ಮುಂಬಯಿ : ನಟಿ ಕಂಗನಾ ರಣಾವತ್ ಅವರ ವಿರುದ್ಧ ಡವ್ ರಾಣಿ ರಾಖಿ ಸಾವಂತ್ ಮತ್ತೊಮ್ಮೆ ಮುಗಿ ಬಿದ್ದಿದ್ದಾರೆ. ಈ ಬಾರಿ ಮಹಾರಾಷ್ಟ್ರ ಸರ್ಕಾರ ಹಾಗೂ ಸಿಎಂ ಉದ್ಧವ್ ಠಾಕ್ರೆ ಅವರ ಕ್ಷಮೆ ಕೇಳಬೇಕು ಎಂದು ನಟಿ ರಾಖಿ ಸೂಚಿಸಿದ್ದಾರೆ.

ನಟಿ ಕಂಗನಾ ತನ್ನ ವೈಯಕ್ತಿಕ ಕಾರಣಕ್ಕೆ ಸುಶಾಂತ್ ಸಾವನ್ನು ಬಳಸಿಕೊಂಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಅವರು ಹೇಳಿದ್ದೆಲ್ಲ ಸುಳ್ಳು ಎಂಬುವುದು ಈಗ ಸತ್ಯವಾಗಿದೆ. ಹೀಗಾಗಿ ಕೂಡಲೇ ನಟ ಸುಶಾಂತ್ ಅವರ ಅಭಿಮಾನಿಗಳು ಹಾಗೂ ಮಹಾ ಸರ್ಕಾರದ ಕ್ಷಮೆ ಯಾಚಿಸಬೇಕು ಎಂದು ರಾಖಿ ಹೇಳಿದ್ದಾರೆ.
ಅಲ್ಲದೇ, ನಿರ್ಮಾಪಕ ಕರಣ್ ಜೋಹರ್, ಹಿರಿಯ ನಟಿ ಊರ್ಮಿಳಾ ಮಾತೊಂಡ್ಕರ್, ದೀಪಿಕಾ ಪಡುಕೋಣೆ ಸೇರಿದಂತೆ ಎಲ್ಲ ಸೆಲೆಬ್ರಿಟಿಗಳಲ್ಲಿಯೂ ಕ್ಷಮೆ ಯಾಚಿಸಬೇಕು.

ನಿನ್ನ ಬಗ್ಗೆ ನನಗೆ ಅನುಕಂಪ ಇದೆ. ರಾಜಕೀಯ ಲಾಭ ಪಡೆದುಕೊಳ್ಳಲು ನೀನು ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದರೆ, ನಿನ್ನ ಎಲ್ಲ ಕಾರ್ಯಗಳು ವಿಫಲವಾಗಿವೆ. ನಿನಗೆ ಇನ್ನು ಮುಂದೆ ಯಾವುದೇ ಸಿನಿಮಾ ಅವಕಾಶಗಳು ಸಿಗುವದಿಲ್ಲ. ನಿನಗೆ ಹೋರಾಟ ಎಂಬುವುದು ಇಷ್ಟ ಇದ್ದರೆ, ಗಡಿಯಲ್ಲಿ ಹೋಗಿ ಸೇವೆ ಸಲ್ಲಿಸು ಎಂದು ರಾಖಿ, ಕಂಗನಾ ವಿರುದ್ಧ ಏಕವಚನದಲ್ಲಿಯೇ ಆಕ್ರೋಶ ಹೊರ ಹಾಕಿದ್ದಾರೆ.

ಈ ಹಿಂದೆಯೂ ಕಂಗನಾ ವಿರುದ್ಧ ಗುಡುಗಿದ್ದ ರಾಖಿ, ಎಲ್ಲ ನಿರ್ಮಾಪಕರು, ನಿರ್ದೇಶಕರು ಕೆಟ್ಟವರಿದ್ದಾರೆ. ನಿನ್ನ ತಲೆಯ ಮೇಲೆ ಕೊಹಿನೂರು ವಜ್ರ ಇದೆಯಾ? ನಿನ್ನ ಹೊರತು ಬಾಲಿವುಡ್‍ ನಲ್ಲಿ ಇರುವವರೆಲ್ಲ ಕೆಟ್ಟವರಾ? ಕಂಗನಾಳನ್ನು ಬಾಲಿವುಡ್ ನಿಂದ ಬಾಯ್ ಕಾಟ್ ಮಾಡಿ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

You May Also Like

ಮರ್ಯಾದೆಗೇಡು ಹತ್ಯೆ: ಮರ್ಡರ್ ಸಿನಿಮಾ ಪೋಸ್ಟರ್ ರಿಲೀಜ್ ಮಾಡಿದ RGV

ಮರ್ಯಾದೆಗೇಡು ಹತ್ಯೆ ಕುರಿತ ಸಿನಿಮಾ ಮರ್ಡರ್ ನ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ.…

ತ್ರಿಭಾಷಾ ಸೂತ್ರದ ಕಿಡಿಗೆ ಪವರ್ ಉತ್ತರವಿದು!

ತ್ರಿಭಾಷಾ ಸೂತ್ರ ವಿರೋಧಿಸಿ ದ್ವಿಭಾಷಾ ಸೂತ್ರಕ್ಕೆ ಬೆಂಬಲಿಸುವಂತೆ ಕಳೆದ ಕೆಲವು ದಿನಗಳಿಂದ ಟ್ವಿಟರ್ ಅಭಿಯನಾ ನಡೆಯುತ್ತಿದೆ. ಈ ಅಭಿಯಾನಕ್ಕೆ ತಾರೆಯರು ಕೂಡ ಸ್ಪಂದಿಸಿದ್ದಾರೆ. ಇದಕ್ಕೆ ಸಾಥ್ ನೀಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಡಾ. ರಾಜ್ ಕುಮಾರ್ ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

ನಟಿ ನಯನತಾರಾ ಅವರ ಮತ್ತೊಂದು ಲವ್ ಸ್ಟೋರಿ ಇದು!!

ನಟಿ ನಯನತಾರಾ ಲವ್ ಸ್ಟೋರಿಗಳ ಮೂಲಕವೇ ಹೆಚ್ಚು ಸುದ್ದಿಯಾದವರು. ತಮ್ಮ ಹಿಂದಿನ ಲವ್ ಸ್ಟೋರಿಗಳನ್ನು ಮರೆತು ಇದೀಗ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ.

'ಲಾ' ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಟಿ ರಾಗಿಣಿ ಚಂದ್ರನ್‌

ಕನ್ನಡದ ʻಲಾʼ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರದ ನಾಯಕಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17…