ನವದೆಹಲಿ : ಭಾರತೀಯ ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್(61) ಅವರಿಗೆ ಹೃದಯಘಾತವಾಗಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪತ್ರಕರ್ತೆ ಟೀನಾ ಠಾಕೂರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಕಪಿಲ್ ದೇವ್ ಅವರು ಇಲ್ಲಯವರೆಗೂ ಆರೋಗ್ಯವಾಗಿಯೇ ಇದ್ದರು. ಅಲ್ಲದೇ, ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು.

ಭಾರತ ತಂಡದ ಪರ 131 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಪಿಲ್ ದೇವ್, 5,248 ರನ್ ಗಳಿಸಿದ್ದು, 8 ಶತಕಗಳನ್ನು ಸಿಡಿಸಿದ್ದಾರೆ. 225 ಏಕದಿನ ಪಂದ್ಯಗಳಲ್ಲಿ 3,783 ರನ್ ಗಳಿಸಿದ್ದಾರೆ. ಅಲ್ಲದೇ ಟೆಸ್ಟ್ ನಲ್ಲಿ 434 ವಿಕೆಟ್, ಏಕದಿನ ಮಾದರಿ ಕ್ರಿಕೆಟ್ನೊಲ್ಲಿ 253 ವಿಕೆಟ್ ಪಡೆದಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಕಪಿಲ್ ದೇವ್ ಅವರು ಗುಣಮುಖರಾಗಲಿ ಎಂದು ಹಲವು ಗಣ್ಯರು, ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ರೈನಾ, ರಾಯುಡುರನ್ನು ಚೆನ್ನೈ ನೆನೆಯುತ್ತಿರುವುದೇಕೆ?

ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡು ಸೋಲುಗಳನ್ನು ಕಾಣುತ್ತಿದ್ದಂತೆ ಕೋಚ್ ಗೆ ತಲೆನೋವು ಶುರುವಾಗಿದೆ. ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅವರು ಅನುಪಸ್ಥಿತಿ ಕಾಡುತ್ತಿದೆ ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಫೆ. 12 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ

ಮುಳಗುಂದ ಸಮೀಪದ ಹೊಸೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಯಂಗ್ ಸ್ಟಾರ್ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನ ಇದೇ ಫೆ. 12 ರಂದು ಮಹಾಂತೇಶಗೌಡ ಗೌಡರ ಅವರ ಹೊಲದಲ್ಲಿ ಸಿದ್ದಗೊಳಿಸಿದ ಮೈದಾನದಲ್ಲಿ ಏರ್ಪಡಿಸಲಾಗಿದೆ. ಎಂದು ಸಮಿತಿ ಸದಸ್ಯ ಬಸವರಾಜ ಬಂಡಿವಡ್ಡರ ತಿಳಿಸಿದರು.

ಧೋನಿ ನಿವೃತ್ತಿಯಾಗಲು ಇದೂ ಕಾರಣವಂತೆ!

ಕೊರೊನಾವೈರಸ್, ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರ ತಾಳುವಂತೆ ಮಾಡಿತು ಎಂದು ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಜಿತ್ ಅಗರ್ಕರ್ ಪಾಂಟಿಂಗ್ ಗೆ ಹಾಕಿದ ಸವಾಲು ಏನು?

ಮುಂಬಯಿ: ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಮೈದಾನದಲ್ಲಿ ಮಾಜಿ ಆಲ್‌ರೌಂಡರ್‌ ಅಜಿತ್‌ ಅಗರ್ಕರ್‌…