೆಸಿಸ್ ಔಟ್ ಆಗಿದ್ದರು. ಆ ನಂತರ ಅಂಬಟಿ ರಾಯುಡು ಹಾಗೂ ಋತುರಾಜ್ ಗಾಯಕವಾಡ್ ಜೊತೆಯಾಗಿ 49 ಬೌಲ್ ಗೆ 67 ರನ್ ಚಚ್ಚಿದರು. 39 ರನ್ ಸಿಡಿಸಿ ಆಡುತ್ತಿದ್ದ ಅಂಬಾಟಿ ರಾಯುಡು ಅವರನ್ನು ಯುಜ್ವೇಂದ್ರ ಚಾಹಲ್ ಅವರು ಕ್ಲೀನ್ ಬೌಲ್ಡ್ ಮಾಡಿದರು. ಗಾಯಕ್ ವಾಡ್ 42 ಬೌಲ್ ಗೆ ಅರ್ಧಶತಕ ಸಿಡಿಸಿ ಮಿಂಚಿದರು.
ನಂತರ ಒಂದಾದ ನಾಯಕ ಎಂ.ಎಸ್ ಧೋನಿ ಹಾಗೂ ಗಾಯಕ್ ವಾಡ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಗೆ ಗಾಯಕ್ ವಾಡ್ 65 ರನ್ ಬಾರಿಸಿದೆ, ಧೋನಿ 19 ರನ್ ಸಿಡಿಸಿದರು.