ಬೆಂಗಳೂರು: ರಾಜ್ಯದಲ್ಲಿ ಇಂದು 6,297 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 66 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 8,500 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,76,901ಕ್ಕೆ ಏರಿಕೆಯಾಗಿದೆ. ಅಲ್ಲದೇ, ರಾಜ್ಯದಲ್ಲಿ 1,03,945 ಸಕ್ರಿಯ ಪ್ರಕರಣಗಳಿವೆ.

ಇಂದು 66 ಜನರ ಬಲಿಯೊಂದಿಗೆ ರಾಜ್ಯದಲ್ಲಿ ಇದುವರೆಗೂ 10,608 ಜನ ಸಾವನ್ನಪ್ಪಿದಂತಾಗಿದೆ. ಸದ್ಯ 941 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿನ ಖಚಿತ ಪ್ರಕರಣಗಳು ಪ್ರಮಾಣ ಶೇ.6.41ರಷ್ಟಿದೆ. ಇತ್ತ ಕೋವಿಡ್-19 ಮರಣ ಪ್ರಮಾಣ ಶೇ. 1.04ರಷ್ಟಿದೆ. ಇಂದು 98,236 ಸ್ಯಾಂಪಲ್ ಗಳನ್ನು ಕೊರೊನಾಗೆ ಪರೀಕ್ಷೆಗೆ ಒಳಪಡಿಸಲಾಗಿದೆ.

ಬಾಗಲಕೋಟೆ 27, ಬಳ್ಳಾರಿ 188, ಬೆಳಗಾವಿ 89, ಬೆಂಗಳೂರು ಗ್ರಾಮಾಂತರ 319, ಬೆಂಗಳೂರು ನಗರ 2,821, ಬೀದರ್ 10, ಚಾಮರಾಜನಗರ 32, ಚಿಕ್ಕಬಳ್ಳಾಪುರ 166, ಚಿಕ್ಕಮಗಳೂರು 104, ಚಿತ್ರದುರ್ಗ 109, ದಕ್ಷಿಣ ಕನ್ನಡ 146, ದಾವಣಗೆರೆ 206, ಧಾರವಾಡ 104, ಗದಗ 38, ಹಾಸನ 249, ಹಾವೇರಿ 42, ಕಲಬುರಗಿ 67, ಕೊಡಗು 24, ಕೋಲಾರ 29, ಕೊಪ್ಪಳ 77, ಮಂಡ್ಯ 108, ಮೈಸೂರು 451, ರಾಯಚೂರು 25, ರಾಮನಗರ 23, ಶಿವಮೊಗ್ಗ 116, ತುಮಕೂರು 327, ಉಡುಪಿ 103, ಉತ್ತರ ಕನ್ನಡ 180, ವಿಜಯಪುರ 80 ಮತ್ತು ಯಾದಗಿರಿಯಲ್ಲಿ 37 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Leave a Reply

Your email address will not be published. Required fields are marked *

You May Also Like

ಕೊರೋನಾ ಸೊಂಕು: ಪೊಲೀಸರಲ್ಲೂ ಆತಂಕ

ಕೊರೋನಾ ಸೊಂಕು: ಪೊಲೀಸರಲ್ಲೂ ಆತಂಕ ಬೆಂಗಳೂರು : ಬೇಗೂರು ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು…

ಆಮರಣ ಉಪವಾಸ ಸತ್ಯಾಗ್ರಹ 3ನೇ ದಿನದತ್ತ : ಧರಣಿ ನಿರತರ ಆರೋಗ್ಯ ತಪಾಸಣೆ

ಉತ್ತರಪ್ರಭಆಲಮಟ್ಟಿ: ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿನ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಬೇಕು ಎಂದು…

ಕೋವಿಶೀಲ್ಡ್ ಎರಡನೇ ಡೋಸ್ ಪಡೆದ ಡಿಸಿ

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಭಾನುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಪಡೆದಿದ್ದಾರೆ. 28 ದಿನಗಳ ಹಿಂದೆ ಮೊದಲ ಡೋಸ್ ಪಡೆದಿದ್ದ ಅವರು, ಇದೀಗ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.