ನವದೆಹಲಿ : ಕೊರೊನಾ ಹಾವಳಿಯಿಂದ ಇಡೀ ಜಗತ್ತೇ ಇಂದು ಆತಂಕದಲ್ಲಿ ಕಾಲ ಕಳೆಯುತ್ತಿದೆ. ಇದು ಉದ್ಯೋಗದ ಮೇಲೆಯೂ ಪರಿಣಾಮ ಬೀರಿದೆ. ಇದರಿಂದಾಗಿ ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಭಾರತದ ಶೇ. 41ಕ್ಕಿಂತ ಹೆಚ್ಚಿನ ಕಾರ್ಮಿಕರು ಮನೆಯಿಂದಲೇ ಕೆಲಸವಾಗಲಿ, ಕಚೇರಿಯ ಕೆಲಸವಾಗಲಿ ಉದ್ಯೋಗದಲ್ಲಿ ತುಂಬಾ ಒತ್ತಡ ಎದುರಿಸುತ್ತಿದ್ದಾರೆ ಎಂದು ಮೈಕ್ರೋಸಾಫ್ಟ್ ಅಧ್ಯಯನವೊಂದು ಬಹಿರಂಗಪಡಿಸಿದೆ.

ಕೊರೊನಾದಿಂದಾಗಿ ಸದ್ಯ ಹಲವು ಕಳೆದ ಆರು ತಿಂಗಳಲ್ಲಿ ಭಾರತದ ಉದ್ಯೋಗದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಭಾರತದ ಮೂರನೇ ಒಂದು ಭಾಗದಷ್ಟು ಕಾರ್ಮಿಕರಿಗೆ ಕೆಲಸದ ಕುರಿತ ಒತ್ತಡಗಳು ಹೆಚ್ಚಾಗುತ್ತಿವೆ.
ಕೊರೊನಾದಿಂದಾಗಿ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಅಲ್ಲದೇ, ಹಲವರು ಕೆಲಸ ಕಳೆದುಕೊಂಡು ಬೇರೆಡೆ ಕೆಲಸಕ್ಕೆ ತೆರಳಿದ್ದಾರೆ. ಹೀಗಾಗಿ ಹೊಸ ಕೆಲಸದ ಪರಿಸ್ಥಿತಿಯ ಒತ್ತಡಗಳು ಅವರನ್ನು ಕಾಡುತ್ತಿದೆ.

ಆಸ್ಟ್ರೇಲಿಯಾ, ಜಪಾನ್, ಭಾರತ ಮತ್ತು ಸಿಂಗಾಪುರ ಸೇರಿದಂತೆ ಎಂಟು ದೇಶಗಳಲ್ಲಿ ಈ ಅಧ್ಯಯನ ಕೈಗೊಳ್ಳಲಾಗಿತ್ತು. ಮೊದಲ ಸಾಲಿನ ಕಾರ್ಮಿಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಜಗತ್ತಿನ ವಿಷಯವನ್ನು ಗಮನಿಸುವುದಾದರೆ, ಏಷ್ಯಾದಲ್ಲಿಯೇ ಉದ್ಯೋಗ ಆತಂಕ ಹೆಚ್ಚಾಗುತ್ತಿದೆ. ಭಾರತದಲ್ಲಿ ಈ ಪ್ರಮಾಣ ಶೇ. 29 ರಷ್ಟಿದೆ. ಒತ್ತಡಕ್ಕೆ ಒಳಗಾದವರು ಧ್ಯಾನ, ಯೋಗಗಳ ಮೊರೆ ಹೋಗಿ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ನಿಮ್ಮ ಡೇಟಾ ಇದ್ದರೆ ಕೂಡಲೇ ಸೇವ್ ಮಾಡಿಕೊಳ್ಳಿ

ಫೆ.24 ರಿಂದ ಆಚೆಗೆ ತನ್ನ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ತನ್ನ ಬಳಕೆದಾರರಿಗೆ ಇ-ಮೇಲ್ ಮುಖಾಂತರ ಈಗಾಗಲೇ ತಿಳಿಸಿದೆ.

ಒಳ್ಳೆಯ ಅವಕಾಶಗಳು ಸಿಕ್ಕರೆ ಕನ್ನಡದಲ್ಲಿಯೂ ನಟಿಸುವೆ – ಸಂಯುಕ್ತಾ!

ಬೆಂಗಳೂರು : ಲಾಕ್ ಡೌನ್ ಇದ್ದರೂ ಅಭಿಮಾನಿಗಳೊಂದಿಗೆ ತಮ್ಮ ಒಡನಾಟ ಇಟ್ಟುಕೊಂಡಿರುವ ನಟಿ ಸಂಯುಕ್ತಾ ಹೆಗ್ಡೆ…

ಕೊರೊನಾ ದುಷ್ಪರಿಣಾಮ: ನಗರಗಳ 14 ಕೋಟಿ ಜನರ ಬದುಕು ದುಸ್ತರ

ದೆಹಲಿ: ದೇಶಾದ್ಯಂತ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ದುಷ್ಪರಿಣಾಮ ನಗರ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರ ಮೇಲೆ ಹೆಚ್ಚಾಗಿದೆ.…

ಯುದ್ಧಕ್ಕೆ ಸಿದ್ಧವಾಗಿರುವಂತೆ ಸೂಚಿಸಿದ ರಕ್ಷಣಾ ಸಚಿವ!

ನವದೆಹಲಿ: ಲಡಾಖ್ ನಲ್ಲಿ ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಸಿಬ್ಬಂದಿ…