ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 61,871 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 74,94,552ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಒಂದೇ ದಿನ ದೇಶದಲ್ಲಿ 1,033 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ 1,14,031 ಸೋಂಕಿತರು ಬಲಿಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. 

ದೇಶದಲ್ಲಿ 24 ಗಂಟೆಗಳಲ್ಲಿ 9,70,173 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಮೂಲಕ ದೇಶದಲ್ಲಿ 9,42,24,190 ಕೊರೊನಾ ಪರೀಕ್ಷೆಗಳನ್ನು ಇಲ್ಲಿಯವರೆಗೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

ದೇಶದಲ್ಲಿನ ಒಟ್ಟು 74,94,552 ಸೋಂಕಿತರ ಪೈಕಿ, ಇಲ್ಲಿಯವರೆಗೆ 65,97,210 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಅಲ್ಲದೆ, ಇನ್ನೂ 7,83,311 ಸಕ್ರಿಯ ಪ್ರಕರಣಗಳಿದ್ದು, ಅವರು ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಾಲು ಮರದ ತಿಮ್ಮಕ್ಕನನ್ನು ನೆನೆದ ಬಜ್ಜಿ

ಭಾರತ ಕ್ರಿಕೆಟ್ ತಂಡದ ಆಟಗಾರ ಹರ್ಭಜನ್ ಸಿಂಗ್, ರಾಜ್ಯದ ಹೆಮ್ಮೆಯ ತಾಯಿಯನ್ನು ನೆನೆದು ಟ್ವೀಟ್ ಮಾಡಿದ್ದಾರೆ.ಸಾಲುಮರದ ತಿಮ್ಮಕ್ಕ ಅವರನ್ನು ಭಜ್ಜಿ ನೆನೆದು ಟ್ವೀಟ್ ಮಾಡಿದ್ದಾರೆ.

ಹಸಿವು ತಾಳದೆ ಸತ್ತ ನಾಯಿಯನ್ನೇ ತಿಂದ ವ್ಯಕ್ತಿ!

ಹಸಿವು ತಾಳಲಾರದೆ ವ್ಯಕ್ತಿಯೋರ್ವ ರಸ್ತೆಯಲ್ಲಿ ಅಪಘಾತವಾಗಿ ಸತ್ತು ಬಿದ್ದಿದ್ದ ನಾಯಿಯನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ.

ಹಲವು ವರ್ಷಗಳಲ್ಲಿ 139 ಜನರಿಂದ ಅತ್ಯಾಚಾರಕ್ಕೊಳಗಾದ ಮಹಿಳೆ

ಮಹಿಳೆಯೊಬ್ಬರಿಗೆ ಕೆಲವು ವರ್ಷಗಳಲ್ಲಿ 139 ಜನರು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ನಡೆದಿದ್ದು, 25 ವರ್ಷದ ಮಹಿಳೆ ಈ ಕುರಿತು ದೂರು ದಾಖಲಿಸಿದ್ದಾರೆ. ಈ ಸಂತ್ರಸ್ಥ ಮಹಿಳೆಗೆ 2010ರಲ್ಲಿ ವಿವಾಹವಾಗಿತ್ತು. ಆದರೆ, ಈ ಮಹಿಳೆ ಒಂದೇ ವರ್ಷದಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು. ಹೀಗಾಗಿ ಮಾಜಿ ಪತಿಯ ಕೆಲವು ಕುಟುಂಬ ಸದಸ್ಯರು ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಬಿಹಾರ ಹಾಳು ಮಾಡಿದ್ದು, ಯುಪಿಎ ಹಾಗೂ ಮೈತ್ರಿ – ಮೋದಿ!

ಬಿಹಾರ : ಯುಪಿಎ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಸಿಎಂ ಆಗಿದ್ದರು. ಆದರೆ, ಅವರ ಪ್ರತಿಯೊಂದು ನಿರ್ಧಾರಗಳಿಗೆ ಕಾಂಗ್ರೆಸ್ ಅಡ್ಡಗಾಲು ಹಾಕಿತು. ಹೀಗಾಗಿ ರಾಜ್ಯ ಅಭಿವೃದ್ಧಿಯಿಂದ ಹಿಂದೆ ಉಳಿಯಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.