ತುಮಕೂರು: ಇಲ್ಲಿನ ವಿಶ್ವ ವಿದ್ಯಾಲಯ ವ್ಯಾಪ್ತಿಯ ಬಿಇಡಿ., ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್ ಪರಿಕ್ಷೇಗಳನ್ನು ರದ್ದುಗೊಳಿಸಿ ಮುಂದಿನ ಸೆಮಿಸ್ಟರ್ ಗೆ ತೇರ್ಗಡೆ ಮಾಡಬೇಕು ಎಂದು ಒತ್ತಾಯಿಸಿ SFI ನಿಂದ ತುಮಕೂರು ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ಮಣಿದ ತುಮಕೂರು ವಿವಿಯ ಕುಲಸಚಿವ (ಪರೀಕ್ಷಾಂಗ) ಕೊಟ್ರೇಶ್ ಪ್ರತಿಭಟನೆಯ ಸ್ಥಳದಲ್ಲೇ ನಿರ್ಧಾರ ತೆಗೆದುಕೊಂಡು, ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.

ಈ ಮೊದಲು ಈ ತಿಂಗಳ ಕೊನೆಯ ದಿನಾಂಕದೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಆದೇಶ ಮತ್ತು ಅಕ್ಟೋಬರ್ -19 ರಿಂದ ಬಿಇಡ್ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ತುಮಕೂರು ವಿವಿ ನಿರ್ಣಯಿಸಿತ್ತು. ಎಸ್ಎಫ್ಐ ಹೋರಾಟದಿಂದ ಈ ಆದೇಶಗಳನ್ನು ವಿಶ್ವವಿದ್ಯಾಲಯ ವಾಪಸ್ ಪಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ SFI ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ಇದು #SFI_ಹೋರಾಟಕ್ಕೆ ಸಂದ ಜಯ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಸ್ ಎಫ್ ಐ ಜಿಲ್ಲಾದ್ಯಕ್ಷ ಈ ಶಿವಣ್ಣ, ಡಿವೈಎಫ್ಐ ಮುಖಂಡ ಜಿ.ದರ್ಶನ್, ಬಿಇಡಿ ವಿದ್ಯಾರ್ಥಿಗಳಾದ ಲೋಕೇಶ್ ಸಿ, ಸೌಂದರ್ಯ, ಆಶಾ, ಕಿರಣ, ತಿಲಕ, ಮಹೇಶ್, ಪುಟ್ಟರಾಜು, ಹನುಮಂತರಾಜು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಡಿಪ್ಲೋಮಾ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಇದೇ ತಿಂಗಳ 15-07-2020 ರಿಂದ 05-08-2020 ರವರೆಗೆ ನಿಗದಿ ಪಡಿಸಲಾಗಿದ್ದ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳನ್ನು…

ರಾಷ್ಟ್ರಮಟ್ಟದ ಟಿಸಿಇ ನೆಕ್ಷಾಥಾನ್ ಕೊಡಿಂಗ್ ಸ್ಪರ್ಧೆ

ಗದಗ: ನಗರದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನಲ್ಲಿ 3 ಮತ್ತು   4ನೇ ಡಿಸೆಂಬರ್ 2021 ರಂದು ರಾಷ್ಟ್ರಮಟ್ಟದ…

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ಮಾದರಿ ಬದಲಾವಣೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಜೂ.21 ರಿಂದ ಜುಲೈ 5ರ ವರೆಗೆ ಪರೀಕ್ಷೆ ನಡೆಯಲಿದೆ.

ಕೆ.ವಿ.ಹಂಚಿನಾಳ ಶಿಕ್ಷಣ ಸಂಸ್ಥೆಯಲ್ಲಿ ಕನಕ ಜಯಂತಿ ಆಚರಣೆ

ಉತ್ತರಪ್ರಭ ಗದಗ: ಕೆ.ವಿ‌.ಹಂಚಿನಾಳ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜನಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಈ…