ದುಬೈ :  ಆಗತಾನೆ ಹುಟ್ಟಿದ ಮಗು ವೈದ್ಯರ ಮುಖದಲ್ಲಿದ್ದ ಮಾಸ್ಕ್ ಕಿತ್ತು ಹಾಕಿದೆ. ಈ ಫೋಟೋ ಸೆರೆ ಹಿಡಿದ ವೈದ್ಯರು, ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ತೊಲಗುವ ಸಂದೇಶ ಇದು ಎಂದು ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ವೈದ್ಯರೊಬ್ಬರು ಈ ಫೋಟೋ ಶೇರ್ ಮಾಡಿದ್ದಾರೆ. ಸಮೀರ್ ಚೀಬ್ ಎಂಬುವವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ. ಶೀಘ್ರದಲ್ಲಿಯೇ ಮಾಸ್ಕ್ ತೆಗೆಯುವ ಮುನ್ಸೂಚನೆ ಸಿಕ್ಕಂತಾಗಿದೆ ಎಂದು ವೈದ್ಯರು ಇದಕ್ಕೆ ತಲೆ ಬರಹ ನೀಡಿದ್ದರು. 

ಸದ್ಯ ಈ ಫೋಟೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋಕ್ಕೆ ಕಮೆಂಟ್ ಗಳ ಸುರಿಮಳೆ ಸುರಿಯುತ್ತಿವೆ. ಇನ್ನೂ ಜಗತ್ತಿನ ಕಂಟಕ ಕೊರೊನಾ ಮಾಯವಾಗಲಿದೆ. ಮಾಸ್ಕ್ ಹಾಕಿಕೊಳ್ಳದೆ ಓಡಾಡುವ ದಿನಗಳ ಬರಲಿವೆ ಎಂದು ಚರ್ಚೆಗಳು ನಡೆಯುತ್ತಿವೆ. 

ಹೀಗಾಗಿ ನೆಟ್ಟಿಗರು ಕೂಡ ಇದೇ ಧಾಟಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಪ್ರಪಂಚವು ಕೊರೊನಾದಿಂದ ಮುಕ್ತಿ ಹೊಂದಲಿದೆ. ಈ ಚಿತ್ರ ಅದರ ಸಂಕೇತವಾಗಿದೆ ಎಂದು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಟಿಕ್ ಟಾಕ್ ಸೇರಿ 59 App ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ದೆಹಲಿ: ದೇಶದ ಸಮಗ್ರತೆ, ಏಕತೆ ಹಾಗೂ ದೇಶದ ರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯಗಳ ಭದ್ರತೆಯ ಜೊತೆಗೆ ಸಾರ್ವಜನಿಕರ…

ಕೊರೋನಾ ವೈರಸ್ ಗೆ ಗ್ಲೆನ್ ಮಾರ್ಕ್ ಸಂಸ್ಥೆಯ ಫ್ಯಾಬಿಫ್ಲೂ ಅಸ್ತ್ರ

ದೆಹಲಿ: ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಜನರನ್ನು ಬಾಧಿಸುತ್ತಿರುವ ಕೊರೊನಾಗೆ ಗ್ಲೆನ್ ಮಾರ್ಕ್…

263 ಕೋಟಿ ರೂ. ಸೇತುವೆ: 29 ದಿನಕ್ಕೇ ಕುಸಿದು ನದಿಗೆ ಬಿತ್ತು!

263 ಕೋಟಿ ರೂ. ವೆಚ್ಚದಲ್ಲಿ ನದಿ ಮೇಲೆ ನಿರ್ಮಿಸಿದ್ದ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಬುಧವಾರ ಧಡಾರನೆ ಕುಸಿದು ನದಿಯೊಳಕ್ಕೆ ಬಿದ್ದಿದೆ!

ಪ್ರಧಾನಿ ನರೇಂದ್ರ ಮೋದಿ ಅವರ ಸದ್ಯದ ಆಸ್ತಿ ಎಷ್ಟು ಗೊತ್ತಾ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷಕ್ಕಿಂತಲೂ ಈ ವರ್ಷ ಶ್ರೀಮಂತರಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಾಗಿದೆ. ಈ ವರ್ಷ ಅವರ ಆಸ್ತಿಯ ಮೌಲ್ಯ ರೂ. 36 ಲಕ್ಷ ಹೆಚ್ಚಳವಾಗಿದೆ.