ನವದೆಹಲಿ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭವಿಷ್ಯ ನುಡಿಯದಂತೆ ಆಯೋಗ ಎಚ್ಚರಿಕೆ ನೀಡಿದೆ.

2020ರ ಅ. 28 ರಂದು ಬೆಳಿಗ್ಗೆ 7 ಹಾಗೂ 7ರಂದು ಸಂಜೆ 6.30ರ ನಡುವಿನ ಅವಧಿಯಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಲೇಖನ ಪ್ರಸಾರ ಮಾಡಬಾರದು ಎಂದು ಮಾಧ್ಯಮಗಳಿಗೆ ಆಯೋಗ ತಿಳಿಸಿದೆ. ಬಿಹಾರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಅ. 28ರಿಂದ ಆರಂಭವಾಗಲಿದೆ.


ಬಿಹಾರ ಚುನಾವಣೆ ಸಂದರ್ಭದಲ್ಲಿ ಜ್ಯೋತಿಷಿ, ವಿಶ್ಲೇಷಕರ ಮುನ್ಸೂಚನೆ, ಸಂಖ್ಯಾ ಶಾಸ್ತ್ರಜ್ಞರು, ವಿಶ್ಲೇಷಕರ ಮೂಲಕ ಸೋಲು – ಗೆಲುವಿನ ಲೆಕ್ಕಾಚಾರದ ಕುರಿತು ಪ್ರಸಾರ ಮಾಡಬಾರದು ಎಂದು ಆಯೋಗ ತಿಳಿಸಿದೆ.


ಇದಕ್ಕೂ ಮುನ್ನ ಆಯೋಗವು ಇಂತಹ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎಲೆಕ್ಟ್ರಾನಿಕ್ ಮತ್ತು ಮುದ್ರಣಗಳು ಮುಕ್ತ, ನ್ಯಾಯಸಮ್ಮತ ಚುನಾವಣೆಗಾಗಿ ಇಂಥಹ ಕಾರ್ಯಕ್ರಮ ಪ್ರಸಾರ ಮಾಡುವುದನ್ನು ತಡೆಯಬೇಕು, ಯಾವುದೇ ವ್ಯಕ್ತಿ ಯಾವುದೇ ಮಾದರಿಯಲ್ಲಿ ಮತಗಟ್ಟೆ ಸಮೀಕ್ಷೆ ನಡೆಸಬಾರದು.

ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅದನ್ನು ಪ್ರಕಟಿಸಲು ಅಥವಾ ಪ್ರಚಾರ ಮಾಡಲು ಪ್ರಯತ್ನಿಸಬಾರದು ಎಂದು ಚುನಾವಣಾ ಆಯೋಗ ಘೋಷಿಸಿದೆ.

Leave a Reply

Your email address will not be published. Required fields are marked *

You May Also Like

ಅರ್ಜುನ ಪ್ರಶಸ್ತಿ ಪಡೆಯಬೇಕಾದರೆ ಯಾವ ಪದಕ ಗೆಲ್ಲಬೇಕು : ಪ್ರಧಾನಿಗೆ ಸಾಕ್ಷಿ ಪ್ರಶ್ನೆ

ಕೇಂದ್ರ ಕ್ರೀಡಾ ಸಚಿವಾಲಯ ಈ ಬಾರಿಯ ಅರ್ಜುನ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಆದರೆ, ಎಲ್ಲರೂ ನಿರೀಕ್ಷೆ ಮಾಡಿದ್ದ ಸಾಕ್ಷಿ ಮಲಿಕ್ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ಹೆಸರುಗಳು ಮಾತ್ರ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ನಾನು ಅರ್ಜುನ ಪ್ರಶಸ್ತಿ ಪಡೆಯಬೇಕಾದರೆ ಯಾವ ಪದಕ ಗೆಲ್ಲಬೇಕು ಎಂದು ಪ್ರಧಾನಿ ಮೋದಿ ಅವರನ್ನು ಸಾಕ್ಷಿ ಪ್ರಶ್ನಿಸಿದ್ದಾರೆ.

ನಾಲ್ಕ ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ!

ನವದೆಹಲಿ : ನಾಲ್ಕು ಚಕ್ರದ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಹತ್ರಾಸ್ ಸಂತ್ರಸ್ತೆ ಕುಟುಂಬ ಭೇಟಿಗೆ ರಾಹುಲ್ ಸಜ್ಜು

ಉತ್ತರಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ತರ ಭೇಟಿಗೆ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೆರಳಲಿದ್ದಾರೆ. ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿರುದ್ಧ ದೇಶಾದ್ಯಂತ ವಿಪಕ್ಷಗಳು, ದಲಿತಪರ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು ಮತ್ತು ಜಾಲತಾಣಗಳಲ್ಲಿ ಕೂಡ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸಿಎಂ ಗೆಹ್ಲೋಟ್ V/s ಡಿಸಿಎಂ ಪೈಲಟ್: ರಾಜಸ್ತಾನ ಸರ್ಕಾರ ಕೆಡವಲು ಆಪರೇಷನ್ ಕಮಲ

ರಾಜಸ್ತಾನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ದೊಡ್ಡ ಆಫರ್ ನೀಡಿತ್ತು ಎಂದು 20 ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ. ಡಿಸಿಎಂ ಸಚೀನ್ ಪೈಲಟ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.