ಲಕ್ನೋ: ಹತ್ರಾಸ್ ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಎಸ್ಪಿಪಗೆ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯು ಸೆ. 7ರಂದು ಜೈಲಿನಿಂದಲೇ ಹತ್ರಾಸ್ ಎಸ್ ಪಿಗೆ ಪತ್ರ ಬರೆದಿದ್ದಾನೆ.

ಸಂದೀಪ್ ಸೇರಿದಂತೆ ಇನ್ನುಳಿದ ಮೂವರು ಅಪರಾಧಿಗಳು ಅದಕ್ಕೆ ಸಹಿ ಮಾಡಿದ್ದಾರೆ. ಪತ್ರದಲ್ಲಿ ಆಕೆಯ ತಾಯಿ ಮತ್ತು ಸೋದರನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಯುವತಿ ಜೊತೆ ನನ್ನ ಸ್ನೇಹವಿತ್ತು. ಆದರೆ, ನಮ್ಮಿಬ್ಬರ ಸ್ನೇಹ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಘಟನೆಯ ದಿನ ನಾನು ಸ್ಥಳದಲ್ಲಿದ್ದೆ. ಆದರೆ, ಯುವತಿ ತಾಯಿ ಮತ್ತು ಸಹೋದರ ನನ್ನನ್ನು ಮನೆಗೆ ಕಳುಹಿಸಿದ್ದರು. ಆ ನಂತರ ನನ್ನನ್ನು ಆರೋಪಿಯೆಂದು ಬಂಧಿಸಿ ಜೈಲಿಗೆ ಕರೆತರಲಾಯಿತು. ಯುವತಿಯ ಮೇಲೆ ಆಕೆ ತಾಯಿ ಮತ್ತು ಸೋದರ ಹಲ್ಲೆ ನಡೆಸಿದ್ದರಿಂದ ಅವಳು ಸಾವನ್ನಪ್ಪಿದ್ದಾಳೆ. ಆದರೆ, ಈ ಪ್ರಕರಣವನ್ನು ನಮ್ಮ ಮೇಲೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನಾವಿಬ್ಬರು ಸ್ನೇಹ ಇದ್ದ ಕಾರಣ ಪೋನ್ ನಲ್ಲಿ ಮಾತನಾಡುತ್ತಿದ್ದೇವು. ಹೊಲದಲ್ಲಿ ನನ್ನ ಜೊತೆಗಿನ ಸ್ನೇಹದ ವಿಚಾರವಾಗಿ ಆಕೆಯ ಮೇಲೆ ಕುಟುಂಬಸ್ಥರು ಹಲ್ಲೆ ನಡೆಸಿರುವ ವಿಚಾರ ನನಗೆ ತಿಳಿಯಿತು. ಹಲ್ಲೆ ಆರೋಪದಿಂದ ತಪ್ಪಿಸಿಕೊಳ್ಳಲು ಯುವತಿಯ ತಾಯಿ ಮತ್ತು ಸಹೋದರ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಓರ್ವ ಉಗ್ರನನ್ನು ಬಲಿ ಪಡೆದ ಸೇನೆ

ಜಮ್ಮು ಮತ್ತು ಕಾಶ್ಮೀರದ ಅವಂತಿಪೊರಾದಲ್ಲಿ ಓರ್ವ ಉಗ್ರನನ್ನು ಭಾರತೀಯ ಸೇನೆ ಬಲಿ ಪಡೆದಿದೆ. ಶರ್ಷಾಲಿ ಖ್ರೂ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಮಾಹಿತಿಯ ಮೇರೆಗೆ ಸೇನಾಪಡೆ ಕಾರ್ಯಾಚರಣೆ ನಡೆಸಿತ್ತು..

ಪುಟ್ಟ ಕಂದಮ್ಮಳ ಮೇಲೆ ಪಾಪಿ ಪೊಲೀಸ್ ಈ ಕೃತ್ಯ ಎಸಗಿದನೇ?

ರಾಯ್ಪುರ : ಕಂದಮ್ಮನ ಮೇಲೆ ಪಾಪಿ ಪೊಲೀಸ್ ಒಬ್ಬ ಸಿಗರೇಟ್ ನಿಂದ ಸುಟ್ಟು ಚಿತ್ರ ಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್ ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನದಲ್ಲಿ 50 ಪಾಸಿಟಿವ್ ಪ್ರಕರಣಗಳು…

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ – ನಟಿಮಣಿಯರ ರಕ್ಷಣೆ!

ಮುಂಬಯಿ : ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ಓರ್ವ ಸಿನಿಮಾ ನಟಿ ಸೇರಿದಂತೆ ಮೂವರು ಧಾರವಾಹಿ ನಟಿಯರನ್ನು ರಕ್ಷಿಸಲಾಗಿದೆ.