ಬೆಂಗಳೂರು : ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿದ್ದವರಿಗೆ ಉತ್ತರ ಕರ್ನಾಟಕವೆಂದರೆ ಅಲರ್ಜಿ ಎಂಬಂತಾಗಿದೆ. ಕಚೇರಿಗಳನ್ನು ಸ್ಥಳಾಂತರಿಸುವುದಾಗಲಿ, ಉಪ ಕುಲಪತಿಗಳನ್ನು ನೇಮಕ ಮಾಡಲಿ. ಅಭಿವೃದ್ದಿ ಕೆಲಸಗಳನ್ನು ಮಾಡದೆ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅನ್ಯಾಯ ಮಾಡುತ್ತಿರುವುದನ್ನು ಬಹಳ ಕಾಲ ಸಹಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ಹೊರಟ್ಟಿ ಅವರು ಗೃಹ ಸಚಿವರಿಗೆ ದೀರ್ಘ ಪತ್ರ ಬರೆದು, ತಮ್ಮ ನೋವು ತೋಡಿಕೊಂಡು, ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಧಾರವಾಡದ ಉಚ್ಛ ನ್ಯಾಯಾಲಯಕ್ಕೆ ನೇಮಕ ವಿಷಯವಾಗಲಿ, ಬೋರ್ಡ್, ಕಾರ್ಪೋರೇಶನ್ ವಿಚಾರದಲ್ಲಿ, ಕೆಪಿಎಸ್ಸಿ ಸದಸ್ಯರನ್ನು ನೇಮಿಸುವ ವಿಚಾರ, ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡುವ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿರ್ಧಾರದಿಂದ ಸರ್ಕಾರ ತಕ್ಷಣವೇ ಹಿಂದೆ ಸರಿಯಬೇಕು – ಕುಮಾರಸ್ವಾಮಿ!

ಬೆಂಗಳೂರು: ರಾಜ್ಯದಾದ್ಯಂತ ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ…

ಕೋರಿಯಾದಿಂದ ಕೋಲಾರಕ್ಕೂ ಬಂದಿವೆ ಸೋಂಕು ಟೆಸ್ಟ್ ಕಿಟ್ ಗಳು

ಕೊರೋನಾ ಸೋಂಕು ತುರ್ತಾಗಿ ಪತ್ತೆ ಹಚ್ಚಲು ಕೋರಿಯಾದಿಂದ ಕೋಲಾರ ಜಿಲ್ಲೆಯ ಆರೋಗ್ಯ ಇಲಾಖೆಗೆ ರ್ಯಾಪಿಡ್ ಆಂಟಿ ಬಾಡಿ ಟೆಸ್ಟಿಂಗ್ ಕಿಟ್ ಗಳು ಬಂದಿವೆ. ಈ ಮೂಲಕ ಇಪ್ಪತ್ತು ನಿಮಿಷದೊಳಗಾಗಿ ಕೊರೋನಾ ಸೇರಿ ಯಾವುದೇ ಸೋಂಕಿದ್ದರೂ ಪತ್ತೆ ಹಚ್ಚಬಹುದಾಗಿದೆ. ಇದು ದೇಶದಲ್ಲಿ ಮೊದಲ ಪ್ರಯತ್ನ ಎಂದು ಹೇಳಲಾಗುತ್ತಿದೆ.

ಆದುನಿಕತೆಯಲ್ಲಿ ಜಾನಪದ ಸಾಹಿತ್ಯ ಮರೆಯಾಗದಿರಲಿ: ದೊಡ್ಡಮನಿ

ಜಾನಪದ ಸಾಹಿತ್ಯ ಇಂದಿನ ಆಧುನಿಕ ಸ್ಪರ್ಶದಿಂದ ಕಣ್ಮರೆಯಾಗುತ್ತಿದ್ದು, ವೈಶಿಷ್ಟಪೂರ್ಣವಾದ ಈ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ರಾಜ್ಯದಲ್ಲಿಂದು 1843 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 1843 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 25317…